Karnataka Assembly Elections 2023: ಬೆಂಗಳೂರಿನ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ..!
ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಬರ್ತಾರೆ, ಗೆದ್ದ ನಂತ್ರ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಲ್ಲ ಅಂತ ರಾಜಕಾರಣಿಗಳ ವಿರುದ್ಧ ಹರಿಹಾಯ್ದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸೋಮೆಶ್ವರ ವಾರ್ಡ್‌ನ ನಿವಾಸಿಗಳು.
ಬೆಂಗಳೂರು(ಏ.02): ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸೋಮೆಶ್ವರ ವಾರ್ಡ್‌ನ ನಿವಾಸಿಗಳು ಚುನಾವಣೆಯನ್ನ ಬಹಿಷ್ಕರಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಬರ್ತಾರೆ, ಗೆದ್ದ ನಂತ್ರ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಲ್ಲ ಅಂತ ರಾಜಕಾರಣಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಸೋಮೇಶ್ವರ ವಾರ್ಡ್‌ಗೆ ಪ್ರವೇಶ ಪಡೆಯುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರತಿನಿತ್ಯ ಓಡಾಟ ನಡೆಸುತ್ತೇವೆ. ಸೋಮೇಶ್ವರ ಬಡಾವಣೆ ದ್ವಾರವೇ ಸಂಪೂರ್ಣವಾಗಿ ಹಾಳಾಗಿದೆ. ಕಳೆದ 16 ವರ್ಷದ ಹಿಂದೆ ಈ ದ್ವಾರವನ್ನ ನಿರ್ಮಾಣ ಮಾಡಿದ್ರು. ಆದ್ರೆ ದ್ವಾರದ ಸೂಕ್ತ ನಿರ್ವಹಣೆ ಇಲ್ಲದೆ ಇವತ್ತೊ ನಾಳೆ ಬೀಳುವ ಸ್ಥಿತಿಯಲ್ಲಿದೆ ಅಂತ ಕಿಡಿ ಕಾರಿದ್ದಾರೆ.
KARNATAKA ELECTION 2023: ಚನ್ನಗಿರಿ ಕ್ಷೇತ್ರದ ಬಿಜೆಪಿ ‘ಗುಪ್ತ ಮತದಾನ’ ಬಹಿರಂಗ
ಪ್ರತಿನಿತ್ಯ ಈ ರಸ್ತೆಯಲ್ಲೇ ಸಾವಿರಾರು ಅಂಬ್ಯುಲೆನ್ಸ್ ವಾಹನಗಳು ನಿಮ್ಹಾನ್ಸ್‌ಗೆ ಬರುತ್ತವೆ. ಸಾಕಷ್ಟು ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಾರೆ. ಆದ್ರೂ ಕೂಡ ಸೋಮೇಶ್ವರ ದ್ವಾರವನ್ನ ಸರಿಮಾಡುವ ಕೆಲಸ ಯಾವುದೇ ಪಕ್ಷಗಳು ಮಾಡುತ್ತಿಲ್ಲ. ಹೀಗಾಗಿ ನಾವು ಈ ಬಾರಿ ಚುನಾವಣೆಯನ್ನ ಭಹಿಷ್ಕರಿಸುತ್ತೇವೆ ಅಂತ ರಾಜಕೀಯ ಪಕ್ಷಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.