ನಾನು ರಾಜಕೀಯಕ್ಕೆ ಬರಲ್ಲ: ರಜನಿ ಪುನರುಚ್ಚಾರ| ರಾರ‍ಯಲಿ, ಪ್ರದರ್ಶನಗಳು ನೋವು ತರಿಸುತ್ತಿವೆ

ಚೆನ್ನೈ(ಜ.12): ನಟ ರಜನಿಕಾಂತ್‌ ಅವರು ರಾಜಕೀಯಕ್ಕೆ ಬರಲೇಬೇಕು ಎಂದು ಆಗ್ರಹಿಸಿ ಅಭಿಮಾನಿಗಳು ಭಾನುವಾರ ಚೆನ್ನೈನ ವಲ್ಲುವರ್‌ ಕೊಟ್ಟಾಂನಲ್ಲಿ ಬೃಹತ್‌ ರಾರ‍ಯಲಿ ನಡೆಸಿದ ಬೆನ್ನಲ್ಲೇ, ಇಂಥ ರಾರ‍ಯಲಿಗಳನ್ನು ನಡೆಸದಂತೆ ಸ್ವತಃ ರಜನಿಕಾಂತ್‌ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸೋಮವಾರ ಟ್ವೀಟರ್‌ ಮೂಲಕ ಪ್ರತಿಕ್ರಿಯಿಸಿರುವ ರಜನಿಕಾಂತ್‌, ‘ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ ನನ್ನ ನಿರ್ಧಾರದ ವಿರುದ್ಧ ಅಭಿಮಾನಿಗಳು ಹಾಗೂ ರಜನಿ ಮಕ್ಕಳ್‌ ಮಂದ್ರಂ (ಆರ್‌ಎಂಎಂ) ಪಕ್ಷದಿಂದ ಹೊರಹಾಕಿರುವ ಕೆಲವು ಕಾರ‍್ಯಕರ್ತರು ಚೆನ್ನೈನಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಾನು ನನ್ನ ನಿರ್ಧಾರವನ್ನು ತೆಗೆದುಕೊಂಡಾಗಿದೆ. ದಯವಿಟ್ಟು ಇಂಥ ರಾರ‍ಯಲಿ ಅಥವಾ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಡಿ. ಅದು ನನಗೆ ತೀವ್ರ ನೋವುಂಟು ಮಾಡುತ್ತದೆ’ ಎಂದು ಹೇಳಿದ್ದಾರೆ.

ಭಾನುವಾರ 2000ಕ್ಕೂ ಹೆಚ್ಚು ಅಭಿಮಾನಿಗಳು ಪ್ರದರ್ಶನ ಏರ್ಪಿಡಿಸಿ, ರಜನಿಕಾಂತ್‌ ಅವರು ತಮ್ಮ ನಿರ್ಧಾರವನ್ನು ವಾಪಸ್‌ ತೆಗೆದುಕೊಂಡು ರಾಜಕೀಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದರು.