ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ: ನಡ್ಡಾ
8 ಸಾವಿರ ಕಿ.ಲೋ. ಈ ವಿಜಯ ಸಂಕಲ್ಪ ಯಾತ್ರೆ ನಡಯಲಿದ್ದು, ಈ ಬಾರಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ. ಮಾದೇಶ್ವರ ಸನ್ನಿದಿಯಲ್ಲಿ ಕರ್ನಾಟಕ ಸಂಸ್ಕೃತಿ, ಆಚಾರ, ವಿಚಾರ ಎಲ್ಲಾವು ಮಾದರಿಯಾಗಿದೆ.
ಹನೂರು(ಮಾ.02): ಯಶಸ್ವಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು. ಹನೂರು ಗೌರಿ ಶಂಕರ ಕಲ್ಯಾಣ ಮಂಟಪ ಸಮೀಪದ ಆವರಣದಲ್ಲಿ ಬಿಜೆಪಿಯಿಂದ ಏರ್ಪಡಿಸಲಾಗಿದ್ದ ಜನ ಸಂಕಲ್ಪ ಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
8 ಸಾವಿರ ಕಿ.ಲೋ. ಈ ವಿಜಯ ಸಂಕಲ್ಪ ಯಾತ್ರೆ ನಡಯಲಿದ್ದು, ಈ ಬಾರಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ. ಮಾದೇಶ್ವರ ಸನ್ನಿದಿಯಲ್ಲಿ ಕರ್ನಾಟಕ ಸಂಸ್ಕೃತಿ, ಆಚಾರ, ವಿಚಾರ ಎಲ್ಲಾವು ಮಾದರಿಯಾಗಿದೆ. ಈ ಬಾರಿ ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಧಾನಿ ಮೋದಿ ಬೆಂಗಳೂರು ನಿರ್ಮಾಪಕ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಮೈಸೂರು ಮತ್ತು ಚೆನ್ನೈ ಮಾರ್ಗವಾಗಿ ವಂದೇ ಮಾತರಂ ರೈಲು ಮಾರ್ಗವನ್ನು ಆರಂಭ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರತಿಯೊಬ್ಬರು ಶಿಕ್ಷಿತರಾಗಿದ್ದಾರೆ. ದೇಶದಲ್ಲಿ 40ರಷ್ಟುಡಿಜಿಟಲೀಕರಣವನ್ನು ಮೋದಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣ ಮಾಡಲು ಮೋದಿ ಕ್ರಮವಹಿಸಿದ್ದಾರೆ. ಕರ್ನಾಟಕದ ರೈಲ್ವೆ ಇಲಾಖೆಗೆ 7,000 ಕೋಟಿ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ. ಕೇಂದ್ರ ಬಜೆಟ್‌ಲ್ಲಿ ನಿರ್ಮಲ ಸೀತಾರಂ ಅವರು ರಾಜ್ಯಕ್ಕೆ ವಿವಿಧ ಕಾಮಗಾರಿ ಕೈಗೊಳ್ಳಲು ಸಾಕಷ್ಟುಅನುದಾನ ನೀಡಿದ್ದಾರೆ. ರೈತರು ಮಕ್ಕಳಿಗೆ ವಿದ್ಯಾನಿಧಿ ಮೂಲಕ ಸ್ಕಾಲರ್ಶಿಪ್ ನೀಡಲು 4400 ಕೋಟಿ ಮೀಸಲಿಟ್ಟಿದ್ದಾರೆ. ಹಿಂ.ವ ಬಡವರು ದೀನದಲಿತರ ಆರ್ಥಿಕವಾಗಿ ಸಬಲರಾಗಲು ಹಲವಾರು ಕಾರ್ಯಕ್ರಮಗಳನ್ನು ಮೋದಿಯವರು ನೀಡಿದ್ದಾರೆ.
ಪ್ರಧಾನಿ ಮೋದಿಯವರು ಅಭಿವೃದ್ಧಿಯ ಕಾಳಜಿ ಹೊಂದಿದ್ದು ದೇಶದಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಸ್ಪಷ್ಟಬಹುಮತ ಬರಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಿಎಂ ಬಿಸ್ವೈ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಜನಪ್ರಿಯ ಕಾರ್ಯಕ್ರಮ ಮನೆ ಮನೆಗೆ ತಲುಪಿಸುವ ಮೂಲಕ ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು 15-20 ಸಾವಿರ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತನು ಸೇರಿಸಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ವಿಜಯೇಂದ್ರ, ನಾನು ಸಹ ಮತ್ತೊಮ್ಮೆ ಕ್ಷೇತ್ರಕ್ಕೆ ಆಗಮಿಸುತ್ತೇವೆ. ನಾನು, ಮುಖ್ಯಮಂತ್ರಿ ಆಗಿದ್ದ ವೇಳೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದೇನೆ. ಪ್ರಧಾನಿ ಮೋದಿ, ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರು ರು. ನೀಡಿದರೆ ರಾಜ್ಯ ಸರ್ಕಾರ ನಾಲ್ಕು ಸಾವಿರ ರು.ನೀಡುವ ಮೂಲಕ ರೈತರ ಕಲ್ಯಾಣಕ್ಕೆ ಮುಂದಾಗಿದೆ.
ಪರಿಶಿಷ್ಟಜಾತಿ ಪಂಗಡದ ಹಿಂದುಳಿದವರ ಕಲ್ಯಾಣಕ್ಕೆ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈ ಭಾಗದಲ್ಲಿ ಎಸ್.ಟಿ. ಸಮುದಾಯದವರು ಇದ್ದಾರೆ. ಮೀಸಲಾತಿಯನ್ನು 3%ನಿಂದ 7% ಗೆ ಹೆಚ್ಚಳ ಮಾಡಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದೇವೆ. ಕಾಂಗ್ರೆಸ್‌ನಲ್ಲಿ ಯಾರು ನಾಯಕರಿಲ್ಲ. ಬಿಜೆಪಿಯಲ್ಲಿ ಪ್ರಧಾನಿ ಮೋದಿ ಅಮಿತ್ ಶಾ ಮುಂತಾದ ಘಟಾನುಘಟಿ ನಾಯಕರಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ದಿವಾಳಿತನ ತಂದರು. ಈಗ ಅಧಿಕಾರಕ್ಕೆ ಬರುತ್ತೇವೆಂದು ಮೀಸೆ ತಿರುವುತ್ತಿದ್ದಾರೆ. ಈ ಬಾರಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಿಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹನೂರು ಕ್ಷೇತ್ರ ಈಗಾಗಲೇ ಸಮಗ್ರ ಅಭಿವೃದ್ಧಿ ಆಗಬೇಕಾಗಿತ್ತು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜನ್ನು ನಾವು ಕೊಟ್ಟಿದ್ದು, ಇಂದಿನ ದುಸ್ಥಿತಿ ನೋಡಿದರೆ ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಆಗಿದೆ. ಹಾಸಿಗೆ, ದಿಂಬಿನಲ್ಲಿ ಭ್ರಷ್ಟಚಾರ, ಬೆಂಗಳೂರು ಬಿಡಿಎ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಆ ಭಾಗ್ಯ ಈ ಭಾಗ್ಯ ಕೊಟ್ಟಿವೆಂದು ದೌರ್ಭಾಗ್ಯಕೊಟ್ಟಿದೆ. ಈಗಾಗಲೇ ಕಾಂಗ್ರೆಸ್ ರಾಜ್ಯದ್ಯಂತ ನೆಲ ಕಚ್ಚಿದೆ. ಚಾಮರಾಜನಗರದಲ್ಲಿ ಉಳಿದುಕೊಂಡಿದ್ದು ಮುಂದಿನ ಚುನಾವಣೆಯಲ್ಲಿ ನಾಲ್ಕುಕ್ಕೂ ಸ್ಥಾನಕ್ಕೆ ನಾಲ್ಕು ಸ್ಥಾನ ಗೆಲ್ಲಲು ಶ್ರಮಿಸಬೇಕು. ಹಿಂದುಳಿದವರ ಕಲ್ಯಾಣಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರ ಜಮೀನುಗಳ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಲ್ಪಿಸಿದರು. ಪ್ರವಾಹ ಸಂದರ್ಭದಲ್ಲಿ ಲಕ್ಷಾಂತರ ವಸತಿ ಸೌಕರ್ಯವನ್ನು ಕಲ್ಪಿಸಿದರು. ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಯೋಜನೆ, ಸುರಕ್ಷಾ ಯೋಜನೆ, ಗರೀಬ್ ಕಲ್ಯಾಣ್, ಪ್ರಧಾನಮಂತ್ರಿ ಅವಾಜ್, ಮುದ್ರಾ ಯೋಜನೆ ಇನ್ನಿತರೆ ಯೋಜನೆ ನೀಡಲಾಗಿದೆ. ಹನೂರು ಅಭಿವೃದ್ಧಿಗೆ ಇನ್ನೊಂದು ವಾರದ ಒಳಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು. ಆಸ್ಪತ್ರೆ ಮೇಲ್ದರ್ಜೆ, ಕಾಲೇಜು ಸ್ಥಾಪಿಸಲಾಗುವುದು.
ಚಂಗಡಿ ಪುನರ್ವಸತಿ:
ಚಂಗಡಿಗ್ರಾಮ ಪುನರ್ವಸತಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಇನ್ನಷ್ಟುಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ನಿರ್ದೇಶನದಂತೆ ಭರವಸೆ ನೀಡಿದರು.
ಸಿದ್ದು ಸೋಲಿಸಲು ಕೋಲಾರದ ದಲಿತರು ಕಾಯ್ತಿದ್ದಾರೆ: ಕೆ.ಎಸ್.ಈಶ್ವರಪ್ಪ
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ಮೋದಿ, ಅಮಿತ್ ಷಾ, ಬಿಟ್ಟರೆ ಯಾರಿದ್ದಾರೆ ಎಂದು ಕಾಂಗ್ರೆಸ್ ನವರು ಕೇಳುತ್ತಿದ್ದಾರೆ. ನಿಮಗೆ ಯಾರು ಇಲ್ಲಾ. ಸಿದ್ದರಾಮಯ್ಯ ಅವರು ನರೇಂದ್ರ ಮೋದಿಯವರನ್ನು ನರಹಂತಕ ಎಂದು ಕರೆದಿದ್ದಾರೆ. ಸರ್ಜಿಕಲ್ ಸ್ಟೆ್ರತ್ರೖಕ್ ಮೂಲಕ ಪಾಕಿಸ್ತಾನ ಉಗ್ರಗಾಮಿಗಳನ್ನು ಸದೆ ಬಡಿದವರು ಮೋದಿ ಅವರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಎಲ್ಲಿ ನಿಲ್ಲಬೇಕೆಂದು ತಿಳಿದಿಲ್ಲ. ಚಾಮುಂಡೇಶ್ವರಿ 5ಬಾರಿ ಗೆದ್ದಿದ್ದರಲ್ಲ. ಯಾಕೇ ಕೋಲಾರಕ್ಕೆ ಹೋಗಬೇಕು. ಅಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಡಾ.ಜಿ.ಪರಮೇಶ್ವರ ಸೋಲಿಸಿರುವುದನ್ನು ಮರೆತಿಲ್ಲ. ವರ್ತೂರ ಹುಲಿಯನ್ನು ಕೋಲಾರದಲ್ಲಿ ಮಣಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಸಚಿವರಾದ ಶೋಭಾ ಕರಂದ್ಲಾಜೆ, ಸುನೀಲ್ ಕುಮಾರ್, ಅರಗಜ್ಞಾನೇಂದ್ರ, ಗೋಪಾಲಯ್ಯ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಎನ್.ಮಹೇಶ್, ನಿರಂಜನ್, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್, ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್,ಯಾತ್ರೆ ಉಸ್ತುವಾರಿ ಡಾ.ಎ.ಆರ್.ಬಾಬು, ಹನೂರು ಮಂಡಲ ಅಧ್ಯಕ್ಷ ಮಾಲಿಂಗಕಟ್ಟೆಸಿದ್ದಪ್ಪ, ಮುಖಂಡರಾದ ಪ್ರೀತನ್ ನಾಗಪ್ಪ, ಜನಧ್ವನಿ ವೆಂಕಟೇಶ್, ನಿಶಾಂತ್, ಕಾಡಾ ಅಧ್ಯಕ್ಷ ನಿಜಗುಣ ರಾಜು ಉಪಸ್ಥಿತರಿದ್ದರು.