ಬೆಂಗಳೂರು, (ಜ.13): ಹೊಸ ಇಂದು (ಬುಧವಾರ) 7 ನೂತನ ಸಚಿವರುಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಪುಟ ಸೇರ್ಪಡೆಯಾದರು.

 ರಾಜಭವನದಲ್ಲಿ ನಡೆದ ಸರಳ ಸಮಾರಭದಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಆರ್.ಶಂಕರ್, ಅಂಗಾರ, ಅರವಿಂದ್ ಲಿಂಬಾವಳಿ ಹಾಗೂ ಸಿ.ಪಿ.ಯೋಗೇಶ್ವರ್ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಯಡಿಯೂರಪ್ಪ ಸಂಪುಟದ ನೂತನ ಸಾರಥಿಗಳ ಪ್ರಮಾಣ ವಚನದ ಫೋಟೋಗಳು

ಆದ್ರೆ, ಇವರಿಗೆ ಯಾವ ಖಾತೆ ಎನ್ನುವುದನ್ನು ಇನ್ನೂ ಕೊಟ್ಟಿಲ್ಲ. ಖಾತೆಗಾಗಿ ಲಾಬಿಗಳು ಸಹ ಶುರುವಾಗಿದೆ. ಇದಕ್ಕೂ ಮೊದಲು ನೂತನ ಸಚಿವರುಗಳಿಗೆ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆ ಮಾಡಲಾಗಿದೆ. 

 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ, ಯಾರಿಗೆ ಯಾವ ಸಂಖ್ಯೆ ಕೊಠಢಿ ಎನ್ನುವುದು ಈ ಕೆಳಗಿನಂತಿದೆ.

ಕೊಠಡಿ ಹಂಚಿಕೆ
ಉಮೇಶ್ ಕತ್ತಿ - 329 -329ಎ - ವಿಧಾನಸೌಧ
* ಅರವಿಂದ ಲಿಂಬಾವಳಿ - 344-344ಎ - ವಿಧಾನಸೌಧ
* ಎಂಟಿಬಿ ನಾಗರಾಜ್ - 330-330ಎ - ವಿಧಾನಸೌಧ
* ಮುರುಗೇಶ್ ನಿರಾಣಿ - 307-307ಎ - ವಿಧಾನಸೌಧ
* ಸಿ.ಪಿ.ಯೋಗೇಶ್ವರ್ - 336-336ಎ - ವಿಧಾನಸೌಧ
* ಎಸ್.ಅಂಗಾರ - 252-253ಎ - ವಿಧಾನಸೌಧ
* ಆರ್.ಶಂಕರ್ - 305-305ಎ - ವಿಧಾನಸೌಧ