ಬೆಂಗಳೂರು, (ಆ.09): ಮಾಜಿ ಸಚಿವ ಜನಾರ್ದನ ರೆಡ್ಡಿ‌ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ನಡುವಿನ ಗೆಳೆತನ ಎಲ್ಲರಿಗೂ ಗೊತ್ತಿರುವುದೆ. ರಾಜಕೀಯವಾಗಿ ಎಷ್ಟೇ ಬೆಳೆದರು ಅದಕ್ಕಿಂತ ಹೆಚ್ಚು ಇವರಿಬ್ಬರು ಕುಚುಕು ಗೆಳೆಯರು.ರಾಜಕೀಯವಾಗಿ ಎಷ್ಟೇ ಬೆಳೆದರು ಅದಕ್ಕಿಂತ ಹೆಚ್ಚು ಇವರಿಬ್ಬರು ಕುಚುಕು ಗೆಳೆಯರು.

ಸರ್ಕಾರಿ ಆಸ್ಪತ್ರೆಗೆ ಸಚಿವ ರಾಮುಲು ದಾಖಲು: ಚಿಕಿತ್ಸೆ ಪಡೆಯುತ್ತಿರೋ ಫೋಟೋಗಳು ವೈರಲ್

ಇದೀಗ ಸ್ನೇಹಿತ ಶ್ರೀರಾಮುಲುಗೆ ಕೊರೋನಾ ಪಾಸಿಟಿವ್ ದೃಢಟ್ಟಿದ್ದವುದಕ್ಕೆ ಗಾಲಿ ಜನಾರ್ಧನ ರೆಡ್ಡಿಬೇಸರ ವ್ಯಕ್ತಪಡಿಸಿದ್ದು, ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವುದು ಈ ಕೆಳಗಿನಂತಿದೆ.

ರೆಡ್ಡಿ ಬರೆದುಕೊಂಡಿದ್ದು ಇಂತಿದೆ.
ನನ್ನ ಜೀವದ ಗೆಳೆಯ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೊರೋನಾ ದಿಂದ ಬೇಗ ಗುಣಮುಖರಾಗಲಿ..

ನನ್ನ ಆತ್ಮೀಯ ಗೆಳೆಯ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ, ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯ ತಿಳಿದು ಮನಸ್ಸಿಗೆ ತುಂಬಾ ಬೇಜಾರಾಗಿದೆ. 

ಸಚಿವ ಶ್ರೀರಾಮುಲುಗೂ ಕೊರೋನಾ: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ದಾಖಲು

ಗೆಳೆಯ ಶ್ರೀರಾಮುಲು ಅವರು, ರಾಜಕೀಯಕ್ಕೆ ಬರುವ ಮೊದಲು, ಚಿಕ್ಕವರಿದ್ದಾಗಿನಿಂಲೂ ಬಡ ಜನರ ಆರೋಗ್ಯದ ಕುರಿತು ತುಂಬಾ ಕಾಳಜಿ ವಹಿಸುತ್ತಿದ್ದರು. ಯಾವಾಗಲೂ ಜನಪರ ಯೋಚನೆಗಳಿಂದ, ಜನರಿಗೋಸ್ಕರ ಬದುಕಿರುವ ಹಾಗೂ ಬಡಜನರಲ್ಲಿ ದೇವರನ್ನು ಕಾಣುವ ನೀನು, ಆದಷ್ಟು ಬೇಗ ಗುಣಮುಖನಾಗಿ ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.. 

ರಾಜ್ಯದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಾಗಿನಿಂದ ಹಿಡಿದು ಇಲ್ಲಿಯವರೆಗೆ, ರಾಜ್ಯದ ೩೦ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅಧಿಕಾರಿಗಳ ಜೊತೆ ಸಭೆ ನಡೆಸಿ, ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ನಿನಗೆ ಕೊರೋನಾ ವೈರಸ್ ತಗುಲಿರುವುದು ನೀನು ಸಲ್ಲಿಸುತ್ತಿರುವ ಜನ ಸೇವೆಯ ಒಂದು ಭಾಗ ಮಾತ್ರ.

ಜನಪ್ರಿಯ ಆರೋಗ್ಯ ಸಚಿವರಾದ ಗೆಳೆಯ ಬಿ.ಶ್ರೀರಾಮುಲು ಕೊರೋನಾದಿಂದ ಆದಷ್ಟು ಬೇಗ ಗುಣಮುಖರಾಗಿ ಮರಳಲಿ, ನಿರಂತರ ಜನ ಸೇವೆಯನ್ನು ಮಾಡುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ ಎಂದು ಹಾರೈಸುತ್ತೇನೆ.
-  ಗಾಲಿ ಜನಾರ್ಧನ ರೆಡ್ಡಿ..