ಬೆಂಗಳೂರು (ಜೂ. 12): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಇದು ಅಧಿಕೃತವಾಗಿದೆ.

ಶುಭ ಶುಕ್ರವಾರವಾದ ಇಂದು ಡಿಕೆ ಶಿವಕುಮಾರ್, ಎಸ್‌ಎಂ ಕೃಷ್ಣ ಹಾಗೂ ಸಿದ್ದಾರ್ಥ್ ಕುಟುಂಬಗಳು ಮಾತುಕತೆ ನಡೆಸಿವೆ. ಡಿಕೆಶಿಗೆ ರಾಜಕೀಯ ಗುರು, ಸಿದ್ದಾರ್ಥ್ ಮಾವ  ಆಗಿರುವ ಎಸ್‌ಎಂ ಕೃಷ್ಣ ನಿವಾಸದಲ್ಲಿಂದು ಉಭಯ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆದಿದ್ದು, ಆಗಸ್ಟ್‌ನಲ್ಲಿ ನಿಶ್ಚಿತಾರ್ಥ  ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.

ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...!

ಈ ಮೂಲಕ  ಬ್ಯುಸಿನೆಸ್ ಪಾರ್ಟನರ್ಸ್ ಆಗಿದ್ದ ಡಿಕೆಶಿ ಮತ್ತು ಸಿದ್ದಾರ್ಥ್ ಇಬ್ಬರು ಬೀಗರಾಗುತ್ತಿರುವುದು ಖಚಿತವಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನೇತೃತ್ವದಲ್ಲಿ ಈ ಎರಡು ಕುಟುಂಬಗಳ ಮದುವೆ ನಡೆಯಲಿದೆ.

 ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ  ಅಮರ್ಥ್ಯ ಹೆಗ್ಡೆ (26) ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ಸದ್ಯ ತಾಯಿಯೊಂದಿಗೆ ಕಂಪನಿ ವ್ಯವಹಾರ ಮುನ್ನಡೆಸುತ್ತಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ (22) ಇಂಜಿನಿಯರಿಂಗ್ ಪದವೀಧರೆಯಾಗಿದ್ದು ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.