Belagavi Politics: ರಮೇಶ ಜಾರಕಿಹೊಳಿ ಬೇಗ ಮಂತ್ರಿಯಾಗಲಿ: ಲಕ್ಷ್ಮಣ ಸವದಿ
* ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ
* ಚುನಾವಣೆಯಲ್ಲಿ ಎಲ್ಲರೂ ಒಗ್ಗಟಾಗಿ ಕೆಲಸವನ್ನು ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ
* ರಮೇಶ ಜಾರಕಿಹೊಳಿ ಮಂತ್ರಿಯಾಗಿ ಬರುವದಾದರೆ ನಾನು ಸ್ವಾಗತಿಸುತ್ತೇನೆ
ಅಥಣಿ(ಏ.27): ಬಿಜೆಪಿಯಲ್ಲಿ(BJP) ಯಾವುದೇ ಭಿನ್ನಮತ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟಾಗಿ ಕೆಲಸವನ್ನು ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ರಮೇಶ ಜಾರಕಿಹೊಳಿ ಅವರು ಮಂತ್ರಿಯಾಗಿ ಬರುವದಾದರೆ ನಾನು ಸ್ವಾಗತಿಸುತ್ತೇನೆ. ಬೇಗ ಮಂತ್ರಿಯಾಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ(Laxman Savadi) ಹೇಳಿದರು.
ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಾವಾಗಿರುವ ನಿಯೋಜಿತ ಪಶು ವೈದ್ಯಕೀಯ ಕಾಲೇಜಿನ 3ನೇ ಹಂತದ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಶು ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಅಧ್ಯಯನಕ್ಕೆ ಬೇಕಾಗುವಷ್ಟುಕಟ್ಟಡದ ಕೆಲಸ ಸಂಪೂರ್ಣ ಮುಗಿದಿದೆ. ಕೇಂದ್ರ ಸರ್ಕಾರದ(Central Government) ಅನುಮತಿ ಪಡೆದು ಈ ಶೈಕ್ಷಣಿಕ ವರ್ಷದಿಂದ ಕಾಲೇಜನ್ನು ಪ್ರಾರಂಭಿಸಬೇಕೆಂದು ಗುರಿ ಇಟ್ಟುಕೊಳ್ಳಾಗಿದೆ. ಇದಕ್ಕೆ ಬೇಕಾಗುವ ಸಿಬ್ಬಂದಿ ನೇಮಕಾತಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ನೀಡಬಹುದು ಎಂದು ಹೇಳಿದರು.
Mekedatu Padayatra: ಜೀವಂತ ಇದ್ದೇವೆಂದು ತೋರಿಸಲು ಕಾಂಗ್ರೆಸ್ ಪಾದಯಾತ್ರೆ: ಸವದಿ ಕಿಡಿ
ಇದೇ ಕಾಲೇಜು ಎದುರಿಗೆ ಕೃಷಿ ಮಹಾವಿದ್ಯಾಲಯ ತಲೆ ಎತ್ತಲಿದೆ. ಕೃಷಿ ಕಾಲೇಜ ನಿರ್ಮಾಣಕ್ಕೆ ಸುಮಾರು 130 ಕೋಟಿ ರು. ಅನುದಾನವನ್ನು ಬಜೆಟ್‌ದಲ್ಲಿ(Budget) ಮೀಸಲಿಡಲಾಗಿದೆ. ಕೃಷಿ ಕಾಲೇಜನ ಎಲ್ಲ ಕಾಮಗಾರಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೋಮ್ಮಾಯಿ(Basavaraj Bommai) ಅವರು ಶಿಲಾನ್ಯಾಸ ಮಾಡಲಿದ್ದಾರೆ ಎಂದು ಹೇಳಿದರು. ಇದೇ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಮುಖ್ಯ ಎಂಜನಿಯರ್ ಜೆ.ಎ.ಹೀರೆಮಠ ಜಿ.ಎಮ್.ಗೂಲಪ್ಪನವರ ಎ.ಜಿ.ಮುಲ್ಲಾ ಪ್ರವೀಣ ಸೂರ್ಯವಂಶಿ ಎನ್.ಎ.ಪಾಟೀಲ, ಜೀರೇಂದ್ರ ಆಚಾರ‍್ಯ, ಜಿಪಂ ಎಂಜನಿಯರ್ ವೀರಣ್ಣ ವಾಲಿ, ತಾಪಂ ಕಾರ‍್ಯ ನಿರ್ವಾಹಕ ಅಧಿಕಾರಿ ಎಸ್.ಬಿ.ಕರಿಬಸಪ್ಪಗೋಳ ಮುಂತಾದವರು ಉಪಸ್ಥೀತರಿದ್ದರು.
ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ(Assembly Election) ಸೋತರೂ ಉನ್ನತ ಹುದ್ದೆಗೇರಿ ಅಧಿಕಾರ ಅನುಭವಿಸಿದವರು, ಇದೀಗ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಜೊತೆ ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ(Lakhan Jarkiholi) ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕತ್ತಿ, ಸವದಿ ಟೀಂಗೆ ಕೈಕೊಟ್ಟ ಬಿಜೆಪಿ ನಾಯಕರು..!
ನಗರದಲ್ಲಿ ಜ.28 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತ ನಾಯಕರನ್ನು ಪಕ್ಷದ ಉಪಾಧ್ಯಕ್ಷ, ಡಿಸಿಎಂ ಮಾಡಿದರೆ ಒಳ್ಳೆಯದಾಗುವುದಿಲ್ಲ. ರಮೇಶ ಜಾರಕಿಹೊಳಿ(Ramesh Jarkiholi) ವಿರುದ್ಧ ಲಕ್ಷ್ಮಣ ಸವದಿ(Laxman Savadi) ಕತ್ತಿ ಮಸೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಸಚಿವ ಉಮೇಶ ಕತ್ತಿ(Umesh Katti) ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ. ಅಥಣಿ, ಬೆಳಗಾವಿ(Belagavi) ನಾಯಕರು ಸೇರಿ ಕುತಂತ್ರ ಮಾಡಿ ಬಿಜೆಪಿ(BJP) ಸರ್ಕಾರ ಬಲಿ ಕೊಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ಉನ್ನತ ಹುದ್ದೆ ಅನುಭವಿಸಿ ಮತ್ತೆ ಅಧಿಕಾರ ಸಿಗಲೆಂದು ಕುತಂತ್ರ ನಡೆಸಿದ್ದಾರೆ. ಈ ರೀತಿ ಮೀಟಿಂಗ್ ಎಲ್ಲಾ ಮಾಡಿ ಅಧಿಕಾರ ಗಿಟ್ಟಿಸುವ ಫಾರ್ಮುಲಾ ಇದಾಗಿದೆ. ಸಚಿವ ಉಮೇಶ ಕತ್ತಿ ಅವರು ಸಭೆಯಲ್ಲಿ ಮೇಯರ್ ಚುನಾವಣೆ, ಪಕ್ಷದ ಸಂಘಟನೆ ಕುರಿತು ಚರ್ಚಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಭೆ ನಡೆದರೆ, ಅದು ಅಧಿಕೃತ ಸಭೆ ಎನ್ನುವ ಮೂಲಕ ಇದೊಂದು ಅನಧಿಕೃತ ಸಭೆ ಎಂದು ಜರಿದಿದ್ದರು.