ವರ್ಷಾಂತ್ಯದೊಳಗೆ ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಿದಂತೆ ಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಾರೆಂದು ಶಾಸಕ ಜಮೀರ್‌ ಅಹ್ಮದ್‌ ಭವಿಷ್ಯ ನುಡಿದಿದ್ದಾರೆ.

ಧಾರವಾಡ (ಅ.22) : ವರ್ಷಾಂತ್ಯದೊಳಗೆ ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಿದಂತೆ ಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಾರೆಂದು ಶಾಸಕ ಜಮೀರ್‌ ಅಹ್ಮದ್‌ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಶುಕ್ರವಾರ ರಮೇಶ ಜಾರಕಿಹೊಳಿ ಕಾಂಗ್ರೆಸ್ಸಿಗೆ ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನವೆಂಬರ್‌ ವರೆಗೂ ಕಾಯ್ದು ನೋಡಿ. ಬಿಜೆಪಿಯಲ್ಲಿ ಬೇಸತ್ತಿರುವ ಅನೇಕ ಶಾಸಕರು ಈ ವರ್ಷದ ಅಂತ್ಯಕ್ಕೆ ಬೇರೆ ಪಕ್ಷಗಳಿಗೆ ಬರಲಿದ್ದು ಆ ಸಮಯದಲ್ಲಿ ರಾಜಕೀಯದಲ್ಲಿ ಬಿರುಗಾಳಿಯೇ ಎಳಲಿದೆ ಎಂದರು.

ಅಡ್ಡ ಮತದಾನ ಮಾಡಿದ ನಾಲ್ವರು ಬಿಜೆಪಿ ಪುರಸಭೆ ಸದಸ್ಯರ ವಜಾ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಮತಗಳು ಸಿಗುತ್ತವೆ ಎಂದು ಹೇಳಿಕೆ ನೀಡಿರುವ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಅಲ್ಪಸಂಖ್ಯಾತರ ವಿರೋಧಿ. ಹೀಗಾಗಿ ಜೆಡಿಎಸ್‌ಗೆ ಏತಕ್ಕೆ ಮತ ನೀಡಬೇಕು. ಈ ವಿಚಾರವನ್ನು ಜನರು ತೀರ್ಮಾಣ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿದ್ದಾಗ ಕುಮಾರಸ್ವಾಮಿಗೆ 57 ಸ್ಥಾನ ಬಂದಿದ್ದವು. 2013ರಲ್ಲಿ 40 ಹಾಗೂ 2018ರಲ್ಲಿ ಅದು 37ಕ್ಕೆ ಇಳಿದಿದೆ. ಹೀಗಾಗಿ ಕುಮಾರಸ್ವಾಮಿ 59 ಸ್ಥಾನ ಪಡೆಯಲಿ ನೋಡೋಣ ಎಂದು ಜಮೀರ್‌ ಅಹ್ಮದ್‌ ಸವಾಲು ಹಾಕಿದರು.

ಅಸೆಂಬ್ಲಿ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಖಚಿತಪಡಿಸಿದ ಎಚ್‌ಡಿಕೆ

ನಿರೀಕ್ಷೆ ಮೀರಿ ಭಾರತ ಜೋಡೋ ಯಾತ್ರೆಗೆ ಸ್ಪಂದನೆ ಸಿಕ್ಕಿದೆ. ನಿತ್ಯ 25 ಕಿಮೀ ಪಾದಯಾತ್ರೆಯಲ್ಲಿ ಜನರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಗೆ ಭಯ ಶುರುವಾಗಿದ್ದು ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಅಲ್ಲದೇ, ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಬಗ್ಗೆ ಇಲ್ಲಸಲ್ಲದ ಮಾತು ಹೇಳಿದ್ದು ಅವರಿಬ್ಬರೂ ಯಾವತ್ತೋ ಒಂದಾಗಿದ್ದಾರೆ. ಇದು ಮಾಧ್ಯಮ ಸೃಷ್ಟಿಎಂದರು. ಈ ವೇಳೆ ದೀಪಕ ಚಿಂಚೋರೆ, ಪಾಲಿಕೆ ಸದಸ್ಯ ಶಂಭು ಸಾಲಿಮನಿ ಇದ್ದರು.