Asianet Suvarna News Asianet Suvarna News

ಭವಿಷ್ಯವೇ ಇಲ್ಲದೆ ಒದ್ದಾಡುತ್ತಿರುವ ರಾಹುಲ್‌ ಗಾಂಧಿ ಬಗ್ಗೆ ಪ್ರಿಯಾಂಕ್‌ ಖರ್ಗೆ ಭವಿಷ್ಯ ಹೇಳಲಿ: ಸಿ.ಟಿ. ರವಿ

ರಾಹುಲ್ ಗಾಂಧಿ ಇಂತಹ ಭವಿಷ್ಯಕಾರರ ಬಗ್ಗೆ ಆಶಾಭಾವನೆಯಿಂದ ನೋಡ್ತಿರ್ತಾರೆ. ಕಳೆದ 10 ವರ್ಷದಿಂದ ಭವಿಷ್ಯವೇ ಇಲ್ಲದೆ ಒದ್ದಾಡುತ್ತಿದ್ದಾರೆ. ಪ್ರಿಯಾಂಕ್‌ ಖರ್ಗೆ ತಮ್ಮ ಪ್ರತಿಭೆಯನ್ನ ರಾಹುಲ್ ಗಾಂಧಿ ಬಗ್ಗೆ ಹೇಳಬೇಕು. ಆಗ ಅವರು (ರಾಹುಲ್‌ ಗಾಂಧಿ) ಅವರ ಆಸ್ಥಾನದ ಜ್ಯೋತಿಷಿಯೂ ಆಗಬಹುದು ಎಂದು ಲೇವಡಿ ಮಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ 

former minister ct ravi react to minister priyank kharge statement grg
Author
First Published Aug 15, 2024, 12:01 PM IST | Last Updated Aug 15, 2024, 12:01 PM IST

ಚಿಕ್ಕಮಗಳೂರು(ಆ.15):  ಸಚಿವ ಪ್ರಿಯಾಂಕ್ ಖರ್ಗೆ ಯಾವಾಗ ಭವಿಷ್ಯ ಹೇಳಲು ಶುರು ಮಾಡಿದ್ರು ಅಂತ ಗೊತ್ತಿಲ್ಲ. ತಮ್ಮ ಭವಿಷ್ಯದ ಮಾತುಗಳನ್ನ ರಾಹುಲ್ ಗಾಂಧಿ ಬಗ್ಗೆಯೂ ಹೇಳಲು ಶುರು ಮಾಡಿ ಬೆಳಕು ಚೆಲ್ಲಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. 

ಸಿ.ಟಿ.ರವಿ ಸದ್ಯದಲ್ಲೇ ಬೆಳಗಾವಿ ಟೀಂ ಸೇರ್ತಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ರಾಹುಲ್ ಗಾಂಧಿ ಇಂತಹ ಭವಿಷ್ಯಕಾರರ ಬಗ್ಗೆ ಆಶಾಭಾವನೆಯಿಂದ ನೋಡ್ತಿರ್ತಾರೆ. ಕಳೆದ 10 ವರ್ಷದಿಂದ ಭವಿಷ್ಯವೇ ಇಲ್ಲದೆ ಒದ್ದಾಡುತ್ತಿದ್ದಾರೆ. ಪ್ರಿಯಾಂಕ್‌ ಖರ್ಗೆ ತಮ್ಮ ಪ್ರತಿಭೆಯನ್ನ ರಾಹುಲ್ ಗಾಂಧಿ ಬಗ್ಗೆ ಹೇಳಬೇಕು. ಆಗ ಅವರು (ರಾಹುಲ್‌ ಗಾಂಧಿ) ಅವರ ಆಸ್ಥಾನದ ಜ್ಯೋತಿಷಿಯೂ ಆಗಬಹುದು ಎಂದು ಲೇವಡಿ ಮಾಡಿದ್ದಾರೆ. 

ಸಿಟಿ ರವಿ ಸ್ವಲ್ಪ ದಿನದಲ್ಲೇ ಬೆಳಗಾವಿ ಗ್ಯಾಂಗ್ ಸೇರ್ತಾರೆ: ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಖರ್ಗೆ ಅವರು ಭವಿಷ್ಯ ಹೇಳುವ ಮೂಲಕ ತಮ್ಮ ಕಾಯಕ ಮುಂದುವರೆಸಲಿ ಎಂದು ಸಿ.ಟಿ. ರವಿ ಶುಭ ಹಾರೈಸಿದ್ದಾರೆ.  

Latest Videos
Follow Us:
Download App:
  • android
  • ios