Asianet Suvarna News Asianet Suvarna News

ಬಿಎಸ್‌ವೈ ಕೈಗೆ ಬಿಜೆಪಿ ನಾಯಕತ್ವ ನೀಡಿ: ರೇಣುಕಾಚಾರ್ಯ

ವಿಜಯದಶಮಿ ಹಬ್ಬದ ದಿನ ಹೇಳುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಬೆನ್ನಿಗೆ ನಿಲ್ಲುತ್ತಾರೆಂಬುದನ್ನು ಅರಿತು, ಯಡಿಯೂರಪ್ಪನವರಂತಹ ಜಾತ್ಯತೀತ, ಸಮರ್ಥ ನಾಯಕನ ಕೈಗೆ ಬಿಜೆಪಿ ನಾಯಕತ್ವ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.

Give BJP leadership to BS Yeddyurappa says MP Renukacharya at davanagere rav
Author
First Published Oct 25, 2023, 3:10 AM IST

ದಾವಣಗೆರೆ (ಅ.25): ವಿಜಯದಶಮಿ ಹಬ್ಬದ ದಿನ ಹೇಳುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಬೆನ್ನಿಗೆ ನಿಲ್ಲುತ್ತಾರೆಂಬುದನ್ನು ಅರಿತು, ಯಡಿಯೂರಪ್ಪನವರಂತಹ ಜಾತ್ಯತೀತ, ಸಮರ್ಥ ನಾಯಕನ ಕೈಗೆ ಬಿಜೆಪಿ ನಾಯಕತ್ವ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರ ನೇತೃತ್ವದಲ್ಲೇ ಲೋಕಸಭೆ ಚುನಾವಣೆ-2024ಕ್ಕೆ ಹೋಗುವುದು ಸೂಕ್ತ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಓಡಾಟವಂತೂ ನನಗೆ ಹೊಸದಲ್ಲ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.

 

ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಉದ್ದೇಶ ನಮ್ಮೆಲ್ಲರದ್ದೂ ಆಗಿದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರಂತಹ ಜಾತ್ಯತೀತ, ಸಮರ್ಥ ನಾಯಕತ್ವ ಇಂದು ಪಕ್ಷಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಪಕ್ಷ ಸಂಘಟನೆ, ಮತ್ತೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ವರಿಷ್ಠರು ನಾಯಕತ್ವವನ್ನು ಯಡಿಯೂರಪ್ಪ ಕೈಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಮೊದಲು ಹೋಗಬೇಕು. ಈಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರನ್ನು ಕಡೆಗಣಿಸಲಾಯಿತು. ಹೊಸಬರಾದರೂ ಹಳಬರ ಕಾಲು ಏನಾದ್ರೂ ಬಿದ್ದು, ಹೋಗಿದ್ದರಾ ಎಂದು ಪ್ರಶ್ನಿಸಿದರು.

ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದವರು ಯಡಿಯೂರಪ್ಪ. ಇಂತಹ ಸದೃಢ, ಸಮರ್ಥ ನಾಯಕನ ನಾಯಕತ್ವ ರಾಜ್ಯದಲ್ಲಿ ಇಂದು ಬಿಜೆಪಿಗೆ ಬೇಕಾಗಿದೆ. ಯಾವುದೇ ಕಾರಣಕ್ಕೂ ಬಿ.ಎಸ್‌.ಯಡಿಯೂರಪ್ಪನವರನ್ನು ಬದಲಾವಣೆ ಮಾಡುವುದು ಬೇಡವೆಂದು ಸಾಕಷ್ಟು ಒತ್ತಡ ಹಾಕಿದ್ದೆವು. ಆದರೆ, ಕೆಲ ನಾಯಕರರು ಬಿಎಸ್‌ವೈಗೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ

ಒಳ ಮೀಸಲಾತಿ ಅವಶ್ಯಕತೆ ಏನಿತ್ತು?

ಒಳ ಮೀಸಲಾತಿ ಅವಶ್ಯಕತೆಯಾದರೂ ಏನಿತ್ತು? ಚುನಾವಣೆ ಮುಂದಿಟ್ಟುಕೊಂಡು, ಒಳ ಮೀಸಲಾತಿಗೆ ಕೈಹಾಕಿದ್ದು ಪಕ್ಷ ಬೆಲೆ ತೆರುವಂತಾಯಿತು. ಎಲ್ಲವನ್ನೂ ಒಂದು ವರ್ಷಕ್ಕಿಂತ ಮೊದಲೇ ಹೇಳಬೇಕಿತ್ತು. ಆದರೆ, ಚುನಾವಣೆ ಇನ್ನೊಂದು ವಾರ ಇದ್ದಾಗ ಒಳ ಮೀಸಲಾತಿ ಘೋಷಿಸಿದರು. ಇದರಿಂದ ಪಕ್ಷಕ್ಕೆ ಏನಾಯಿತು ಎಂಬುದೂ ಎಲ್ಲರಿಗೂ ಗೊತ್ತಿರುವ ಸಂಗತಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಆದರೆ, ಅದ್ಯಾವುದೂ ‍ಆಗಲಿಲ್ಲ ಎಂದು ರೇಣುಕಾಚಾರ್ಯ ಬೇಸರ ಹೊರ ಹಾಕಿದರು.
 

Follow Us:
Download App:
  • android
  • ios