ಪ್ರತಿ ಜಿಲ್ಲೆಯಿಂದ 5 ಲಕ್ಷ ಹಣ ಆಡಿಯೋ ವೈರಲ್: ಅಬಕಾರಿ ಸಚಿವರ ವಿರುದ್ಧ ACBಗೆ ದೂರು
* ಅಬಕಾರಿ ಸಚಿವರು ಪ್ರತಿ ಜಿಲ್ಲೆಗಳಿಂದ 5 ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆಡಿಯೋ
* ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಎಸಿಬಿಗೆ ದೂರು
* ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾರೆಡ್ಡಿ ಅವರಿಂದ ದೂರು
ಬೆಂಗಳೂರು, (ಜೂನ್.23): ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಅಬಕಾರಿ ಸಚಿವರು ಪ್ರತಿ ಜಿಲ್ಲೆಗಳಿಂದ 5 ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆಡಿಯೋ ವೈರಲ್ ವೈರಲ್ ಆದ ಬೆನ್ನಲ್ಲೇ ಆಡಿಯೋವನ್ನು ಆಧಾರವನ್ನಾಗಿ ಇಟ್ಟುಕೊಂಡು ರವಿಕೃಷ್ಣಾರೆಡ್ಡಿ ದೂರು ನೀಡಿದ್ದಾರೆ.
ನೀರಾವರಿ ಇಲಾಖೆ ಬಳಿಕ ಅಬಕಾರಿ ಇಲಾಖೆಯ ಅಕ್ರಮ ಬಯಲು: ತನಿಖೆಗೆ ಎಚ್‌ಡಿಕೆ ಆಗ್ರಹ
ಸಚಿವ ಕೆ. ಗೋಪಾಲಯ್ಯ ಪ್ರತಿ ಜಿಲ್ಲೆಗಳಿಂದ 5 ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆಂದು ಆರೋಪಿಸಿದ್ದ ಆಡಿಯೋ ವೈರಲ್ ಆಗಿರೋದ್ರಿಂದ, 4 ಜನ ಅಧಿಕಾರಿಗಳನ್ನ ಸಚಿವ ಕೆ. ಗೋಪಾಲಯ್ಯ ಅಮಾನತುಗೊಳಿಸಿದ್ದರು. ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಮಂತ್ರಿಗಳು ಕೂಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ 5 ಲಕ್ಷ ರೂ. ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.