ಬೆಂಗಳೂರು (ಜ. 25) ಮಾಧುಸ್ವಾಮಿ ರಾಜೀನಾಮೆ ವದಂತಿ ನಂತರ ಮತ್ತೆ ಸೋಮವಾರ ರಾತ್ರಿ ಖಾತೆ ಬದಲಾವಣೆ ಮಾಡಿರುವ ಸಿಎಂ ಯಡಿಯೂರಪ್ಪ ಸಣ್ಣ ನೀರಾವರಿ ಖಾತೆಯನ್ನು ಮಾಧುಸ್ವಾಮಿ ಅವರಿಗೆ  ನೀಡಿದ್ದಾರೆ

ರಾಜ್ಯದ ಸಚಿವ ಸಂಪುಟ ಪ್ರಹಸನಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಪದೇ ಪದೇ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕಾರಣದ ವಲಯದಲ್ಲಿ ಕೇಳಿ ಬಂದಿದ್ದವು.  ಈಗ ಮಾಧುಸ್ವಾಮಿ ಅವರಿಗೆ ಮರಳಿ ಹಳೆ ಖಾತೆ ಸಿಕ್ಕಿದೆ.

ಖಾತೆ ಬದಲಾವಣೆ ಪ್ರಹಸನ;  ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?

ಸಿಪಿ ಯೋಗೇಶ್ವರ ಬಳಿ ಇದ್ದ ಸಣ್ಣ ನೀರಾವರಿಯನ್ನು ಮಾಧುಸ್ವಾಮಿಗೆ  ನೀಡಲಾಗಿದ್ದು ಯೋಗೇಶ್ವರ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯನ್ನು ನೀಡಲಾಗಿದೆ.

ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಸಚಿವ ಸಂಪುಟ ಸಭೆಯಿಂದಲೇ ಜೆ.ಸಿ. ಮಾಧು ಸ್ವಾಮಿ ಹೊರಗೆ ಉಳಿದಿದ್ದರು.  ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿರುವ ಆನಂದ್ ಸಿಂಗ್ ಎಲ್ಲವೂ ಸರಿ  ಇದೆ ಎಂಬ ಮಾತುಗಳನ್ನು ಆಡಿದ್ದಾರೆ.