Asianet Suvarna News Asianet Suvarna News

ರೈತರ ಹಣ ಲೂಟಿ ಮಾಡುತ್ತಿದೆ ಡಬಲ್‌ ಎಂಜಿನ್‌ ಸರ್ಕಾರ: ಎಚ್‌ಡಿಕೆ

ದಿನಸಿ ವಸ್ತುಗಳ ಬೆಳೆ ಗಗನಕ್ಕೇರಿದೆ. ಪ್ರಧಾನಮಂತ್ರಿ ಅಚ್ಚೇ ದಿನ್‌ ತರುತ್ತೇನೆ ಎಂದು ಹೇಳಿದ್ದು, ಇಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಳ್ಳೆಯ ದಿನಗಳು ಬರಲೇ ಇಲ್ಲ. ಇಂತಹ ಸರ್ಕಾರಗಳನ್ನು ಕಿತ್ತೆಸೆದು ಜನಪರ ಸರ್ಕಾರ ಜೆಡಿಎಸ್‌ ಪಕ್ಷಕ್ಕೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದ ಕುಮಾರಸ್ವಾಮಿ. 

Double Engine Government is Looting Farmers Money Says HD Kumaraswamy grg
Author
First Published Jan 19, 2023, 10:30 PM IST

ಇಂಡಿ(ಜ.19): ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದಲ್ಲಿ ರೈತರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿಯೊಂದು ಇಲಾಖೆ ಸರ್ಕಾರದಿಂದ ಖಾಸಗೀಕರಣ ಮಾಡಿ ಉಳ್ಳವರ ಪಾಲು ಮಾಡಿ ಕೋಟ್ಯಂತರ ಜನರ ಉದ್ಯೋಗ ಕಸಿದುಕೊಂಡು ಬೀದಿ ಪಾಲು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಜೆಡಿಎಸ್‌ ಪಂಚರತ್ನ ಯೋಜನೆ ಕಾರ್ಯಕ್ರಮ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿನಸಿ ವಸ್ತುಗಳ ಬೆಳೆ ಗಗನಕ್ಕೇರಿದೆ. ಪ್ರಧಾನಮಂತ್ರಿ ಅಚ್ಚೇ ದಿನ್‌ ತರುತ್ತೇನೆ ಎಂದು ಹೇಳಿದ್ದು, ಇಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಳ್ಳೆಯ ದಿನಗಳು ಬರಲೇ ಇಲ್ಲ. ಇಂತಹ ಸರ್ಕಾರಗಳನ್ನು ಕಿತ್ತೆಸೆದು ಜನಪರ ಸರ್ಕಾರ ಜೆಡಿಎಸ್‌ ಪಕ್ಷಕ್ಕೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.

ಕಿತ್ತೂರು ಕರ್ನಾಟಕ ವಿಭಾಗದ ಜೆಡಿಎಸ್‌ ಅಧ್ಯಕ್ಷ ವಿಜಯಕುಮಾರ ಭೋಸಲೆ ಮಾತನಾಡಿ, ಭತಗುಣಕಿ ಗ್ರಾಮ ಅಭಿವೃದ್ಧಿಯಿಂದ ಸಾಕಷ್ಟುವಂಚಿತವಾಗಿದ್ದು, ಜೆಡಿಎಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದರೇ ಗ್ರಾಮದ ರಸ್ತೆ, ವಿದ್ಯುತ್‌ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಷ್ಟೆಅಲ್ಲದೇ ಭತಗುಣಕಿ ಗ್ರಾಮದಲ್ಲಿ ವೈಜ್ಞಾನಿಕ ರೀತಿಯಲ್ಲಿ ಉತ್ತಮ ರಸ್ತೆ ಹಾಗೂ ಬಡಜನರಿಗೆ ವಸತಿ ಒದಗಿಸಲು ಕುಮಾರಣ್ಣ ಅವರ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.

ಅಧಿಕಾರ ನೀಡಿದರೆ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಎಚ್‌ಡಿಕೆ

ಸಿದ್ದಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿದರು. ಜೆಡಿಎಸ್‌ ಅಭ್ಯರ್ಥಿ ಬಿ.ಡಿ.ಪಾಟೀಲ, ಜೆಡಿಎಸ್‌ ಎಸ್ಸಿ ಘಟಕದ ರಾಜ್ಯ ಉಪಾಧ್ಯಕ್ಷ ಮರೆಪ್ಪ ಗಿರಣಿವಡ್ಡರ, ವಿಧಾನ ಪರಿಷತ ಮಾಜಿ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಏಗಪ್ಪಗೌಡ ಶಿವಧಾರೆ, ಭತಗುಣಕಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ಹೊನ್ನಕೊರೆ, ಶಿವುಪುತ್ರ ದುದ್ದಗಿ, ಅಪ್ಪಾಸಾಬ ಅಂಕಲಗಿ, ನಾಗೇಶ ತಳಕೇರಿ, ಡಾ.ರಮೇಶ ರಾಠೋಡ, ಸದ್ದಾಮ ಅರಬ, ಗಂಗಾಧರಗೌಡ ಬಿರಾದಾರ, ಅಯೂಬ್‌ ನಾಟೀಕಾರ, ವಿದ್ಯಾ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ, ತಾನಾಜಿ ಪವಾರ, ಸಂತೋಷ ಪವಾರ, ರಾಜಶೇಖರ ಬನಗೊಂಡೆ, ವಿಕಾಸ ನಿಕಂ, ಅನೀತಾ ಬನಸೊಡೆ, ಮಹಾಂತೇಶ ವಾಲೀಕಾರ ಮೊದಲಾದವರು ಇದ್ದರು.

ಎಚ್‌ಡಿಕೆಗೆ ಧಾನ್ಯಗಳ ತುಲಾಭಾರ ಮಾಡಿದ ಭೋಸಲೆ

ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಜೆಡಿಎಸ್‌ ಪಂಚರತ್ನ ಯೋಜನೆ ಕಾರ್ಯಕ್ರಮ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜೆಡಿಎಸ್‌ ಕಿತ್ತೂರ ಕರ್ನಾಟಕ ವಿಭಾಗದ ಅಧ್ಯಕ್ಷ ವಿಜಯಕುಮಾರ ಭೋಸಲೆ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರು ಬೆಳೆದ ಧಾನ್ಯಗಳ ಮೂಲಕ ತುಲಾಭಾರ ಮಾಡಿದರು.

ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಕುಮಾರಸ್ವಾಮಿ

ಬರುವ 2023ರ ಚುನಾವಣೆ ಬರಲ್ಲಿದ್ದು, ಬಿ.ಡಿ.ಪಾಟೀಲ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅತ್ಯಂತ ಸರಳ ಜೀವಿ, ಸಾಧಾ ಮನುಷ್ಯ, ದುರಂಕಾರವಿಲ್ಲ. ತಮ್ಮ ಸೇವೆ ಮಾಡಲು ಒಂದು ಬಾರಿ ಅವಕಾಶ ಮಾಡಿಕೊಡಿ ಸದಾ ರೈತರ, ಬಡವರ, ಶೋಷಿತ ವರ್ಗದ ಧ್ವನಿಯಾಗಿ ಹುಟ್ಟು ಹೋರಾಟ ಮಾಡುತ್ತ ಬಂದಿರುವ ಈ ಭಾಗದ ನೀರಾವರಿಗಾಗಿ ರಕ್ತದ ಮೂಲಕ ಪತ್ರ ಬರೆದಿರುವ ಸಜ್ಜನ ವ್ಯಕ್ತಿಗೆ ಆಶೀರ್ವಾದ ಮಾಡಿ ಆರಿಸಿ ತಂದರೆ ನಿಮ್ಮ ಮನೆ ಮಗನಾಗಿ ಸೇವೆ ಮಾಡುತ್ತಾನೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಭತಗುಣಕಿ ಗ್ರಾಮ ಅಭಿವೃದ್ಧಿಯಿಂದ ಸಾಕಷ್ಟುವಂಚಿತವಾಗಿದ್ದು, ಜೆಡಿಎಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದರೇ ಗ್ರಾಮದ ರಸ್ತೆ, ವಿದ್ಯುತ್‌ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಷ್ಟೆಅಲ್ಲದೇ ಭತಗುಣಕಿ ಗ್ರಾಮದಲ್ಲಿ ವೈಜ್ಞಾನಿಕ ರೀತಿಯಲ್ಲಿ ಉತ್ತಮ ರಸ್ತೆ ಹಾಗೂ ಬಡಜನರಿಗೆ ವಸತಿ ಒದಗಿಸಲು ಕುಮಾರಣ್ಣ ಅವರ ಮೇಲೆ ಒತ್ತಡ ಹಾಕಲಾಗುವುದು ಅಂತ , ಕಿತ್ತೂರು ಕರ್ನಾಟಕ ವಿಭಾಗದ ಜೆಡಿಎಸ್‌ ಅಧ್ಯಕ್ಷ ವಿಜಯಕುಮಾರ ಭೋಸಲೆ ತಿಳಿಸಿದ್ದಾರೆ. 

Follow Us:
Download App:
  • android
  • ios