ಗುಜರಾತ್ ಚುನಾವಣೆ ದಿನಾಂಕ ಪ್ರಕಟ, ಉಚಿತ ಆಫರ್ ಘೋಷಿಸಿದ ಕೇಜ್ರಿವಾಲ್!
ಗುಜರಾತ್ ಚುನಾವಣೆ ದಿನಾಂಕ ಘೋಷಣೆಯಾಗಿದೆ 2 ಹಂತದಲ್ಲಿ ಮತದಾನ ನಡೆಯಲಿದೆ. ದಿನಾಂಕ ಘೋಷಣೆಯಾಗುತ್ತಿದ್ದಂತೆ ಇತ್ತ ದೆಹಲಿ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ಗುಜರಾತ್‌ನಲ್ಲಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿರುವ ಆಮ್ ಆದ್ಮಿ ಪಾರ್ಟಿಗೆ ಕೇಜ್ರಿವಾಲ್ ಘೋಷಣೆ ಮತ್ತಷ್ಟು ಮತಗಳನ್ನು ತಂದುಕೊಡುತ್ತಾ ಅನ್ನೋ ಚರ್ಚೆ ಘೋಷಣೆಯಾಗಿದೆ.
ನವದೆಹಲಿ(ನ.03): ಚುನಾವಣೆ ಹತ್ತಿರಬರುತ್ತಿದ್ದಂತೆ ಬಹುತೇಕ ಪಕ್ಷಗಳು ಉಚಿತ ಆಫರ್ ಘೋಷಿಸುತ್ತದೆ. ಈ ಪರಿಪಾಠ ನಿಲ್ಲಬೇಕು ಅನ್ನೋ ಹೋರಾಟವೂ ನಡೆಯುತ್ತಿದೆ. ಆದರೆ ಪರ ವಿರೋಧಗಳ ನಡುವೆ ಆಮ್ ಆದ್ಮಿ ಪಾರ್ಟಿ ಉಚಿತ ಆಫರ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಗುಜರಾತ್ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಆಪ್ ಮುಖ್ಯಸ್ಥರ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ಗುಜರಾತ್ ಜನತೆಯಲ್ಲಿ ಒಂದೇ ಒಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನಮಗೆ ಅವಕಾಶ ನೀಡಿದರೆ ಉಚಿತ ವಿದ್ಯುತ್, ಉಚಿತ ಶಾಲೆ ಹಾಗೂ ಉಚಿತ ಆಸ್ಪತ್ರೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಗುಜರಾತ್ ಜನರನ್ನು ಉಚಿತವಾಗಿ ಆಯೋಧ್ಯೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಈ ಮೂಲಕ ಹಿಂದೂ ಮತದಾರರ ಮತ ಸೆಳೆಯಲು ಉಚಿತ ಆಫರ್ ಜೊತೆಗೆ ಧರ್ಮದ ಆಫರ್ ಕೂಡ ನೀಡಿದ್ದಾರೆ.
ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದಲೇ ಮೊರ್ಬಿ ದುರಂತ ನಡೆದಿದೆ. ಇದರ ಪರಿಣಾಮ 130ಕ್ಕೂ ಹಚ್ಚು ಮಂದಿ ಮೃತಪಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ಪ್ರಕಾರ ಆಮ್ ಆದ್ಮಿಪಾರ್ಟಿ 90 ರಿಂದ 95 ಸ್ಥಾನ ಗೆಲ್ಲುವುದು ಖಚಿತವಾಗಿದೆ. ಇದೇ ರೀತಿ ಮುಂದುವರಿದರೆ ಚುನಾವಣೆ ವೇಳೆಗೆ ಆಮ್ ಆದ್ಮಿ ಪಾರ್ಟಿ 140 ರಿಂದ 150 ಸ್ಥಾನ ಗೆಲ್ಲಲಿದೆ. ಗುಜರಾತ್‌ನಲ್ಲಿ ಅತೀ ದೊಡ್ಡ ಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಹಿಡಿಯಲಿದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
GUJARAT ELECTION 2022: ಗುಜರಾತ್‌ನಲ್ಲಿ ಡಿಸೆಂಬರ್ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!
ಗುಜರಾತ್‌ನ 183 ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದೆ. 2017ರ ವಿಧಾನಸಭಾ ಚುನಾವಣೆ ಹಾಗೂ 2022ರ ಚುನಾವಣೆಗೆ ಬಹಳ ವ್ಯತ್ಯಾಸವಿದೆ. ಕೇವಲ ದೆಹಲಿಯಲ್ಲಿದ್ದ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿದೆ. ಇದೀಗ ಗುಜರಾತ್ ಸರದಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಕಾಲ ಮುಗೀತು. ಇದೀಗ ಬಿಜೆಪಿ ವಿರೋಧ ಪಕ್ಷವಾಗಲಿದೆ. ಆಮ್ ಆದ್ಮಿ ಆಡಳಿತ ಪಕ್ಷವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ಎರಡು ದಶಕದಿಂದ ಬಿಜೆಪ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಆಪ್ ಬಾವುಟ ಹಾರಿಸಲು ಸಜ್ಜಾಗಿದೆ. ಇದಕ್ಕಾಗಿ ಹಿಂದುತ್ವ, ಬಲಪಂಥಿಯವನ್ನು ವಿರೋಧಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಇದೀಗ ಹಿಂದುತ್ವದ ಪರ ಮಾತನಾಡುತ್ತಿದ್ದಾರೆ. ಹಿಂದೂ ಮತಗಳನ್ನು ಸೆಳೆಯಲು ಎನೆಲ್ಲಾ ಕಸರತ್ತು ಮಾಡಬೇಕು ಅವೆಲ್ಲವನ್ನೂ ಮಾಡುತ್ತಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಯಾರಿಗೆ ಗೆಲುವು? ಶೇ.66 ರಷ್ಟು ಜನ ಬಿಜೆಪಿಗೆ ಕಡೆ ಒಲವು, ಸಮೀಕ್ಷಾ ವರದಿ!
ಪಂಜಾಬ್ ರೀತಿ ಗುಜರಾತ್‌ನಲ್ಲೂ ಜನಾಭಿಪ್ರಾಯ ಸಂಗ್ರಹದ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಆಪ್ ನಿರ್ಧರಿಸಿದೆ. ‘ರಾಜ್ಯದ ಜನಾಭಿಪ್ರಾಯಕ್ಕೆ ಅನುಗುಣವಾಗಿ ನ.4ರಂದು ಮುಂಬರುವ ಗುಜರಾತ್ ಚುನಾವಣೆಯ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.