Asianet Suvarna News Asianet Suvarna News

Assembly Election ಹೊತ್ತಲ್ಲೇ ರಾಜಕೀಯ ನಿವೃತ್ತಿ ಘೋಷಿಸಿದ SM ಕೃಷ್ಣ: ಬಿಜೆಪಿಗೆ ಹಿನ್ನಡೆ?

ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ
ಪಕ್ಷದ ನಾಯಕರೊಬ್ಬರ ನಿವೃತ್ತಿಯಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುವ ಸಾಧ್ಯತೆ
ಪಕ್ಷದ ಹೈಕಮಾಂಡ್‌ ಮತ್ತು ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ ಮಾಜಿ ಸಿಎಂ
ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿಯನ್ನು ಕಡೆಗಣಿಸಲಾಯಿತೇ.?

 

Former Chief Minister announced his retirement from politics Will BJP suffer a setback sat
Author
First Published Jan 4, 2023, 2:23 PM IST

ಬೆಂಗಳೂರು (ಜ.04): ನಮ್ಮ ವಯಸ್ಸಿನ ಬಗ್ಗೆ ಅರಿವು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ನಾನು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದೇನೆ. 90ರ ವಯಸ್ಸಿನಲ್ಲಿ ನನಗೆ 50 ವರ್ಷದವರ ಹಾಗೆ ನಟನೆ ಮಾಡಲು ಬರುವುದಿಲ್ಲ ಎಂದು ನಿವೃತ್ತಿಯ ಬಗ್ಗೆ ಭಾರವಾದ ನುಡಿಗಳನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನುಡಿದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಕ್ರೀಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ.  ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90ರಲ್ಲಿ 50ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಅಂತ ತಿರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕ ವಾಗಿ ಕಾಣಿಸ್ಕೊಳ್ಳುತ್ತಿಲ್ಲ. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಸ್ಪಷ್ಟನೆ ನೀಡಿದರು. 

Mandya: ನನ್ನ ಜೀವನೋತ್ಸಾಹ ಕುಂದಿಲ್ಲ: ಎಸ್‌.ಎಂ.ಕೃಷ್ಣ

ಹೈಕಮಾಂಡ್‌ಗೆ ನನಗೇನು ಪೆನ್ಶನ್‌ ಕೊಡುತ್ತದೆಯೇ?: ಇನ್ನು ಸಾರ್ವಜನಿಕ ಕಾರ್ಯಕ್ರಮಗಲ್ಲಿ ತಮ್ಮನ್ನು ಪಕ್ಷದಿಂದ ಕಡೆಗಣಿಸಲಾಗುತ್ತದೆ ಎಂಬ ನೋವಿದೆಯೇ ಎಂದು ಮಾಧ್ಯಮ ಮಿತ್ರರಿಂದ ಕೇಳಲಾದ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಕೃಷ್ಣ ಅವರು, ನಾನೇ ರಿಟೈರ್ ಆಗುವಾಗ ಪಕ್ಷ ನನ್ನ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಬರುವುದಿಲ್ಲ. ರಾಜಕೀಯವಾಗಿ ನಿವೃತ್ತಿ ಬಗ್ಗೆ ಹೈಕಮಾಂಡ್ ನಾಯಕ ಗಮನಕ್ಕೆ ತಂದಿಲ್ಲ. ಅವರ ಗಮನಕ್ಕೆ ತಂದರೆ ನನಗೇನು ಅವರು ಫೆನ್ಶನ್ ಕೊಡುವುದಿಲ್ಲ. ಹೀಗಾಗಿ ಅವರ ಗಮನಕ್ಕೆ ತಂದಿಲ್ಲ. ನಾನೇ ಸ್ವಯಂ ಪ್ರೇರಿತರಾಗಿ ರಿಟೈರ್ (ನಿವೃತ್ತಿ) ಆಗುತ್ತಿರುವಾಗ ಇದರ ಬಗ್ಗೆ ಹೇಳಬೇಕಿಲ್ಲ ಎಂದು ಹೇಳಿದರು.

ಮೈಸೂರು ರಸ್ತೆಗೆ ನಾಲ್ವಡಿ ಹೆಸರು ಸೂಕ್ತ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ದೇಶ ಕಂಡ ಮಹಾನ್ ವ್ಯಕ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವುದು ಸೂಕ್ತವಾಗಿದೆ. ಅವರು ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸ ಮಾಡಿದ್ದಾರೆ. ಹೀಗಾಗಿ, ನಾನೂ ಕೂಡ ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನ ನಾಮಕರಣ ಮಾಡಲು ಕೇಂದ್ರ ಸಾರಿಗೆ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು. 

ದೇವೇಗೌಡರ ಉಗುರಿಗೂ ಅಮಿತ್‌ ಶಾ ಸಮ ಅಲ್ಲ: ಎಚ್‌ಡಿಕೆ ಕಿಡಿ

ಸಂಘಟನೆ ಬಗ್ಗೆ ಮೇಲೆ ಬಿದ್ದು ಸಲಹೆ ಕೊಡಲಾಗಲ್ಲ: ಇನ್ನು ರಾಜ್ಯದ ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ವಿಚಾರವಾಗಿ ಅಭಿವೃದ್ಧಿ ಕಾರ್ಡ್ ಬಳಕೆ ಮಾಡಬೇಕಾ ಅಥವಾ ಭಾವನಾತ್ಮಕ ವಿಚಾರ ಬಳಕೆಯಾದರೆ ಸೂಕ್ತವೇ...? ಎಂಬ ಬಗ್ಗೆ ನಾನೇನು ಹೇಳುವುದಿಲ್ಲ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಸಂಘಟನೆಯ ಪ್ರಯತ್ನ ನಡೆಯುತ್ತಿದೆ. ಆದರೆ, ಯಾವ ವಿಚಾರ ಸಂಘಟನೆಗೆ ಪೂರಕ ಅನ್ನೋ ಬಗ್ಗೆ ಆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯೋಚನೆ ಮಾಡಬೇಕು. ಸಂಘಟನೆ ಕುರಿತು ನಾನು ಮೇಲೆ ಬಿದ್ದು ಸಲಹೆ ಕೊಡಲು ಹೋಗಲ್ಲ. ಅವರಾಗಿಯೇ ಕೇಳಿದರೆ ನಾನು ಸಲಹೆ ಕೊಡುತ್ತೇನೆ ಎಂದು ಹೇಳಿದರು. 

Follow Us:
Download App:
  • android
  • ios