Asianet Suvarna News Asianet Suvarna News

'ಅಕ್ಕ ಸತ್ರೆ ಅಮಾವಾಸ್ಯೆ ನಿಲ್ಲೋದಿಲ್ಲ' ಪರೋಕ್ಷವಾಗಿ ಯತ್ನಾಳ್‌ಗೆ ನಿರಾಣಿ ಟಾಂಗ್!

'ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟಿದೆ. ಮರಿ ಹುಲಿ ಈಗ ದೊಡ್ಡದಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಹಾಡಿ ಹೊಗಳಿದರು.

Former minister Murugesh r nirani statement about BY Vijayendra at vijayapur today rav
Author
First Published Dec 30, 2023, 4:45 PM IST

ವಿಜಯಪುರ (ಡಿ.30): 'ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟಿದೆ. ಮರಿ ಹುಲಿ ಈಗ ದೊಡ್ಡದಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಹಾಡಿ ಹೊಗಳಿದರು.

ಇಂದು ವಿಜಯಪುರದಲ್ಲಿ ನಡೆದ ವಿಜಯೇಂದ್ರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸೈಕಲ್ ಮೇಲೆ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡಗುತ್ತೆ ಅನ್ನೋ ಮಾತಿತ್ತು. ಇದೀಗ ವಿಜಯೇಂದ್ರ ಗುಡುಗಿದ್ರೆ ವಿಜಯಪುರ ಜಿಲ್ಲೆ ಸೇರಿ 31 ಜಿಲ್ಲೆಗಳು ನಡಗುತ್ತವೆ ಎಂದರು.

ಯತ್ನಾಳ್ ಬಳಿ ಬಿಜೆಪಿಯವರ ವೀಕ್ನೆಸ್ ಇದೆ, ಹಿಂದೆ ಹೇಳಿದ್ದೆಲ್ಲ ಸತ್ಯ ಆಗಿದೆ: ಸಚಿವ ಎಂ.ಬಿ.ಪಾಟೀಲ್

ಯತ್ನಾಳ್‌ಗೆ ನಿರಾಣಿ ಟಾಂಗ್ 

ಇನ್ನು ಬಿಎಸ್‌ವೈ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರ ಸಂಬಂಧ ಮಾತನಾಡಿದ ನಿರಾಣಿ, ಹಿರಿಯರು ಪಕ್ಷದಲ್ಲಿ ಯಾರಿಗೆ ಏನು ಹೇಳ್ಬೇಕು ಹೇಳಿ ಆಗಿದೆ. ಇನ್ನು ಅನುಷ್ಠಾನಕ್ಕೆ ತರುವುದು ಮಾತ್ರ ಬಾಕಿ‌ ಇದೆ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲೋದಿಲ್ಲ. ಇದು ನಿಮಗೆ ತಿಳಿದರ ಬೇಕು ಎಂದು ಪರೋಕ್ಷವಾಗಿ ಯತ್ನಾಳ್ ಇಲ್ದೆ ಇದ್ರೂ ಪಕ್ಷದ ಕೆಲಸ ನಿಲ್ಲೋದಿಲ್ಲ ಎಂದು ಸಂದೇಶ ಕೊಟ್ಟ ನಿರಾಣಿ.

ರಾಜ್ಯದಲ್ಲಿ ಕೈ ಸರ್ಕಾರ ಇದೇಯೋ, ಸತ್ತಿದೆಯೋ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಿರಾಣಿ

ಮುರುಗೇಶ ನಿರಾಣಿ ಕೇವಲ ಬಾಗಲಕೋಟೆ ಜಿಲ್ಲೆಗಷ್ಟೇ ಅಲ್ಲ, ಅಖಂಡ ವಿಜಯಪುರ ಜಿಲ್ಲೆಗೆ ಸೇರಿದವ. ನಿಮ್ಮ ಕೆಲಸಗಳು ಏನೇ ಇದ್ರೂ ನನ್ನ ಬಳಿ ಬನ್ನಿ. ನನ್ನದೆ ಕ್ಷೇತ್ರ ಎನ್ನುವಂತೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದರು. 

Follow Us:
Download App:
  • android
  • ios