ಮಾಜಿ ಸಚಿವರಾದ ಜಿಟಿಡಿ, ಅಸ್ನೋಟಿಕರ್ ಜೆಡಿಎಸ್ ಬಿಡ್ತಾರಾ? ಸ್ಪಷ್ಟನೆ ಕೊಟ್ಟ ದೇವೇಗೌಡ
ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಾಸಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ತೊರೆಯುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹಾಸನ, (ಫೆ.25): ಜೆಡಿಎಸ್ ಮಾಜಿ ಶಾಸಕ ಮಧುಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ ಚರ್ಚೆಗಳು ಆಗಿವೆ.
ಇನ್ನು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಹೌದು...ಈ ಇಬ್ಬರು ಮಾಜಿ ಸಚಿವರುಗಳು ಜೆಡಿಎಸ್ ತೊರೆಯುವ ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಇದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಳ್ಳಿಹಾಕಿದ್ದಾರೆ.
ಜೆಡಿಎಸ್‌ನಿಂದ ದೂರ ಉಳಿದ ದೇವೇಗೌಡ ಉಚ್ಛಾಟನೆ ಸುಳಿವು ಕೊಟ್ಟ ಎಚ್‌ಡಿಕೆ
ಇನ್ನು ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿರುವ ದೇವೇಗೌಡ್ರು, ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಾಸಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ಬಿಡುವ ಮಾತೇ ಇಲ್ಲ. ಜಿ.ಟಿ. ದೇವೇಗೌಡ ಅವರು ನನ್ನ ಜೊತೆ ಮಾತನಾಡಿದ್ದಾರೆ. ಇಲ್ಲ ಸಲ್ಲದ ಊಹಾಪೋಹ ಬೇಡ. ಅವರು ಯಾರಾದರೂ ಪಕ್ಷ ಬಿಡುವುದಾಗಿ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತ ಬಳಿಕ ಒಂದೂವರೆ ವರ್ಷದಿಂದ ಪಕ್ಷದ ಕಚೇರಿಗೆ ಬರುತ್ತಿಲ್ಲ. ನಾನೂ ಅನೇಕ ಬಾರಿ ಕರೆದರೂ ಬಂದಿಲ್ಲ. ಅವರನ್ನ ಶಾಸಕರನ್ನಾಗಿ ಮಾಡಲು ಕುಮಾರಸ್ವಾಮಿ ಪಟ್ಟ ಕಷ್ಟ ಏನೆಂಬುದು ಅರಿಯಬೇಕು ಎಂದರು.
2023ರೊಳಗೆ ಪಕ್ಷವೇ ಇರುವುದಿಲ್ಲ ಅಂತ ಕೆಲವರು ಹೇಳಿದ್ದಾರೆ. ಆದರೆ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಪಕ್ಷ ಸಂಘನೆಗೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.