ಶಿವಮೊಗ್ಗ: ಬಿಜೆಪಿಗೆ ಮತ ನೀಡದಿರಲು ರೈತ ಸಂಘ ನಿರ್ಧಾರ

ಜನವಿರೋಧಿ, ರೈತವಿರೋಧಿ ಧೋರಣೆ ಹೊಂದಿರುವ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರೈತ ಸಂಘದ ತೀರ್ಮಾನದಂತೆ ಬಿಜೆಪಿಗೆ ಮತ ನೀಡದಿರಲು ತೀರ್ಮಾನ ಕೈಗೊಂಡಿರುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಉಮೇಶ್‌ ಪಾಟೀಲ್‌ ಹೇಳಿದರು.

Farmers Sangh has decided not to vote for BJP in soraba at shivamogga rav

ಸೊರಬ (ಏ.27) : ಜನವಿರೋಧಿ, ರೈತವಿರೋಧಿ ಧೋರಣೆ ಹೊಂದಿರುವ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರೈತ ಸಂಘದ ತೀರ್ಮಾನದಂತೆ ಬಿಜೆಪಿಗೆ ಮತ ನೀಡದಿರಲು ತೀರ್ಮಾನ ಕೈಗೊಂಡಿರುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಉಮೇಶ್‌ ಪಾಟೀಲ್‌ ಹೇಳಿದರು.

ಬುಧವಾರ ಪಟ್ಟಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ(APMC), ಭೂಸುಧಾರಣೆ, ವಿದ್ಯುತ್‌ ಖಾಸಗೀಕರಣಗಳನ್ನು ರೈತರ ಸತತ 13 ತಿಂಗಳ ಹೋರಾಟದ ಫಲವಾಗಿ ಕೇಂದ್ರ ವಾಪಾಸ್‌ ಪಡೆಯಿತು. ಆದರೆ, ರಾಜ್ಯದಲ್ಲಿ ಈವರೆಗೂ ಬಿಜೆಪಿ ಸರ್ಕಾರ ವಾಪಾಸ್‌ ಪಡೆದಿಲ್ಲ. ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.

Karnataka election 2023: ಮತದಾನ ದಿನ ಜೋಗ ಜಲಪಾತ ಸೇರಿ ಪ್ರವಾಸಿ ತಾಣಗಳು ಬಂದ್‌

ಎಸ್‌.ಬಂಗಾರಪ್ಪ (S Bangarappa)ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರ 10 ಎಚ್‌ಪಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ್ದರು. ಆದರೆ, ಈಗಿನ ಸರ್ಕಾರ ವಿದ್ಯುತ್‌ ಖಾಸಗೀಕರಣಗೊಳಿಸಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಹುನ್ನಾರ ನಡೆಸುತ್ತಿದೆ. ಎಪಿಎಂಸಿ ಕಾಯ್ದೆಯು ರೈತರಿಗೆ ಮಾರಕವಾಗಿದೆ. ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಣೆ ಹಾಕುವುದಾಗಿದೆ. ಇದಲ್ಲದೇ, ಕೆಎಂಎಫ್‌ ಜೊತೆ ಅಮುಲ್‌ ಡೈರಿ ಸೇರಿಸುವುದಕ್ಕೆ ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ. ಈ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳು ಮತ್ತು ಕೃಷಿ ಉಪಕರಣಗಳು, ರಸಗೊಬ್ಬರ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಾಗಿದೆ ಇದರಿಂದ ಜನತೆಗೆ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪರವಾದ ರೈತರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಸಂಘದ ನಿರ್ದೇಶನದಂತೆ ಬೆಂಬಲ ಸೂಚಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸೈಯದ್‌ ಶಫೀವುಲ್ಲಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರೈತ ಮುಖಂಡರಾದ ಚಿತ್ರಶೇಖರಪ್ಪ ಗೌಡ, ಹನುಮಂತಪ್ಪ ಬಾವಿಕಟ್ಟಿ, ಕೆ.ಹುಚ್ಚಪ್ಪ ಉಳವಿ, ಸತೀಶ್‌ ನಾಯ್‌್ಕ, ಲೋಕಪ್ಪ, ಪ್ರಕಾಶ್‌, ವೀರೇಶ್‌ ಮಾವಲಿ ಸೇರಿದಂತೆ ಇತರರಿದ್ದರು.

Karnataka election 2023: ಇಂದು ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಭೇಟಿ

ಮುಖ್ಯಾ​ಧಿ​ಕಾರಿ ವಿರುದ್ಧ ತನಿಖೆ ಚುರು​ಕಾ​ಗ​ಲಿ​’

ಸೊರಬ(Soraba assembly constituency) ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಹಲವು ಆರೋಪಗಳಿದ್ದರೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಅವರ ಮೇಲೆ ಹಳೇ ತಾಲೂಕು ಕಚೇರಿಯ ಹಳೇ ನಾಟಾ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾವಾರು ವಿಚಾರಣೆ ನಡೆಯುತ್ತಿದೆ. ಮತ್ತೊಂದಡೆ ಪುರಸಭೆಯಲ್ಲಿ ಪೌರಕಾರ್ಮಿಕ ಮಹಿಳೆಯೊಬ್ಬರನ್ನು ಖಾತೆ ಬದಲಾವಣೆ ವಿಷಯ ನಿರ್ವಾಹಕಿ ಹುದ್ದೆಗೆ ನಿಯೋಜಿಸಿ, ಖಾತೆಯ ದಾಖಲೆಗಳನ್ನು ತಿದ್ದುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಪುರಸಭೆ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ. ಕೂಡಲೇ ಪೌರ ಕಾರ್ಮಿಕರನ್ನು ಅನ್ಯ ಕರ್ತವ್ಯಕ್ಕೆ ನಿಯೋಜಿಸಿರುವುದು ಸಲ್ಲದು. ಇದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಪುರಸಭೆ ಮುಖ್ಯಾಧಿಕಾರಿ ವಿರುದ್ಧದ ಆರೋಪದ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ರೈತ ಸಂಘದ ಉಮೇಶ್‌ ಪಾಟೀಲ್‌ ಆಗ್ರಹಿಸಿದರು.

Latest Videos
Follow Us:
Download App:
  • android
  • ios