Asianet Suvarna News Asianet Suvarna News

Mekedatu Politics: ಕಾಂಗ್ರೆಸಿಗರು ನಗಾರಿ ಬಾರಿಸದಿದ್ರೆ ಸುಪ್ರಿಂ ತೀರ್ಪು ನೀಡಲ್ಲ: ದೇವೇಗೌಡ

*   ಪಾದಯಾತ್ರೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯ
*  ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ
*  ಕಾಂಗ್ರೆಸ್‌ ಪಕ್ಷದ ವಿರುದ್ಧ ದೇವೇಗೌಡ ಅಸಮಾಧಾನ

Former PM HD Devegowda Slams on Congress Leaders grg
Author
Bengaluru, First Published Jan 15, 2022, 4:15 AM IST
  • Facebook
  • Twitter
  • Whatsapp

ಕೆ.ಆರ್‌.ನಗರ(ಜ.15):  ಕಾವೇರಿ ಜಲ ವಿವಾದದ(Kaveri Water Dispute) ಬಗ್ಗೆ ಕಾಂಗ್ರೆಸ್‌(Congress) ನಾಯಕರು ರಸ್ತೆಯಲ್ಲಿ ನಿಂತು ನಗಾರಿ ಬಾರಿಸದಿದ್ದರೆ ಆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಯಾವುದೇ ತೀರ್ಪು ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವ್ಯಂಗ್ಯವಾಡಿದ್ದಾರೆ.

ನೂತನ ಸಾಲಿಗ್ರಾಮ ತಾಲೂಕಿನ ತಹಸೀಲ್ದಾರರ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ ವಿವಾದದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬೀದಿಯಲ್ಲಿ ನಿಂತು ಹೋರಾಟ ಮಾಡಿದರೆ ನ್ಯಾಯ ಪಡೆಯಲು ಸಾಧ್ಯವೇ? ಕಾವೇರಿ ಜಲವಿವಾದ, ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ಹೊರಗಡೆ ನಿಂತು ನ್ಯಾಯ ಪಡೆಯಲು ಸಾಧ್ಯವಿಲ್ಲ ಎಂಬ ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ. ಈ ಹಿಂದೆ ರಾಜ್ಯದ ಜನರಿಗೆ ನೀರಿನ ವಿಚಾರದಲ್ಲಿ ನ್ಯಾಯ ಒದಗಿಸಿಕೊಡಲು ಎಷ್ಟು ಪಾದಯಾತ್ರೆಗಳನ್ನು(Padayatra) ಮಾಡಿದ್ದೀರಿ ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

PM Modi security breach : ರಾಷ್ಟ್ರಪತಿ, ಮಾಜಿ ಪ್ರಧಾನಿ ದೇವೇಗೌಡ ಕಳವಳ, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

ಇದೇ ವೇಳೆ ಕಾವೇರಿ ಜಲ ವಿವಾದದ ವಿಚಾರದಲ್ಲಿ ಅತಿ ಹೆಚ್ಚು ಹೋರಾಟ ಮಾಡಿದ ಉತ್ತಮ ನಾಯಕರಿದ್ದರೆ ಅದು ಮಾಜಿ ಮಂತ್ರಿ ಎಚ್‌.ಎಂ. ಚನ್ನಬಸಪ್ಪ ಅವರೊಬ್ಬರೇ ಎಂದು ಅವರು ಶ್ಲಾಘಿಸಿದರು.

ಜೆಡಿಎಸ್ಸನ್ನು ಕಾಂಗ್ರೆಸ್‌ ಮುಗಿಸಲು ಸಾಧ್ಯವಿಲ್ಲ: ದೇವೇಗೌಡ

ಬೆಂಗಳೂರು:  ಜೆಡಿಎಸ್‌(JDS) ಪಕ್ಷವನ್ನಾಗಲಿ, ಯಾರು ಯಾರನ್ನಾದರೂ ಆಗಲಿ ಮುಗಿಸಲು ಸಾಧ್ಯವಿಲ್ಲ, ಅದು ಭಗವಂತನ ಆಟ. ದೇವರು ಎಲ್ಲಾ ತೀರ್ಮಾನ ಮಾಡುತ್ತಾನೆ ಎಂದು ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. 

ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತೀರ್ಮಾನ ಮಾಡುವವರು ಎಲ್ಲೋ ಇದ್ದಾರೆ. ಇವರಿಂದ ಜೆಡಿಎಸ್‌ ಮುಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್‌ ಪಾದಯಾತ್ರೆ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದೇವೇಗೌಡ, ಮೇಕೆದಾಟು ಯೋಜನೆ(Mekedatu Project) ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಜ.25ರಂದು ವಿಚಾರಣೆಗೆ ಬರುತ್ತಿದ್ದು, ಅಲ್ಲಿ ಏನಾಗುತ್ತದೋ ನೋಡೋಣ. ಯೋಜನೆ ಕುರಿತು ಎರಡು ರಾಷ್ಟ್ರೀಯ ಪಕ್ಷಗಳು ಜಾಹೀರಾತು ನೀಡಿರುವುದನ್ನು ಗಮನಿಸಿದ್ದೇನೆ. ಆ ಬಗ್ಗೆ ಚರ್ಚಿಸುವುದಿಲ್ಲ ಎಂದರು.

ಬಿಜೆಪಿಯನ್ನ ಮೋದಿ ಪಾರ್ಟಿ ಅಂತ ಕರೆಯೋದೇ ಸೂಕ್ತ:

ಕಲಬುರಗಿ: ಭಾರತೀಯ ಜನತಾ ಪಾರ್ಟಿಯನ್ನು ಬಿಜೆಪಿ (BJP) ಎಂದು ಹೇಳುವ ಬದಲಾಗಿ ಮೋದಿ ಪಕ್ಷ (Modi Party) ಎಂದು ಕರೆಯೋದು ಸೂಕ್ತ. ಯಾಕಂದ್ರೆ, ಪಕ್ಷದ ಹೆಸರಿನಲ್ಲಿ ಚುನಾವಣೆ ಮಾಡುವ ಬದಲು ಮೋದಿ ಹೆಸರಿನಲ್ಲಿ ಆ ಪಕ್ಷದವರು ಚುನಾವಣೆ ಮಾಡ್ತಿದ್ದಾರೆ. ಹಾಗಾಗಿ, ಮೋದಿ ಪಾರ್ಟಿ ಅಂತಾ ನಾನು ಕರೆಯುತ್ತೇನೆ ಎಂದು ಕಲಬುರಗಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Deve Gowda)  ಬಿಜೆಪಿಯನ್ನು ಕುಟುಕಿದ್ದರು.

Karnataka Politics: 2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರೋದು ಪಕ್ಕಾ: ದೇವೇಗೌಡ

ಜ.5 ರಂದು ಕಲಬುರಗಿಯಲ್ಲಿ (Kalburgi) ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಒಬ್ಬ ವ್ಯಕ್ತಿಯ ಯಶಸ್ಸಿನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ. ಆದ್ರೆ, ಮುಂದೇನು ಆಗುತ್ತೋ ಅದು ನನಗೆ ಗೋತ್ತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್‌ (Congress) ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಶಕ್ತಿ ಹೀನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಕಾಂಗ್ರೆಸ್‌ ದೇಶದ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದಕ್ಕೆ ಕಾರಣ ಏನು? ಯಾರು? ಅಂತಾ ಅವರೆ ಹುಡುಕಿಕೊಳ್ಳಬೇಕು. ಮುಂದಿನ ಐದು ರಾಜ್ಯಗಳ ಚುನಾವಣೆಯಲ್ಲಿ (Assembly Elections 2022) ಕಾಂಗ್ರೆಸ್‌ ಎಷ್ಟುಬೆಳೆಯುತ್ತೆ ಅನ್ನೋದು ಈಗಲೇ ಹೇಳುವುದಕ್ಕೆ ಆಗೋದಿಲ್ಲ. ಎರಡೂ ಪಕ್ಷದವರು 2023ಕ್ಕೆ ಜೆಡಿಎಸ್‌ (JDS) ಸಂಪೂರ್ಣ ನಾಶ ಮಾಡುವುದಾಗಿ ಹೇಳ್ತಿದ್ದಾರೆ. ಆದ್ರೆ, ಮತದಾರರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ರಾಮನಗರದಲ್ಲಿ ನಡೆದ ಸಚಿವ ಹಾಗೂ ಸಂಸದರ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಎರಡು ಪಕ್ಷದ ನಾಯಕರು ಈ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಆಗಬಾರದು ಎಂದರು.

Follow Us:
Download App:
  • android
  • ios