ನವದೆಹಲಿ, [ಫೆ.11]: ತಮ್ಮ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಧಾರೆಯೆರೆದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಆದ್ರೆ ಇಂದು [ಸೋಮವಾರ] ದೆಹಲಿಯಲ್ಲಿ ದೇವೇಗೌಡರು ಅವರು ರಾಜಕೀಯ ನಿವೃತ್ತಿಯ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಂಸತ್ ಕಲಾಪ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದೇವೇಗೌಡ, 'ನನಗೆ ವಯಸ್ಸಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸದೆಯೂ ಇರಬಹುದು. ಆದರೆ, ಉದಯೋನ್ಮುಖ ನಾಯಕರಿಗೆ ಮಾರ್ಗದರ್ಶನ ನೀಡುತ್ತೇನೆ' ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ನೀಡಿದರು.

ಲೋಕಸಭಾ ಚುನಾವಣೆ : ಖಚಿತವಾಯ್ತು ದೇವೇಗೌಡರ ಸ್ಪರ್ಧಾ ಕಣ..?

ತಮ್ಮ ತವರು ಕ್ಷೇತ್ರ ಹಾಸನವನ್ನು ಈ ಬಾರಿ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿ ಕೇಳಿಬಂದಿತ್ತು

ಆದ್ರೆ, ಇಂದು ದೇವೇಗೌಡ ಅವರು ದೆಹಲಿಯಲ್ಲಿ ಮಾತನಾಡಿರುವುದನ್ನು ನೋಡಿದ್ರೆ, ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಅನುಮಾನವಾಗಿದೆ.