ಬೆಂಗಳೂರು/ ಬಾದಾಮಿ(ಡಿ.30): ಕರ್ನಾಟಕ ಕಾಂಗ್ರೆಸ್ ಗೆ ಇದು ಕ್ಕೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ  ಬಿಜೆಪಿ  ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. 

ಸೋಶಿಯಲ್ ಮೀಡಿಯಾ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿ , ಇಂತಹ ಕೃತ್ಯಗಳು ಖಂಡನೀಯ.  ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಎಂದೂ  ಕಾಂಗ್ರೆಸ್  ಕೈಬಿಟ್ಟಿಲ್ಲ. ರೈತಪರ,ಬಡವರ ಪರ ಮತ್ತು ಗ್ರಾಮಭಾರತದ ಪರವಾಗಿರುವ ಕಾಂಗ್ರೆಸ್ ನೀತಿ ಮತ್ತು ಕಾರ್ಯಕ್ರಮಗಳು ಇದಕ್ಕೆ ಕಾರಣ.  ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಭರ್ಜರಿ ಜಯ

ಇನ್ನೊಂದು ಕಡೆ ತಮ್ಮ ಕ್ಷೇತ್ರ  ಬಾದಾಮಿಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ಸಂಭ್ರವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ರೈತವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಿದ್ದು  ಕಾಂಗ್ರೆಸ್  ಬೆಂಬಲಿತರು ಗೆಲುವಿನ ನಗೆ ಬೀರಿದ್ದಾರೆ ಎಂದಿದ್ದಾರೆ.