Asianet Suvarna News Asianet Suvarna News

ಉಪಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗ: ಹೀಗೊಂದು ಭವಿಷ್ಯ!

* ರಂಗೇರಿದ ಹಾನಗಲ್, ಸಿಂದಗಿ ಬೈ ಎಲೆಕ್ಷನ್ ಅಖಾಡ
* ಗೆಲುವಿಗಾಗಿ ಮೂರು ಪಕ್ಷಗಳ ನಾಯಕರ ಭರ್ಜರಿ ಪ್ರಚಾರ
* ಈ ವೇಳೆ ಕಾಂಗ್ರೆಸ್‌ನ ಭವಿಷ್ಯ ನುಡಿದ ಈಶ್ವರಪ್ಪ

divide In Karnataka Congress After Hangal Sindagi By Poll Says Eshwarappa rbj
Author
Bengaluru, First Published Oct 25, 2021, 4:18 PM IST
  • Facebook
  • Twitter
  • Whatsapp

ಹಾವೇರಿ, (ಅ.25): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (By Election)ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಭರ್ಜರಿ ಮತಬೇಟೆ ನಡೆಸಿದ್ದಾರೆ.

ಹಾನಗಲ್  (Hangal) ಬೈ ಎಲೆಕ್ಷನ್ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa), ಸಿಂಧಗಿ,ಅ.25-ಉಪಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ (Congress) ಇಬ್ಭಾಗವಾಗಲಿದೆ ಎಂದು  ಭವಿಷ್ಯ ನುಡಿದರು.

ವಿಧಾನಸೌಧಕ್ಕೆ ಬೀಗ ಎನ್ನುವ ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

 ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ. ಹೀಗಾಗಿ ಆ ಪಕ್ಷ ಇಬ್ಭಾಗವಾಗುವುದನ್ನು ಯಾರೂ ತಪ್ಪಿಸಲಾಗದು ಎಂದು ಹೊಸ ಬಾಂಬ್ ಸಿಡಿಸಿದರು.

ಕಾಂಗ್ರೆಸ್ ಪರಿಸ್ಥಿತಿ ಪ್ರಾದೇಶಿಕ ಮಟ್ಟಕ್ಕೆ ಬರಲಿದೆ. ಸಾಲು ಸಾಲು ಚುನಾವಣೆಗಳಲ್ಲಿ ಸೋತಿರುವ ಅವರಿಗೆ ಈ ಚುನಾವಣೆಯಲ್ಲೂ ಸೋಲು ಕಟ್ಟಿಟ್ಟ ಬುತ್ತಿ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಪ್ರಾದೇಶಿಕ ಪಕ್ಷವನ್ನು ಸೇರಬಹುದೆಂದು ಕುಹುಕವಾಡಿದರು.

ಇಬ್ಬರು ಮೇಲ್ನೋಟಕ್ಕೆ ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಪರಸ್ಪರ ಕಾಲೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಕಿತ್ತಾಟದಿಂದ ಕಾಂಗ್ರೆಸ್‍ಗೆ ಸೋಲಾಗಲಿದೆ. ಮತದಾರರ ತಿರಸ್ಕರಿಸಲಿದ್ದಾನೆ ಎಂದ ಟಾಂಗ್ ಕೊಟ್ಟರು.

ಇದೇ ಅಕ್ಟೋಬರ್​ 30ರಂದು ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನವೆಂಬರ್ 02ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios