ಬಿಜೆಪಿ ಸೇರಲು ಸ್ವಾಮೀಜಿಗಳಿಗೆ ಮುಕ್ತ ಅವಕಾಶ: ಸಚಿವ ಅಶ್ವತ್ಥ ನಾರಾಯಣ
ಯೋಗಿ ಆದಿತ್ಯನಾಥ್ ಸಂನ್ಯಾಸಿಯಾಗಿದ್ದೇ ಶಾಸಕರು, ಸಂಸದರು, ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದಾರೆ. ಬಿಜೆಪಿಯಲ್ಲಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ನಾಡಿನ ಮಠಾಧೀಶರು, ಸ್ವಾಮೀಜಿಗಳಿಗೆ ಮುಕ್ತ ಆಹ್ವಾನದ ಸಂದೇಶ ನೀಡಿದ್ದಾರೆ.
ದಾವಣಗೆರೆ (ಫೆ.26): ಯೋಗಿ ಆದಿತ್ಯನಾಥ್ ಸಂನ್ಯಾಸಿಯಾಗಿದ್ದೇ ಶಾಸಕರು, ಸಂಸದರು, ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದಾರೆ. ಬಿಜೆಪಿಯಲ್ಲಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ನಾಡಿನ ಮಠಾಧೀಶರು, ಸ್ವಾಮೀಜಿಗಳಿಗೆ ಮುಕ್ತ ಆಹ್ವಾನದ ಸಂದೇಶ ನೀಡಿದ್ದಾರೆ. ಸ್ವಾಮೀಜಿಗಳು ರಾಜಕೀಯ ಸೇರುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಎಲ್ಲರಿಗೂ ನಮ್ಮ ಪಕ್ಷದಕ್ಕಿ ಮುಕ್ತ ಆಹ್ವಾನವಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗವಹಿಸಬೇಕಾಗುತ್ತದೆ. ಅಂತಹ ಆಲೋಚನೆ, ವಿಚಾರ ಇರುವವರು ಬಿಜೆಪಿ ಸೇರಬಹುದು.
ಯೋಗಿ ಆದಿತ್ಯನಾಥರು ಸಂನ್ಯಾಸಿಯಾಗಿ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿಯೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಎಲ್ಲರೂ ಇದ್ದಾರೆ. ಹಾಗಾಗಿ ಎಲ್ಲರಿಗೂ ಮುಕ್ತ ಆಹ್ವಾನ, ಅವಕಾಶವಿದೆ ಎಂದು ತಿಳಿಸಿದರು. ಅರ್ಕಾವತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ .8 ಸಾವಿರ ಕೋಟಿ ಹಗರಣ ಮಾಡಿದ್ದಾರೆ. ಸದನದಲ್ಲೇ ಇದನ್ನು ನಾವು ಹೇಳಿದ್ದೇವೆ. ನಾವು ಹೇಳುವುದು ಮಾತ್ರ ಸತ್ಯವಾಗಿದ್ದು, ಕಾಂಗ್ರೆಸ್ಸಿನವರು ಹೇಳುವುದೆಲ್ಲವೂ ಸುಳ್ಳು. 800 ಎಕರೆಗೂ ಹೆಚ್ಚು ಜಮೀನನ್ನು ರೀಡೂ ಮಾಡಿ, ಎಷ್ಟುಲಾಭ ಮಾಡಿಕೊಂಡಿದ್ದಾರೆಂಬುದನ್ನೂ ನಾವು ಹೇಳಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಎಸ್‌ವೈಯಂತೆ ನಾನೂ ಬಿಜೆಪಿ ಸಂಘಟಿಸುವೆ: ವಿಜಯೇಂದ್ರ
ಪ್ರತಿ ಕ್ಷೇತ್ರದಲ್ಲೂ ರಾಜ್ಯವೇ ಮುಂಚೂಣಿ: ಆವಿಷ್ಕಾರ, ವಿಜ್ಞಾನ-ತಂತ್ರಜ್ಞಾನ, ಸ್ಟಾರ್ಟಪ್ ಹೀಗೆ ಪ್ರತಿ ಕ್ಷೇತ್ರದಲ್ಲೂ ದೇಶದಲ್ಲೇ ರಾಜ್ಯವು ಮುಂಚೂಣಿಯಲ್ಲಿದ್ದು, ಕನಿಷ್ಠ ನಿರುದ್ಯೋಗ ಇರುವ ರಾಜ್ಯ ಕರ್ನಾಟಕ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು. ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿ, ಕನಿಷ್ಠ ನಿರುದ್ಯೋಗ ಇರುವ ಕರ್ನಾಟಕವು ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದರು.
ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲು 180 ಐಟಿಐ ಕಾಲೇಜುಗಳ ಉನ್ನತೀಕರಿಸಲಾಗಿದೆ. 250 ಪಾಲಿಟೆಕ್ನಿಕ್‌ಗಳಿಗೆ ಕಾಯಕಲ್ಪ ನೀಡಲಾಗಿದೆ. ಯುವ ಸಬಲೀಕರಣವೇ ಪಕ್ಷದ ಅತೀ ಮುಖ್ಯ ಗುರಿಯಾಗಿದ್ದು, ವಿಪಕ್ಷ ಅಧಿಕಾರದಲ್ಲಿದ್ದಾಗ ಯುವ ಜನರ ಪರ ಯಾವುದೇ ಕೆಲಸ ಮಾಡಲಿಲ್ಲ. ಸಬಲೀಕರಣ ಮಾಡಲಿಲ್ಲ, ಕೌಶಲ್ಯ ತರಬೇತಿಯನ್ನೂ ನೀಡಲಿಲ್ಲ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ ತಂದ ಬಿಜೆಪಿ ಸರ್ಕಾರವು ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಬಹುದೆಂಬುದು ತೋರಿಸಿಕೊಟ್ಟಿದೆ ಎಂದು ತಿಳಿಸಿದರು.
ಶಕ್ತಿ ತುಂಬುವ ಕೆಲಸವಾಗಲಿ: ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತಾಡಿ, ಬಿಜೆಪಿಗೆ ಶಕ್ತಿ ಬಂದಿದ್ದು, ದೇಶ, ರಾಜ್ಯದಲ್ಲಿ ಅಧಿಕಾರ ಬಂದಿದೆಯೆಂದರೆ ಅದಕ್ಕೆ ಯುವ ಮೋರ್ಚಾ ಕಾರಣ. ಇದನ್ನು ಮನಗಂಡು ಪ್ರಧಾನಿ ಮೋದಿ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಈಗ ಮತ್ತೆ ಮೋದಿ ಕೈಬಲಪಡಿಸುವ ಕೆಲಸ ಮಾಡೋಣ. ಚೀನಾ, ಇಂಗ್ಲೆಂಡ್ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ಕೊರೋನಾ ಮಹಾಮಾರಿಗೆ ತತ್ತರಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ದೇಶ ವಾಸಿಗಳ ಜೀವ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
Grama Vastavya: ಶೀಘ್ರದಲ್ಲಿಯೇ ಮಹಿಳೆಯರ ಖಾತೆಗೆ 1000 ರೂ ಜಮೆ: ಸಚಿವ ಅಶೋಕ್
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ಕ್ಷೇತ್ರದ 4 ಸಾವಿರ ಎಕರೆ ಭೂಮಿ ಇಂದು ನೀರಾವರಿಯಾಗಿದ್ದರೆ ಅದಕ್ಕೆ ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಅವರೇ ಕಾರಣ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಈ ಜಿಲ್ಲೆ ಬಿಜೆಪಿಯ ಭದ್ರಕೋಟೆಯೆಂಬುದು ಸಾಬೀತುಪಡಿಸೋಣ. ಬಿಎಸ್‌ವೈ ಹೇಳಿದಂತೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷ ಶಾಶ್ವತಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.