Bagalkote: ವೇದಿಕೆಯಲ್ಲೇ ಎಡವಿದ ಸಿದ್ದರಾಮಯ್ಯ: ಬೀಳುತ್ತಿದ್ದ ಮಾಜಿ ಸಿಎಂರನ್ನ ಹಿಡಿದ ಬೆಂಬಲಿಗರು

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದಕ್ಕೆ ಪಾಲ್ಗೊಳ್ಳಲು ಬಂದ ವೇಳೆಯೇ ವೇದಿಕೆಯಲ್ಲೇ ಎಡವಿ ಬೀಳುತ್ತಿದ್ದ ಪ್ರಸಂಗವೊಂದು ನಡೆಯಿತು. ಹೌದು! ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. 

former chief minister siddaramaiah slipped in ex minister rb timmapur birthday program at bagalokte gvd

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಸೆ.28): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದಕ್ಕೆ ಪಾಲ್ಗೊಳ್ಳಲು ಬಂದ ವೇಳೆಯೇ ವೇದಿಕೆಯಲ್ಲೇ ಎಡವಿ ಬೀಳುತ್ತಿದ್ದ ಪ್ರಸಂಗವೊಂದು ನಡೆಯಿತು. ಹೌದು! ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. 

ಅತ್ತ ಜನರ ಚಪ್ಪಾಳೆ, ಶಿಳ್ಳೆಗಳ ಮಧ್ಯೆಯೇ ವೇದಿಕೆ ಏರಿ ಬಂದ ಸಿದ್ದರಾಮಯ್ಯನವರಿಗೆ ಕಾಲಿನಲ್ಲಿ ನೀರಿನ ಬಾಟಲ್‌ವೊಂದು ಸಿಕ್ಕು ಎಡವಿ ಬೀಳಲು ಮುಂದಾದ ಪ್ರಸಂಗ ನಡೆಯಿತು. ಇದನ್ನು ತಕ್ಷಣ ಮನಗಂಡ ಅಕ್ಕಪಕ್ಕದಲ್ಲಿದ್ದ ಅಭಿಮಾನಿಗಳು ಸಿದ್ದರಾಮಯ್ಯನವರನ್ನ ಹಿಡಿದು ಬೀಳದಂತೆ ಜಾಗೃತಿ ವಹಿಸಿದರು. ಈ ಘಟನೆಯಿಂದ ಸಿದ್ದರಾಮಯ್ಯನವರು ಒಂದು ಕ್ಷಣ ಗಲಿಬಿಲಿಗೊಂಡರು ಸಹ ಬಳಿಕ ಸಾವರಿಸಿಕೊಂಡು ವೇದಿಕೆಯತ್ತ ಜನರತ್ತ ಕೈಬೀಸುತ್ತಾ ಬಂದರು. 

Bagalkote: ದೀಪಕ್ಕೆ ದಿಕ್ಕಿಲ್ಲದ ಮನೆಯಂತಾದ ಕಾಂಗ್ರೆಸ್‌ ಪಕ್ಷ: ಸಚಿವ ಕಾರಜೋಳ

ಸಿಎಂ ಬೊಮ್ಮಾಯಿಗೆ ತಾಕತ್ ಇದ್ದರೆ 40 ಪರ್ಸೆಂಟ್ ಆರೋಪಕ್ಕೆ ಚರ್ಚೆಗೆ ಕರೆ ನೀಡಬೇಕಿತ್ತು: ಹೌದು, ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಕೇಳಿ ಬಂದಿತ್ತು. ಇವುಗಳ ಮಧ್ಯೆ ಮೊನ್ನೆ ನಡೆದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾಕತ್ ಇದ್ದರೆ ಅಂತ ಪದಪ್ರಯೋಗ ಮಾಡಿ ಕಾಂಗ್ರೆಸ್ ಗೆ ಸವಾಲ್ ಹಾಕಿದ್ರು. ಇದರ ಬೆನ್ನಲ್ಲೆ ಸಿದ್ದರಾಮಯ್ಯನವರು ಸಹ ಸಿಎಂ ಬೊಮ್ಮಾಯಿಗೆ ನಿಮಗೆ ಮಾನ ಮರ್ಯಾದೆ ಅನ್ನೋದೆ ಇಲ್ಲ, ನಿಮಗೆ ತಾಕತ್ ಅನ್ನೋದೆ ಇದ್ದರೆ 40 ಪರ್ಸೆಂಟ್ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿದರು.

ವೇದಿಕೆಯಲ್ಲಿ ಗೋವಿಂದ, ಗೋವಿಂದ ಎನ್ನುತ್ತಲೇ ವ್ಯಂಗ್ಯವಾಡಿದ ಮಾಜಿ ಸಿಎಂ ಸಿದ್ದರಾಮಯ್ಯ: ಇನ್ನು ವೇದಿಕೆಯಲ್ಲಿ ಮಾತು ಮಾತಿಗೂ ಸಚಿವ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದರು‌. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಗೋವಿಂದ ಕಾರಜೋಳ ಕಾರಣ ಎಂದು ಆರೋಪಿಸಿ, ಗೋವಿಂದ, ಗೋವಿಂದ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.

ನವೆಂಬರ್ ತಿಂಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಬರುತ್ತೇನೆ: ಮುಧೋಳದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ನವೆಂಬರ್ ತಿಂಗಳಲ್ಲಿ ಅಂತಿಮ ಮಾಡಿದ್ರೆ ಮತ್ತೇ  ಬಂದು ರಾಜಕೀಯ ಭಾಷಣ ಮಾಡುತ್ತೇನೆ ಎಂದು ಹೇಳುವ ಮೂಲಕ ನವಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಆಯಾ ಮತಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಬಹುದೆಂಬ ಮುನ್ಸೂಚನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದರು.

ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ: ಸಚಿವ ಶ್ರೀರಾಮುಲು ವ್ಯಂಗ್ಯ

ತಿಮ್ಮಾಪೂರ ಗುಣಗಾನ, ಶುಭಾಶಯ ಹೇಳಿ ಹಾರೈಸಿದ ಸಿದ್ದು: 60ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ವೇದಿಕೆ ಭಾಷಣದ ವೇಳೆ ತಮ್ಮ ಪಕ್ಕದಲ್ಲೇ ನಿಲ್ಲಿಸಿಕೊಂಡು ತಿಮ್ಮಾಪೂರ ಅವರ ಕಾರ್ಯವೈಖರಿ ಬಗ್ಗೆ ಹೇಳಿ ಗುಣಗಾನ ಮಾಡಿದರು. ಇನ್ನು ವೇದಿಕೆಯಲ್ಲಿ ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಆರ್.ಬಿ.ತಿಮ್ಮಾಪೂರ,  ಎಚ್.ವೈ.ಮೇಟಿ, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios