ಬೆಂಗಳೂರು(ಜು.02): ಕೊರೋನಾತಂಕದ ನಡುವೆ ಇಂದು, ಗುರುವಾರ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​​​​​ ಪದಗ್ರಹಣದ ಪ್ರತಿಜ್ಞಾ ಕಾರ್ಯಕ್ರಮ ನಡೆಯುಲಿದೆ. ಈ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಹೊಸ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿಲಿದೆ. ಈ ಸಮಾರಂಭ ರಾಜ್ಯದ 7,800 ಗ್ರಾಮ ಪಂಚಾಯ್ತಿಗಳಲ್ಲಿ ನೇರಪ್ರಸಾರವಾಗಲಿದೆ.

"

ಈಗಾಗಲೇ ಡಿಕೆಶಿ ಮನೆ ಬಳಿ ಕೆಪಿಸಿಸಿ ಕಚೇರಿ ಬಳಿ ಯಾರು ಬರೋದು ಬೇಡ. ಎಲ್ಲಾ ವರ್ಚುವಲ್ ಲೈವ್ ಮುಖಾಂತರ ಮನೆಯಿಂದ ವೀಕ್ಷಿಣೆ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಡಿಕೆಶಿ ಮನವಿಗೆ ಸ್ಪಂದಿಸಿರುವ ಅವರ ಅಭಿಮಾನಿಗಳು ಯಾವ ಅಭಿಮಾನಿಯೂ ಈವರೆಗೆ ಮನೆ ಬಳಿ ಸುಳಿದಿಲ್ಲ. 

ಡಿಕೆ ಶಿವಕುಮಾರ್‌ಗೆ ಇದ್ದಲ್ಲಿಯೇ ಸಿಕ್ತು ವಿಶೇಷ ಆಶೀರ್ವಾದ...!

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕವಾಗಿ ನಾಲ್ಕು ತಿಂಗಳು

ಡಿಕೆಶಿಯನ್ನು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ 4 ತಿಂಗಳು ಕಳೆದಿವೆ. ಆದರೆ, ಲಾಕ್​ಡೌನ್ ಘೋಷಣೆಯಾದ ಬಳಿಕ ಡಿಕೆಶಿ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ವಿವಿಧ ರೀತಿಯ ಅಡೆ ತಡೆಗಳು ಬಂದಿದ್ದವು.. ಆದರೀಗ ಕೊನೆಗೂ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಸಮಯ ಕೂಡಿಬಂದಿದೆ. ಇದೇ ವೇಳೆ ಕಾರ್ಯಾಧ್ಯಕ್ಷರಾಗಿ ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಸಲೀಂ ಅಹಮದ್‌ ಕೂಡ ಪ್ರಮಾಣ ವಚನ ಮಾಡಲಿದ್ದಾರೆ.

"

ದಕ್ಷಿಣ ಕನ್ನಡದ 329 ಕಡೆ ಡಿಕೆಶಿ ಪದಗ್ರಹಣ ಕಾರ್ಯಕ್ರಮ

ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ 150 ಜನರಿಗೆ ಮಾತ್ರ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ಕೇವಲ ಹಿರಿಯ ಮುಖಂಡರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕಾರ್ಯಕರ್ತರು, ಬೆಂಬಲಿಗರಿಗೆ ಪ್ರವೇಶವಿಲ್ಲ. ಈಗಾಗಲೇ ಡಿಕೆಶಿ ಕೂಡ ಹೆಚ್ಚು ಜನರು ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದ ಹೊರಗಿನಿಂದ 7 ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂಧ್ರದ ಸಾಕೆ ಶೈಲಜನಾಥ್, ಉತ್ತಮ್ ಕುಮಾರ್ ರೆಡ್ಡಿ ನಾಳೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

Exclusive | ದೇಶದ ಐಕ್ಯತೆಗೆ ಒಂದೇ ಆಯ್ಕೆ, ಅದು ಕಾಂಗ್ರೆಸ್: ಡಿಕೆಶಿ

"