ರಾಜ್ಯವನ್ನು ಕತ್ತಲೆಯಲ್ಲಿಡುವುದು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಗೋವಿಂದ ಕಾರಜೋಳ ಟೀಕೆ
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೂರುವರೆ ತಿಂಗಳಲ್ಲೇ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಕಾಂಗ್ರೆಸ್ ನ ಸಚಿವರು-ಶಾಸಕರು ವರ್ಗಾವಣೆಯಲ್ಲಿ ಬ್ಯುಸಿಯಾಗಿದ್ದು, ಕಾಮಗಾರಿಗಳಲ್ಲೂ ಕಮಿಷನ್ ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹರಿಹಾಯ್ದಿದ್ದಾರೆ.
ದಾವಣಗೆರೆ (ಸೆ.08): ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೂರುವರೆ ತಿಂಗಳಲ್ಲೇ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಕಾಂಗ್ರೆಸ್ ನ ಸಚಿವರು-ಶಾಸಕರು ವರ್ಗಾವಣೆಯಲ್ಲಿ ಬ್ಯುಸಿಯಾಗಿದ್ದು, ಕಾಮಗಾರಿಗಳಲ್ಲೂ ಕಮಿಷನ್ ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹರಿಹಾಯ್ದಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನಾಲ್ಕು ಕಡೆ ಥರ್ಮಲ್ ಪವರ್ ಫ್ಲಾಂಟ್ ಇವೆ. ಕೇಂದ್ರ ಸರ್ಕಾರದ ಪವರ್ ಪ್ರಾಜೆಕ್ಟ್ ಕೂಡ ಇದೆ. 31 ಸಾವಿರ ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ಸಿಗುತ್ತಿದೆ. ರಾಜ್ಯಕ್ಕಾಗುವಷ್ಟು15 ಸಾವಿರ ಮೆಗಾವ್ಯಾಟ್ ವಿದ್ಯುತ್ ಸದ್ಭಳಕೆ ಮಾಡಿಕೊಳ್ಳದ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ.
ಲೋಡ್ ಶೆಡ್ಡಿಂಗ್ ಆಗುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಸಚಿವರು ಗಾಢ ನಿದ್ದೆಗೆ ಜಾರಿದ್ದಾರೆ. ರಾಜ್ಯವನ್ನು ಕತ್ತಲೆಯಲ್ಲಿಡುವುದನ್ನೇ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಯೋಜನೆ ಎಂದು ಟೀಕಿಸಿದರು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ವಿಪ ಸದಸ್ಯ ನವೀನ, ಮುಖಂಡ ಎಚ್.ಎನ್.ಶಿವಕುಮಾರ, ವಿಶ್ವಾಸ್ ಇತರರಿದ್ದರು.
ನಾಯಿಗಳಂತೆ ಕಿತ್ತಾಡುತ್ತಿದ್ದವರೀಗ ಭಾಯಿ-ಭಾಯಿ: ಎಚ್‌ಡಿಕೆ-ಸಿಪಿಐ ವಿರುದ್ದ ಸಂಸದ ಸುರೇಶ್ ವಾಗ್ದಾಳಿ
ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರು ಹೋಗಲ್ಲ: ಬಿಜೆಪಿಯಿಂದ ಯಾವ ಮುಖಂಡರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ರಾಜಕಾರಣಿಗಳಾದವರು ಹಬ್ಬದಿನಗಳಂದು, ಆರೋಗ್ಯ ವಿಚಾರಿಸಲೆಂದು ಹೋಗಿ, ಭೇಟಿಯಾಗುವುದು ಸಹಜ. ಅದನ್ನೇ ಇಟ್ಟುಕೊಂಡು, ಇಂತಹವರು ಕಾಂಗ್ರೆಸ್‌ಗೆ ಸೇರುತ್ತಾರೆಂದು ಹೇಳುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಹೋಗಿ ಯಾರು ಬೀಳುತ್ತಾರೆ ಎಂದು ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಕಾರಜೋಳ ಪ್ರತಿಕ್ರಿಯಿಸಿದರು.