ಸರ್ಕಾರದ ರೆಕಾರ್ಡ್ ತಿದ್ದಿ, ಅಮಾಯಕರ ಭೂಮಿ ಯನ್ನು ಧಮ್ಮಿ ಹಾಕಿ ದಬ್ಬಾಳಿಕೆಯಿಂದ ಕಿತ್ತು ಕಲ್ಲು ಒಡೆಯುತ್ತಿದ್ದರಲ್ವ, ಅದನ್ನು ಮಾಡಿದವರು ಯಾರು ಅಂತ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ ಎಚ್.ಡಿ. ಕುಮಾರಸ್ವಾಮಿ 

ಮೈಸೂರು(ಏ.19): ದೇವೇಗೌಡರ ಕುಟುಂಬದವರು ಕಲ್ಲು ಒಡೆಯುತ್ತಿದ್ದರು ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರದ ರೆಕಾರ್ಡ್ ತಿದ್ದಿ, ಅಮಾಯಕರ ಭೂಮಿ ಯನ್ನು ಧಮ್ಮಿ ಹಾಕಿ ದಬ್ಬಾಳಿಕೆಯಿಂದ ಕಿತ್ತು ಕಲ್ಲು ಒಡೆಯುತ್ತಿದ್ದರಲ್ವ, ಅದನ್ನು ಮಾಡಿದವರು ಯಾರು ಅಂತ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ. 

ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುವುದೇ ಡೌಟ್: ಎಚ್.ಡಿ.ಕುಮಾರಸ್ವಾಮಿ

ಸಾವಿರಾರು ಜನ ಕಲ್ಲಿನ ಬ್ಯುಸಿನೆಸ್ ಮಾಡುತ್ತಾರೆ. ಯಾರು ಕಲ್ಲು ಒಡೆಯುತ್ತಿದ್ದರು, ಕಳ್ಳತನದಿಂದ ಕಾನೂನು ಬಾಹಿರವಾಗಿ ಯಾರು ಕಲ್ಲು ಒಡೆದರು ಎಂಬ ಕುರಿತು ದಾಖಲೆಬಿಡುಗಡೆಮಾಡಲಿ. ನಮ್ಮ ಕುಟುಂಬಸ್ಥರು ಅಥವಾ ಬೇರಿನ್ಯಾವ ಕುಟುಂ ಬಸ್ಥರ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಾನು ಆ ವ್ಯವಹಾರ ಮಾಡಿಲ್ಲ. ನನ್ನ ಕುಟುಂಬ ಎಂದರೆ ನಾನು, ನನ್ನ ಹೆಂಡತಿ, ಮಗ, ಸೊಸೆ ಮೊಮ್ಮಗ ಅಷ್ಟೆ ಎಂದರು.