Asianet Suvarna News Asianet Suvarna News

ಡಿಕೆಶಿ ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ

ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ಹೊರಹಾಕಿದ್ದಾರೆ.

dinesh gundu rao reaction on dk shivakumar statement about election ticket gow
Author
First Published Sep 18, 2022, 1:12 PM IST

ಬೆಂಗಳೂರು (ಸೆ.18):  ಕಾಂಗ್ರೆಸ್ ನಲ್ಲಿ ಡಿಕೆಶಿವಕುಮಾರ್ VS ಸಿದ್ದರಾಮಯ್ಯ ವಿಚಾರ. ಜೊತೆಗೆ  ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ಹೊರಹಾಕಿದ್ದಾರೆ.  ನಮ್ಮಲ್ಲಿ ಯಾವುದೇ ಗಲಾಟೆ ಗೊಂದಲ ಇಲ್ಲ. ಎಲ್ಲಾ‌ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ.  ಎಲ್ಲರು ಒಟ್ಟಾಗಿ ಕೆಲಸ ಮಾಡ್ತಿರೋದಕ್ಕೆ ಉಪ ಚುನಾವಣೆಯಲ್ಲಿ ಗೆಲುವು ಆಯ್ತು. ಪಾದಯಾತ್ರೆ, ಸಿದ್ದರಾಮೋತ್ಸವ ಎಲ್ಲವೂ ಯಶಸ್ವಿಯಾಗಿದೆ. ಎಲ್ಲರೂ ಸೇರಿ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಸಣ್ಣ ಪುಟ್ಟ ಗೊಂದಲ ಇರುತ್ತೆ. ಅದನ್ನ ಸರಿ ಮಾಡಿಕೊಂಡು ಹೋಗ್ತೀವಿ. ನನ್ನ ಸ್ಪೀಡ್ ಗೆ ಯಾರು ಕೆಲಸ ಮಾಡ್ತಿಲ್ಲ ಎಂಬ ಡಿಕೆಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನನ್ನ ಸ್ವೀಡ್ ಗೆ ಇಲ್ಲ ಅಂದ್ರೆ ಎಲ್ಲರಿಗೂ ಹುರಿದುಂಬಿಸಲು ಆ ರೀತಿ ಹೇಳಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಲಿ ಅಂತ ಹೇಳಿದ್ದಾರೆ. ಎಲ್ಲರೂ ಚುರುಕಾಗಿ ಕೆಲಸ ಮಾಡಲಿ ಅಂತ ಹೇಳಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದರು.

ಕೆಲಸ ಮಾಡದೇ ಹೋದ್ರೆ ಟಿಕೆಟ್ ಇಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನೇರ ಆಕ್ರೋಶ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್ , ಕಾಂಗ್ರೆಸ್ ನಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನ  ಮಾಡೋದಲ್ಲ. ಟಿಕೆಟ್ ನೀಡಲು ಚುನಾವಣೆ ಸಮಿತಿ, ರಾಜ್ಯ ಚುನಾವಣೆ ಸಮಿತಿ,‌ ಕೇಂದ್ರ ಸಮಿತಿ ಇದೆ ಸ್ಕ್ರಿನಿಂಗ್ ಕಮಿಟಿ ಇದೆ. ಎಲ್ಲರ ಅಭಿಪ್ರಾಯ ‌ಪಡೆದು ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತೆ. ಯಾರೇ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದ್ರೆ ಅದು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ಡಿಕೆಶಿವಕುಮಾರ್ ಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಡಿಕೆಶಿಗೆ ಸಲಹೆ ಕೊಟ್ಟ ಗುಂಡೂರಾವ್: ಇನ್ನು ಡಿಕೆ ಶಿವಕುಮಾರ್ ಗೆ ಸಲಹೆ ಕೊಟ್ಟ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಜನರಿಗೆ ಬಿಜೆಪಿ‌ ಬಗ್ಗೆ ಬೇಸರ ಇದೆ‌. ಭ್ರಷ್ಟಾಚಾರ ತಾಂಡವ ಆಡ್ತಿದೆ. ರಾಜ್ಯಕ್ಕೆ ಒಳ್ಳೆ ಆಡಳಿತ ಸಿಗಬೇಕು ಅಂತ ಜನ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅಂತಹ ಆಡಳಿತ ಬೇಕು ಅಂತ ಹೇಳ್ತಿದ್ದಾರೆ. ಹೀಗಾಗಿ ನಾವೆಲ್ಲರೂ ‌ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಸಮನ್ವಯತೆಯಾಗಿ ಓಡಾಡಬೇಕು. ಎಲ್ಲರೂ ಒಟ್ಟಾಗಿ‌ ಕೆಲಸ ಮಾಡಬೇಕು. ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದ್ದಾರೆ.

ಮತ್ತೆ ಸಿದ್ದು, ಡಿಕೆಶಿ ಒಳಬೇಗುದಿ ಬಹಿರಂಗ: ಅಕ್ಕಪಕ್ಕ ಅರ್ಧಗಂಟೆ ಕೂತಿದ್ದರೂ ಮಾತಿಲ್ಲ..!

ಕೋಟಿಕೋಟಿಗೆ ವಿಧಾನಸಭೆ ಟಿಕೆಟ್‌ ಮಾರಿಕೊಂಡಿದ್ದ ದಿನೇಶ್‌ ಗುಂಡೂರಾವ್‌’
ಪಣಜಿ: 2022ರಲ್ಲಿ ಗೋವಾ ವಿಧಾನಸಭಾ ಚುನಾವಣೆ ವೇಳೆ, ರಾಜ್ಯ ಉಸ್ತುವಾರಿಯಾಗಿದ್ದ ದಿನೇಶ್‌ ಗುಂಡೂರಾವ್‌ ಅವರು ಪಕ್ಷದ ಟಿಕೆಟ್‌ ಮತ್ತು ಪಕ್ಷದ ವಿವಿಧ ಹುದ್ದೆಗಳನ್ನು ಕೋಟಿಕೋಟಿಗೆ ಮಾರಿಕೊಂಡಿದ್ದರು ಎಂದು ಇತ್ತೀಚೆಗೆ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿ ಸೇರಿದ್ದ ಸಂಕಲ್ಪ್‌ ಅಮೋನ್‌ಕರ್‌ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ

ದಿನೇಶ್‌ ಅವರು ಕನಿಷ್ಠ 12 ವಿಧಾನಸಭಾ ಟಿಕೆಟ್‌ಗಳನ್ನು ಶ್ರೀಮಂತರಿಗೆ ಮಾರಿಕೊಂಡಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆ ಮತ್ತು ಸಂಸದೀಯ ಪಕ್ಷದ ನಾಯಕನ ಸ್ಥಾನವನ್ನೂ ಹಣಕ್ಕೆ ಮಾರಲಾಗಿತ್ತು. ನನ್ನ ಸಮ್ಮುಖದಲ್ಲೇ ಈ ಡೀಲ್‌ ನಡೆದಿತ್ತು. ಈ ಎಲ್ಲಾ ಡೀಲ್‌ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ಗೂ ಎಲ್ಲಾ ಮಾಹಿತಿ ಇತ್ತು ಎಂದಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮಾಧ್ಯಮ ನಿರ್ವಹಣೆಗೆ 200 ಕೋಟಿ ರು. ವೆಚ್ಚದಲ್ಲಿ ಬೆಂಗಳೂರು ಮೂಲದ ಏಜೆನ್ಸಿ ನೇಮಕವನ್ನೂ ಸಂಕಲ್ಪ್‌ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios