Asianet Suvarna News Asianet Suvarna News

ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ: ಕೇಂದ್ರ ಸಚಿವ ಅನುರಾಗ್ ಠಾಕೂ‌ರ್

ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ತಯಾರಿಸಿವೆ. ಅವರು ಕಾಂಗ್ರೆಸ್ ಸಿದ್ಧಾಂತವನ್ನು ಸಂಪೂರ್ಣ ಆಪೋಶನ ತೆಗೆದುಕೊಂಡು ರಾಷ್ಟ್ರವನ್ನು ನಾಶ ಮಾಡುವಂತಹ ಅಂಶಗಳನ್ನು ಸೇರಿಸಿವೆ: ಕೇಂದ್ರ ಸಚಿವ ಅನುರಾಗ್ ಠಾಕೂ‌ರ್ 

Foreign Power Behind Congress Manifesto Says Union Minister Anurag Thakur grg
Author
First Published Apr 28, 2024, 8:45 AM IST

ಹಮೀರ್‌ಪುರ(ಏ.28):  ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶಿ ಶಕ್ತಿಗಳು ತಯಾರಿಸಿ ದೇಶ ವನ್ನು ಧರ್ಮ ಮತ್ತು ಪ್ರಾಂತ್ಯಗಳ ಆಧಾರದಲ್ಲಿ ಒಡೆಯುವ ಹುನ್ನಾರ ಮಾಡಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂ‌ರ್ ಆರೋಪಿಸಿದ್ದಾರೆ.

ಶನಿವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ತಯಾರಿಸಿವೆ. ಅವರು ಕಾಂಗ್ರೆಸ್ ಸಿದ್ಧಾಂತವನ್ನು ಸಂಪೂರ್ಣ ಆಪೋಶನ ತೆಗೆದುಕೊಂಡು ರಾಷ್ಟ್ರವನ್ನು ನಾಶ ಮಾಡುವಂತಹ ಅಂಶಗಳನ್ನು ಸೇರಿಸಿವೆ. ಪ್ರಮುಖವಾಗಿ ಆಸ್ತಿ ಮರುಹಂಚಿಕೆ ಹೆಸರಿನಲ್ಲಿ ಮುಸ್ಲಿಮರಿಗೆ ಚಿನ್ನ ಕೊಡುವುದು ಮತ್ತು ದೇಶವನ್ನು ಅಣುಬಾಂದ್ ನೊಂದಿಗೆ ಸಮಾಧಿ ಮಾಡುವ ಹುನ್ನಾರ ನಡೆಸಿವೆ ಎಂದು ತಿಳಿಸಿದರು.

ಮೋದಿಯಿಂದ ವಿಕಸಿತ ಭಾರತ: ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್

ಈ ನಡುವೆ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ, ತುಕ್ಕೆ ಗ್ಯಾಂಗ್ ಇವೆ ಎಂಬ ಪದ ಬಳಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಠಾಕೂರ್ ವಿರುದ್ಧ ಕಾಂಗ್ರೆಸ್ ದೂರಿದೆ. 

Latest Videos
Follow Us:
Download App:
  • android
  • ios