ಬಿಜೆಪಿಯಿಂದ ಯುವಕರ ದಾರಿ ತಪ್ಪಿಸುವ ಕೆಲಸ: ಎಚ್‌.ಡಿ. ಕುಮಾರಸ್ವಾಮಿ

ಜಾತಿ, ಧರ್ಮದ ಸೋಂಕಿಲ್ಲದೆ ಸರ್ವ ಸಮಾಜದ ಕುಟುಂಬಗಳು ನೆಮ್ಮದಿಯಿಂದ ಜೀವಿಸುವಂತೆ ಮಾಡುವುದೇ ಪಂಚರತ್ನ ರಥ ಯಾತ್ರೆ ಉದ್ದೇಶವಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸವಾಲಿನ ನಡುವೆಯೂ ರೈತರ ಸಾಲಮನ್ನಾ ಮಾಡಿದ್ದೆ. ಬಿಜೆಪಿ ಸಾಕಷ್ಟು ವಿರೋಧ ಮಾಡಿತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯೋಜನೆ ಬಿಜೆಪಿ ಅನುಷ್ಠಾನಕ್ಕೆ ತರಲಿಲ್ಲ ಎಂದು ದೂರಿದ ಎಚ್‌ಡಿಕೆ 

Former CM HD Kumaraswamy Slams BJP Government grg

ವಿಜಯಪುರ(ಜ.21): ಬಿಜೆಪಿಯವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಿಯವರೆಗೆ ಈ ಎರಡೂ ಪಕ್ಷಗಳನ್ನು ಒದ್ದು ಹೊರಗೆ ಹಾಕುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಬಾಳಿನ ಜೊತೆ ಚೆಲ್ಲಾಟ ಆಡುವುದು ಬಿಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು. ನಗರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಶುಕ್ರವಾರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಾತಿ, ಧರ್ಮದ ಸೋಂಕಿಲ್ಲದೆ ಸರ್ವ ಸಮಾಜದ ಕುಟುಂಬಗಳು ನೆಮ್ಮದಿಯಿಂದ ಜೀವಿಸುವಂತೆ ಮಾಡುವುದೇ ಪಂಚರತ್ನ ರಥ ಯಾತ್ರೆ ಉದ್ದೇಶವಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸವಾಲಿನ ನಡುವೆಯೂ ರೈತರ ಸಾಲಮನ್ನಾ ಮಾಡಿದ್ದೆ. ಬಿಜೆಪಿ ಸಾಕಷ್ಟು ವಿರೋಧ ಮಾಡಿತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯೋಜನೆ ಬಿಜೆಪಿ ಅನುಷ್ಠಾನಕ್ಕೆ ತರಲಿಲ್ಲ ಎಂದು ದೂರಿದರು.

ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಘೋಷಿಸಿದ್ದು ನಾನು. ಆದರೆ, ಆ ಯೋಜನೆಯನ್ನು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತಡೆಯಿತು. ಆ ಯೋಜನೆ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಿತು. ಬಿಜೆಪಿ ಮಂತ್ರಿಯ ಪುತ್ರ ಅಭ್ಯರ್ಥಿಯಾಗಿದ್ದ ಕಾರಣಕ್ಕೆ ಶಾಸಕ ದೇವಾನಂದ ಚವ್ಹಾಣ ಅವರಿಗೆ ಈ ಕ್ರೆಡಿಟ್‌ ಸಿಗಬಾರದು ಎಂದು ತಡೆದರು ಎಂದು ಆರೋಪಿಸಿದರು.

ವಿಜಯಪುರದಲ್ಲಿ ಜೆ.ಪಿ ನಡ್ಡಾ ಹವಾ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು!

ಫೆಬ್ರವರಿ ನಂತರ ಜೆಡಿಎಸ್‌ಗೆ ಬರುವವರ ಪಟ್ಟಿ: ಇಬ್ರಾಹಿಂ

ಫೆಬ್ರವರಿ ಮುಗಿದ ನಂತರ ಜೆಡಿಎಸ್‌ ಪಕ್ಷಕ್ಕೆ ಬರುವವರ ಪಟ್ಟಿಯನ್ನು ನಿಮ್ಮ ಮುಂದೆ ಇಡುವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಕಾಂಗ್ರೆಸ್‌ ಪಕ್ಷಕ್ಕೆ ಇದುವರೆಗೂ ಸಿಎಂ ಅಭ್ಯರ್ಥಿ ಯಾರೆಂಬುವುದು ಘೋಷಿಸಲು ಆಗಿಲ್ಲ. ರಾಹುಲ್‌ ಗಾಂಧಿಗೆ ಭಾರತ ಜೋಡೋ ಒತ್ತಟ್ಟಿಗಿರಲಿ. ತಮ್ಮ ಪಕ್ಷವನ್ನೇ ಜೋಡಿಸಲಾಗಿಲ್ಲ ಎಂದ ಅವರು, ಬಿಜೆಪಿ ಹೆಸರು ತೆಗೆದರೆ ವಾಕರಿಕೆ ಬರುತ್ತದೆ. ಮೋದಿ ಬಂದರೆ ರೊಕ್ಕ ಕೊಟ್ಟು ರೈತರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಮಣ್ಣಿನ ಮಗ ದೇವೇಗೌಡರ ಪುತ್ರ ಕುಮಾರಸ್ವಾಮಿ ತಾನೇ ರೈತರ ಬಳಿ ಬರುತ್ತಿದ್ದಾನೆ. ಇದು ನಿಜವಾದ ನಾಯಕತ್ವ ಎಂದು ತಿಳಿಸಿದರು.

ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ನಳಿನಕುಮಾರ ಕಟೀಲ್‌ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೇ ಅವರು ಕಾಲಿಡುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ಅವರು ಆಗದಿದ್ದರೇ ನಾನು ರಾಜಕೀಯದಿಂದ ನಿವೃತ್ತಿ ಹೊಂದುವೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬುವುದನ್ನು ಹೇಳುವ ಶಕ್ತಿ ಕಾಂಗ್ರೆಸ್‌ ಬಳಿ ಇಲ್ಲ ಎಂದರು.

ಬಿಜೆಪಿ ಮಲತಾಯಿ ಧೋರಣೆ: ಡಾ.ದೇವಾನಂದ

ನಾಗಠಾಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜಯಪುರ ನಗರದ ಏಳು ವಾರ್ಡ್‌ಗಳು ಬರುತ್ತಿದ್ದರೂ ಒಂದೇ ಒಂದು ನಯಾಪೈಸೆ ಅನುದಾನ ನೀಡದೆ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಬಿಜೆಪಿ ತನ್ನ ಸಾಧನೆ. ತನ್ನ ಕೊಡುಗೆ ಎಂದು ಬೀಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್‌ ಶಾಸಕ ಡಾ.ದೇವಾನಂದ ಚವ್ಹಾಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿ, ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ನೀಡುವುದು ಬರೀ ಕಣ್ಣೊರೆಸುವ ತಂತ್ರವಾಗಿದೆ. ಇದು ಎಂದೋ ಆಗಿರುವ ಕೆಲಸವಾಗಿದೆ. ಈಗ ನಮಗೆ ಶಿಕ್ಷಣ ಹಾಗೂ ಉದ್ಯೋಗ ಮುಖ್ಯವಾಗಿದೆ. ಉದ್ಯೋಗಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸಬೇಕಾಗಿದೆ ಎಂದರು.

ಮಾನ್ವಿ ವೆಂಕಟಪ್ಪ ನಾಯಕ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಎಸ್‌. ಪಾಟೀಲ ಮಾಡಗಿ, ಜೆಡಿಎಸ್‌ ಧುರೀಣ ಬಿ.ಡಿ. ಪಾಟೀಲ, ಶಿವಾನಂದ ಸೋಮಜಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ, ಡಾ.ಸುನಿತಾ ಚವ್ಹಾಣ, ಬಸವರಾಜ ಹೊನವಾಡ, ಪಾಲಿಕೆ ಸದಸ್ಯ ರಾಜು ಚವ್ಹಾಣ, ಬಂದೇನವಾಜ ಮಹಾಬರಿ ಮತ್ತಿತರರು ಉಪಸ್ಥಿತರಿದ್ದರು.

ಜನರ ಸಂಕಷ್ಟ ನಿವಾರಣೆಗೆ ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಇದಕ್ಕೂ ಮುನ್ನ ಮೂರನೇ ಹಂತದ ಪಂಚರತ್ನ ರಥ ಯಾತ್ರೆಗೆ ಜಿಲ್ಲೆಯ ಹಿಟ್ನಳ್ಳಿ ಬಳಿ ಭವ್ಯ ಸ್ವಾಗತ ನೀಡಲಾಯಿತು. ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ, ಸುನೀತಾ ಚವ್ಹಾಣ ಸೇರಿದಂತೆ ಜೆಡಿಎಸ್‌ ನಾಯಕರು ಯಾತ್ರೆಯನ್ನು ಜಿಲ್ಲೆಗೆ ಬರ ಮಾಡಿಕೊಂಡರು. ಅನಂತರ ಅಲ್ಲಾಪುರ ತಾಂಡಾದಿಂದ ವಿವಧ ಕಲಾ ತಂಡಗಳ ಭವ್ಯ ಮೆರವಣಿಗೆ ಮೂಲಕ ನಗರದ ದರಬಾರ ಹೈಸ್ಕೂಲ್‌ ಮೈದಾನಕ್ಕೆ ಪಂಚರತ್ನ ರಥ ಯಾತ್ರೆಯನ್ನು ಕರೆದುಕೊಂಡು ಬರಲಾಯಿತು.
ಮತ್ತೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಶಾಸಕ ದೇವಾನಂದ ಚವ್ಹಾಣ ಸಚಿವರಾಗುತ್ತಾರೆ. ರಾಜ್ಯದ ಜಲ ಸಂಪನ್ಮೂಲ ಸಚಿವರ ಪುತ್ರ ಡಾ.ದೇವಾನಂದ ಚವ್ಹಾಣ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಜನರು ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಆದರೆ, ನಾನು ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಠಾಣ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಜಲ ಸಂಪನ್ಮೂಲ ಸಚಿವ ಸ್ಥಗಿತಗೊಳಿಸುವ ಮೂಲಕ ಸಣ್ಣತನ ತೋರಿದ್ದಾರೆ ಅಂತ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಕಪ್ಪು ಹಣ ತಗೆಯುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಫೇಲ್‌ ಆಗಿದ್ದಾರೆ. ಫೆಬ್ರವರಿ ಬರಲಿ ಕಾಂಗ್ರೆಸ್‌, ಬಿಜೆಪಿಯಿಂದ ಯಾರಾರ‍ಯರು ಬರುತ್ತಾರೆ ಎಂದು ನಾನು ಪಟ್ಟಿಕೊಡುವೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಶಾಸಕ ದೇವಾನಂದ ಚವ್ಹಾಣ ಮಂತ್ರಿಯಾಗಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 5 ಸ್ಥಾನಗಳು ಜೆಡಿಎಸ್‌ಗೆ ಸಿಗಲಿವೆ. ಅದರ ಜವಾಬ್ದಾರ ದೇವಾನಂದ ಚವ್ಹಾಣ ಹಾಗೂ ಸುನೀತಾ ಚವ್ಹಾಣ ಅವರಿಗೆ ವಹಿಸುವೆ. ವಿಜಯಪುರ ಜಿಲ್ಲೆಗೆ ಎರಡು ಜನ ಮಂತ್ರಿಯಾಗುವ ಯೋಗವಿದೆ ಅಂತ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios