ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಲಿಂಗಾಯತರಿಗೆ ಹೆಚ್ಚು ಸೀಟು ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಲಾಭಿ!

ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ ವೀರಶೈವ, ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಲಿಂಗಾಯತ ಕಾಂಗ್ರೆಸ್ ನಾಯಕರು ಲಾಭಿ ನಡೆಸಿದ್ದಾರೆ.

Demand for more tickets for Lingayat candidates in the congress second list gow

ದಾವಣಗೆರೆ (ಏ.4): ರಾಜ್ಯದಲ್ಲಿ 60 ರಿಂದ 70 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು ಅವರಿಗೆ ಟಿಕೆಟ್ ಸಿಕ್ಕು ಗೆದ್ದರೆ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಅಭಿಪ್ರಾಯಿಸಿದ್ದಾರೆ.  ದಾವಣಗೆರೆಯಲ್ಲಿ ಮಾತನಾಡಿದ ಶಾಮನೂರು  ಕರ್ನಾಟಕದಲ್ಲಿ ಈ ಹಿಂದೆ  90 ಜನ ಲಿಂಗಾಯತ ಶಾಸಕರಿದ್ದರು. ಇದೀಗ ಬೇರೆ ಬೇರೆ ಪಾರ್ಟಿ ಸೇರಿಕೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ  ನಾನು 60-70 ಜನಕ್ಕೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಕೊಟ್ಟರೆ ಅವರೆಲ್ಲಾ ಗೆದ್ದರೆ ಮುಂದಿನ ಮುಖ್ಯಮಂತ್ರಿ ‌ಲಿಂಗಾಯತರು ಆಗುತ್ತಾರೆ. ವೀರಶೈವ ಲಿಂಗಾಯತ  ಮಹಾಸಭಾ ದ ರಾಷ್ಟ್ರೀಯ ಅಧ್ಯಕ್ಷ ನಾನು ಅವರ ಹಿತೈಷಿ ಕಾಪಾಡಬೇಕಾದ್ದು ನನ್ನ ಕರ್ತವ್ಯ ಅದಕ್ಕಾಗಿ 70 ಜನಕ್ಕೆ ಕೊಡಿ ಎಂದು ಕೇಳಿದ್ದೇನೆ ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿ ಎಂಬಿ ಪಾಟೀಲ್ , ಖಂಡ್ರೆ ಎಸ್ ಎಸ್ ಮಲ್ಲಿಕಾರ್ಜುನ ಇದ್ದಾರೆ ಎಂದರು.

ಇನ್ನೂ ಘೋಷಣೆಯಾಗದ ಟಿಕೆಟ್, ಮಾಜಿ ಸಚಿವನಿಂದ ಹೊಳಲ್ಕೆರೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ!

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ನಿರ್ಧಾರ ಮಾಡುವವರು ಗೆದ್ದಂತ ಶಾಸಕರು.‌ ಅವರು ನಿರ್ಧಾರ ಮಾಡಿದ ಮೇಲೆ ಹೈಕಮಾಂಡ್ ಪೈನಲ್ ಮಾಡುತ್ತದೆ ಎಂದು ಹೇಳಿದ ಶಾಮನೂರು ಲಿಂಗಾಯತರಲ್ಲೂ ಬಹಳ ಆಕಾಂಕ್ಷಿಗಳಿದ್ದಾರೆ. ಉತ್ತರ ಕರ್ನಾಟಕದಲ್ಲು ಹೆಚ್ಚು ಸೀಟುಗಳನ್ನು ಕೇಳಿದ್ದೇವೆ.‌ ಕೊಟ್ಟರೆ ಗೆದ್ದು ಲಿಂಗಾಯತರು ಮುಖ್ಯಮಂತ್ರಿ ಆಗೋದಕ್ಕೆ ಅನುಕೂಲ ಆಗುತ್ತದೆ ಎಂದರು. ಮುಂದಿನ ಚುನಾವಣೆಯಲ್ಲಿ  ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲುತ್ತದೆ. ದಾವಣಗೆರೆ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಸಿ ಎಂ ಬಂದು ಚುನಾವಣೆಗೆ ನಿಂತ್ರೂ ಸೋತು ಹೋಗ್ತಾರೆ ಎಂದು  ಶಾಮನೂರು ಹೇಳಿದ್ದಾರೆ.

ಇನ್ನೂ ಘೋಷಣೆಯಾಗದ ಟಿಕೆಟ್, ಮಾಜಿ ಸಚಿವನಿಂದ ಹೊಳಲ್ಕೆರೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ!

ಎರಡನೇ ಪಟ್ಟಿಯಲ್ಲಿ ಲಿಂಗಾಯತರಿಗೆ  ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯ:
ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ ವೀರಶೈವ, ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಲಿಂಗಾಯತ ಕಾಂಗ್ರೆಸ್ ನಾಯಕರು ಲಾಭಿ ನಡೆಸಿದ್ದಾರೆ. ಎರಡನೇ ಪಟ್ಟಿಯಲ್ಲಿ 33 ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಈಶ್ವರ ಖಂಡ್ರೆ. ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ. ಖರ್ಗೆ ಹಾಗೂ ಸಿದ್ದರಾಮಯ್ಯನ್ನು ಭೇಟಿ ಮಾಡಿ ಒತ್ತಾಯ ಮಾಡಿರುವ ಈಶ್ವರ ಖಂಡ್ರೆ. ಗೆಲ್ಲುವ ವಾತಾವರಣ ಇರುವ ಕಡೆ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios