ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟಿಕೆಟ್ ಘೋಷಣೆಗೆ ಮುನ್ನ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.  ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿರುವ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಂಡ್ಯ (ಮಾ.21) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ . ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟಿಕೆಟ್ ಘೋಷಣೆಗೆ ಮುನ್ನ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿರುವ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ದತೆ ಮಾಡಿಕೊಂಡಿರುವ ಕಾಂಗ್ರೆಸ್(Congress). ಪಟ್ಟಿ ಬಿಡುಗಡೆಗೆ ಮುನ್ನ ಕಾಲಭೈರವೇಶ್ವರ(KalaBhairaveshwar)ನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಒಳಿತಾಗುತ್ತೆ ಎಂಬ ನಂಬಿಕೆ. ಹೀಗಾಗಿ ಇಂದು ಅಮಾವಾಸ್ಯೆ ದಿನ ಇರೋದ್ರಿಂದ ಪೂಜೆ ಸಲ್ಲಿಸುತ್ತಿರುವ ಡಿಕೆ ಶಿವಕುಮಾರ.

ಉರಿಗೌಡ-ನಂಜೇಗೌಡ ಹೆಸರಲ್ಲಿ ಬಿಜೆಪಿ ತಪ್ಪು ಸಂದೇಶವನ್ನು ರವಾನಿಸುತ್ತಿದೆ: ಡಿ.ಕೆ.ಶಿವಕುಮಾರ್ ಕಿಡಿ

ಪೂಜೆ ಬಳಿಕ ನಿರ್ಮಾಲಾನಂದನಾಥ(nirmalanandashree swamiji) ಶ್ರೀಗಳ ಜೊತೆ ಡಿಕೆ ಶಿವಕುಮಾರ(DK Shivakumar) ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಉರಿಗೌಡ, ನಂಜೇಗೌಡ ಕುರಿತು ಮಾತನಾಡಿದ್ದ ಸ್ವಾಮೀಜಿ. ಸಚಿವ ಮುನಿರತ್ನರನ್ನ ಕರೆಸಿಕೊಂಡು ಈ ಬಗ್ಗೆ ಈ ಬಗ್ಗೆ ಮಾತನಾಡದಂತೆ ಚರ್ಚೆ ಮಾಡದಂತೆ ಸೂಚಿಸಿದ್ದ ನಿರ್ಮಲಾನಂದನಾಥ ಶ್ರೀ. ಈ ಬೆಳವಣಿಗೆ ಬೆನ್ನಲ್ಲೇ ಡಿಕೆ ಶಿವಕುಮಾರ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 

ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ರಾಜ್ಯ ದ್ರೋಹಿ ಹೈದರಾಲಿ ಪರ ನಿಂತುಕೊಳ್ತಿದ್ದರು: ಸಿಟಿ ರವಿ ವಾಗ್ದಾಳಿ

Scroll to load tweet…