2016-17ರಿಂದ 2021-22ರ ಅವಧಿಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾರೆ 16437 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಹಣ ಚುನಾವಣಾ ಬಾಂಡ್‌ಗಳ ಮೂಲಕವೇ ಸಲ್ಲಿಕೆಯಾಗಿದೆ ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ನ ವರದಿ ಹೇಳಿದೆ.

ನವದೆಹಲಿ: 2016-17ರಿಂದ 2021-22ರ ಅವಧಿಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾರೆ 16437 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಹಣ ಚುನಾವಣಾ ಬಾಂಡ್‌ಗಳ ಮೂಲಕವೇ ಸಲ್ಲಿಕೆಯಾಗಿದೆ ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ನ ವರದಿ ಹೇಳಿದೆ.

ಕಳೆದ 6 ವರ್ಷಗಳಲ್ಲಿ ರಾಜಕೀಯ ಪಕ್ಷಗಳು 16437 ಕೋಟಿ ರು. ದೇಣಿಗೆ ಪಡೆದಿವೆ. ಇದರಲ್ಲಿ ಶೇ.56ರಷ್ಟುಅಂದರೆ 9,188.35 ಕೋಟಿ ರು.ಗಳನ್ನು ಚುನಾವಣಾ ಬಾಂಡ್‌ ರೂಪದಲ್ಲಿ ಪಡೆದುಕೊಂಡಿವೆ. ಒಟ್ಟು ದೇಣಿಗೆಯಲ್ಲಿ ಬಿಜೆಪಿ 10,122 ಕೋಟಿ ರು., ಕಾಂಗ್ರೆಸ್‌ 1,547 ಕೋಟಿ ರು., ಟಿಎಂಸಿ 823 ಕೋಟಿ ರು. ಪಡೆದುಕೊಂಡಿವೆ ಎಂದು ವರದಿ ತಿಳಿಸಿದೆ.

ಕಾರ್ಪೋರೇಟ್‌ ವಲಯದಿಂದ 4,614 ಕೋಟಿ ರು. (ಶೇ.28), ಇತರ ವಲಯದಿಂದ 2,634 ಕೋಟಿ ರು. (ಶೇ.16) ಪಡೆದುಕೊಂಡಿವೆ. ರಾಷ್ಟ್ರೀಯ ಪಕ್ಷಗಳು 13,190 ಕೋಟಿ ರು. (ಶೇ.743ರಷ್ಟುಹೆಚ್ಚಳ) ಹಾಗೂ ಪ್ರಾದೇಶಿಕ ಪಕ್ಷಗಳು 3,246 ಕೋಟಿ ರು. (ಶೇ.48ರಷ್ಟುಹೆಚ್ಚಳ) ಪಡೆದುಕೊಂಡಿವೆ.

Reporters Dairy: ಯುವಕರ ಕ್ರಿಕೆಟ್‌ ‘ಆಟ’ಕ್ಕೆ ಜನನಾಯಕರು ಬೇಸ್ತು: ಟೂರ್ನಿ ಹೆಸರಲ್ಲಿ ನಾಯಕರಿಂದ ದೇಣಿಗೆ ಸಂಗ್ರಹ