ಫ್ರಾನ್ಸ್ ಅಧ್ಯಕ್ಷನಿಗೆ ಪತ್ನಿಯಿಂದ ಕಪಾಳಮೋಕ್ಷ ಆಗಿರುವ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ತಮಗಿಂತ 24 ವರ್ಷ ಹಿರಿಯಳನ್ನು ಮದ್ವೆಯಾಗಿರೋ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರೋಚಕ ಲವ್ ಸ್ಟೋರಿ ಕೇಳಿ..
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇದಕ್ಕೆ ಕಾರಣ, ಇವರ ಪತ್ನಿ ಇವರನ್ನು ಎಲ್ಲರ ಎದುರೇ ಕಪಾಳಮೋಕ್ಷ ಮಾಡಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಈ ಕಪಾಳಮೋಕ್ಷದ ಸ್ಟೋರಿ ಹೇಳುವುದಕ್ಕೂ ಮೊದಲು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಮದ್ವೆ ಸ್ಟೋರಿಯನ್ನೊಮ್ಮೆ ಕೇಳಿಬಿಡಿ. ಇವರು ತಮ್ಮ ಪತ್ನಿ ಬ್ರಿಗಿಟ್ಗಿಂತ 24 ವರ್ಷ ಚಿಕ್ಕವರು. ಅರ್ಥಾತ್ ಇವರ ಪತ್ನಿಯೇ 24 ವರ್ಷ ದೊಡ್ಡವರು. ಬ್ರಿಗಿಟ್ ಏಪ್ರಿಲ್ 13, 1953 ರಂದು ಜನಿಸಿದರು ಮತ್ತು ಶಾಲೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ಪಾಠ ಹೇಳುತ್ತಿದ್ದರು. ಮ್ಯಾಕ್ರನ್ ಮತ್ತು ಬ್ರಿಗಿಟ್ ಶಾಲೆಯಲ್ಲಿ ಪ್ರೀತಿ ಹುಟ್ಟಿತ್ತು. ಆ ಸಮಯದಲ್ಲಿ, ಎಮ್ಯಾನುಯೆಲ್ ಮ್ಯಾಕ್ರನ್ ಕೇವಲ 15 ವರ್ಷ ವಯಸ್ಸಿನವರಾಗಿದ್ದರು. ಬ್ರಿಗಿಟ್ಗೆ 39 ವರ್ಷ ವಯಸ್ಸಾಗಿತ್ತು ಮತ್ತು ಮೂರು ಮಕ್ಕಳ ತಾಯಿಯಾಗಿದ್ದರು. ಅವರನ್ನೇ ಮ್ಯಾಕ್ರನ್ ಮದುವೆಯಾಗಿದ್ದರು!
ಬ್ರಿಗಿಟ್ಟೆ 16 ವರ್ಷದವಳಿದ್ದಾಗ ಎಮ್ಯಾನುಯೆಲ್ ಮ್ಯಾಕ್ರನ್ ಮದುವೆಯ ಪ್ರಸ್ತಾಪ ಇಟ್ಟಿದ್ದರು. ಆದರೆ ಮ್ಯಾಕ್ರನ್ ಅವರ ಕುಟುಂಬವು ಈ ಸಂಬಂಧವನ್ನು ಒಪ್ಪಲಿಲ್ಲ. ಆದ್ದರಿಂದ, ಅವರ ಮದುವೆ ಸಾಕಷ್ಟು ವಿವಾದಾತ್ಮಕವಾಯಿತು. ಅವರ ಸಮಾಜದಲ್ಲೂ ಮದುವೆಗೆ ಸಾಕಷ್ಟು ವಿರೋಧವಿತ್ತು. ಮ್ಯಾಕ್ರನ್ ಅವರನ್ನು ಮದುವೆಯಾಗಲು ಬ್ರಿಗಿಟ್ ತನ್ನ ಪತಿಗೆ ವಿಚ್ಛೇದನ ನೀಡಿದರು. 2007 ರಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ 29 ವರ್ಷದವಳಿದ್ದಾಗ ಮತ್ತು ಬ್ರಿಗಿಟ್ಟೆ 54 ವರ್ಷದವಳಿದ್ದಾಗ ಇಬ್ಬರೂ ವಿವಾಹವಾದರು. ಈ ವಿವಾಹ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ನಡೆಯಿತು. 2017 ರಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್ ಅಧ್ಯಕ್ಷರಾದಾಗ, ಬ್ರಿಗಿಟ್ಟೆ ಫ್ರಾನ್ಸ್ ನ ಪ್ರಥಮ ಮಹಿಳೆಯಾದರು. ಅವರು ಇನ್ನೂ ತಮ್ಮ ಪತಿಯ ಸಾರ್ವಜನಿಕ ಜೀವನದಲ್ಲಿ ಬಹಳ ಸಕ್ರಿಯ ಪಾತ್ರವನ್ನು ವಹಿಸುತ್ತಾರೆ ಮತ್ತು ಅವರ ಬಹುತೇಕ ಎಲ್ಲಾ ವಿದೇಶಿ ಭೇಟಿಗಳಲ್ಲಿ ಅವರೊಂದಿಗೆ ಇರುತ್ತಾರೆ.
ಇದೀಗ ಕಪಾಳಮೋಕ್ಷದ ವಿಷಯಕ್ಕೆ ಬರುವುದಾದರೆ, ಅವರು ವಿಮಾನದಿಂದ ಇಳಿಯುವಾಗ ಅವರ ಪತ್ನಿ ಕಪಾಳಮೋಕ್ಷ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೈರಲ್ ವಿಡಿಯೋ ವಿಯೆಟ್ನಾಂನ ರಾಜಧಾನಿ ಹನೋಯ್‌ನಿಂದ ಆಗಿದ್ದು, ಅಲ್ಲಿಗೆ ಫ್ರೆಂಚ್ ಅಧ್ಯಕ್ಷರು ತಮ್ಮ ಪತ್ನಿಯೊಂದಿಗೆ ಭೇಟಿಗೆ ಆಗಮಿಸಿದ್ದರು. ವಿಯೆಟ್ನಾಂನ ಹನೋಯ್‌ನಲ್ಲಿ ಅಧ್ಯಕ್ಷೀಯ ವಿಮಾನದಿಂದ ಹೊರಬರುವಾಗ ಅವರ ಪತ್ನಿ ತಮ್ಮ ಕೈಯಿಂದ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖವನ್ನು ತಳ್ಳುತ್ತಿರುವುದನ್ನು ಕಾಣಬಹುದು. ಅಲ್ಲಿಯೇ ಅವರು ಕೆನ್ನೆಗೆ ಹೊಡೆದಿದ್ದಾರೆ ಎನ್ನುವುದು ತಿಳಿಯುತ್ತದೆ. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ, ಅಧ್ಯಕ್ಷ ಮ್ಯಾಕ್ರನ್ ಇದ್ದಕ್ಕಿದ್ದಂತೆ ಹಿಂದೆ ಸರಿಯುವುದನ್ನು ಮತ್ತು ಅವರ ಪತ್ನಿ ಬ್ರಿಗಿಟ್ ಮ್ಯಾಕ್ರನ್ ಅವರ ಬಾಯಿಯನ್ನು ತಳ್ಳುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಏತನ್ಮಧ್ಯೆ, ಅಧ್ಯಕ್ಷ ಮ್ಯಾಕ್ರನ್ ತಕ್ಷಣವೇ ಕೆಳಗೆ ಪತ್ರಕರ್ತರ ಗುಂಪಿದೆ ಮತ್ತು ಕ್ಯಾಮೆರಾಗಳು ಆನ್ ಆಗಿವೆ ಎಂದು ಅರಿತುಕೊಂಡರು, ಆದ್ದರಿಂದ ಅವರು ಸ್ವಲ್ಪ ನಗುತ್ತಾ, ಕೈ ಬೀಸಿ ನಂತರ ವಿಮಾನದೊಳಗೆ ಅಡಗಿಕೊಂಡರು.
ಇದರ ವಿಡಿಯೋ ವೈರಲ್ ಆಗುತ್ತಲೇ ಅಧ್ಯಕ್ಷ ಕಚೇರಿಯು ಇದನ್ನು ಫೇಕ್ ವಿಡಿಯೋ ಎಂದು ಹೇಳಿತು. ಇದು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ ಎಂದು ಹೇಳಿತು. ಆದರೆ, ನಂತರ ವಿಡಿಯೋದ ಸತ್ಯಾಸತ್ಯತೆಯನ್ನು ದೃಢಪಡಿಸಿದಾಗ ಇದು ನಿಜವಾಗಿರುವ ವಿಡಿಯೋ ಎಂದು ಸಾಬೀತಾಗಿದೆ. ಅದರ ನಂತರ ಫ್ರೆಂಚ್ ಅಧ್ಯಕ್ಷೀಯ ಭವನದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಇದು ಸರಳ "ಗಂಡ-ಹೆಂಡತಿಯ ಜಗಳ" ಎಂದು ಬಣ್ಣಿಸಿತು. ವಿಮಾನದಿಂದ ಇಳಿಯುವಾಗಲೂ, ಅಧ್ಯಕ್ಷ ಮ್ಯಾಕ್ರನ್ ಮತ್ತು ಅವರ ಪತ್ನಿ ಪರಸ್ಪರ ಕೈ ಹಿಡಿಯದೆ ಇಳಿಯುತ್ತಿರುವುದು ಕಂಡುಬಂದಿತು. ಆದರೆ ಈ ಸಮಯದಲ್ಲಿ ಫ್ರೆಂಚ್ ಅಧ್ಯಕ್ಷರು ಸಾಕಷ್ಟು ಅನನುಕೂಲವಾಗಿ ಕಾಣುತ್ತಿದ್ದರು.
