ಕೆಲಸ ಮಾಡದ ಶಾಸಕರನ್ನು ಈ ಬಾರಿಯಾದರೂ ಸೋಲಿಸಿ: ಸಂಸದ ಡಿ.ಕೆ.ಸುರೇಶ್‌

ಕ್ಷೇತ್ರದಲ್ಲಿ ಕೆಲಸ ಮಾಡದ ಶಾಸಕರನ್ನು ಬದಲಾವಣೆ ಮಾಡಲು ಮತದಾರರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುಂದಾಗಬೇಕಾಗಿದೆ ಎಂದು ಸಂಸದ ಹಾಗೂ ಹಾಸನ ಜಿಲ್ಲಾ ಚುನಾವಣೆ ಉಸ್ತುವಾರಿ ಡಿ.ಕೆ.ಸುರೇಶ್‌ ಹೇಳಿದರು.

Defeat the non working legislators at least this time says mp dk suresh gvd

ಸಕಲೇಶಪುರ (ಏ.03): ಕ್ಷೇತ್ರದಲ್ಲಿ ಕೆಲಸ ಮಾಡದ ಶಾಸಕರನ್ನು ಬದಲಾವಣೆ ಮಾಡಲು ಮತದಾರರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುಂದಾಗಬೇಕಾಗಿದೆ ಎಂದು ಸಂಸದ ಹಾಗೂ ಹಾಸನ ಜಿಲ್ಲಾ ಚುನಾವಣೆ ಉಸ್ತುವಾರಿ ಡಿ.ಕೆ.ಸುರೇಶ್‌ ಹೇಳಿದರು. ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್‌ ರೈತ ಭವನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ತಯಾರಿ ಕುರಿತು ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕ್ಷೇತ್ರದ ಆಗುಹೋಗುಗಳ ಕುರಿತು ಮುರುಳಿ ಮೋಹನ್‌ರವರಿಗೆ ಅರಿವು ಇರುವುದರಿಂದ ಪಕ್ಷ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಅಭಿಲಾಷೆಯಂತೆ ಟಿಕೆಟ್‌ ನೀಡಿದೆ. ಕಳೆದ 15 ವರ್ಷಗಳ ಹಿಂದೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿತ್ತು. 

ಕ್ಷೇತ್ರ ಮೀಸಲಾತಿಯಾದ ನಂತರ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕ್ಷೇತ್ರವನ್ನು ಬದಲಾವಣೆ ಮಾಡಲು ಸಾಧ್ಯವಾಗದಿದ್ದಲ್ಲಿ ಅವರಿಗೆ ಮತ ಹಾಕಿ ಏನು ಪ್ರಯೋಜನ ಎಂಬುದನ್ನು ಎಲ್ಲಾರು ಯೋಚನೆ ಮಾಡಬೇಕು ಎಂದರು. ಇಲ್ಲಿನ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸಮರ್ಥವಾದ ವ್ಯಕ್ತಿ ಬೇಕು.ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅ​ಕಾರಕ್ಕೆ ಬರುವುದರಿಂದ ಮುರುಳಿ ಮೋಹನ್‌ ರವರ ಪರ ನೀವೆಲ್ಲಾ ಕೆಲಸ ಮಾಡಬೇಕಾಗಿದೆ ಹಾಗೂ ಜನಸಾಮಾನ್ಯರಿಗೆ ಕಾಂಗ್ರೆಸ್‌ ಪಕ್ಷದ ವಿಚಾರಗಳನ್ನು ತಲುಪಿಸಬೇಕಾಗಿದೆ. ಹೊಳೆನರಸೀಪುರದ ಶಾಸಕರು ಇಲ್ಲಿನ ಶಾಸಕರಾಗಿದ್ದಾರೆ ಇಲ್ಲಿನ ಶಾಸಕರು ನಾಮಕವಸ್ತೆ ಶಾಸಕರಾಗಿದ್ದಾರೆ. 

ಬೆಳಗಾವಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸತೀಶ್‌ ಜಾರಕಿಹೊಳಿ

ಇಲ್ಲಿ ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿದರೆ ಹೊಳೆನರಸೀಪುರಕ್ಕೆ ಲಾಭ ಎಂದರು. ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುರುಳಿ ಮೋಹನ್‌ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಏನಾಗಿದೆ ಎಂಬುದನ್ನು ನಾವು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅ​ಧಿಕಾರಕ್ಕೆ ಬರುವುದರಲ್ಲಿ ಯಾವುದೆ ಸಂಶಯವಿಲ್ಲ, ನೀವೆಲ್ಲರೂ ಒಗ್ಗೂಡಿ ಪ್ರತಿ ಬೂತ್‌ಗಳಲ್ಲಿ ಶ್ರಮ ಹಾಕಿದರೆ ಮಾತ್ರ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸೋಣ ಎಂದರು.

ಕಾರ್ಯಕ್ರಮ ಆರಂಭವಾಗುವ ಮೊದಲು ಇತ್ತೀಚೆಗಷ್ಟೆ ನಿಧನರಾದ ಕಾಂಗ್ರೆಸ್‌ ಮುಖಂಡ ಧ್ರುವನಾರಾಯಣರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮಾಜಿ ತಾ.ಪಂ ಸದಸ್ಯ ಗೋಪಾಲಸ್ವಾಮಿ, ಎಸ್‌.ಡಿ.ಪಿ.ಐ ಮಾಜಿ ತಾಲೂಕು ಅದ್ಯಕ್ಷ ಮೊಹಿಯುದಿನ್‌, ಸೇರಿದಂತೆ ಇನ್ನು ಹಲವು ಮಂದಿ ವಿವಿದ ಪಕ್ಷಗಳಿಂದ ಕಾಂಗ್ರೆಸ್‌ ಸೇರ್ಪಡೆಯಾದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡಿಲ್ಲ: ಬಾಲಚಂದ್ರ ಜಾರಕಿಹೊಳಿ

ಈ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಅನಿಲ್‌, ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊದ್ದು ಲೋಕೇಶ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಬೈರಮುಡಿ ಚಂದ್ರು, ಕೆಪಿಸಿಸಿ ಸದಸ್ಯರಾದ ಕೊಲ್ಲಹಳ್ಳಿ ಸಲೀಂ, ಯಡೇಹಳ್ಳಿ ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಬ್ಯಾಕರವಳ್ಳಿ ವಿಜಯ್‌ ಕುಮಾರ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ನಾಗರಾಜ್‌, ಎಸ್‌.ಸಿ.ಎಸ್‌.ಟಿ ಘಟಕದ ತಾಲೂಕು ಅದ್ಯಕ್ಷ ಗಿರೀಶ್‌, ಯುವ ಮುಖಂಡ ‘ಭುವನಾಕ್ಷ ಸೇರಿದಂತೆ ಇತರರು ಹಾಜರಿದ್ದರು.

Latest Videos
Follow Us:
Download App:
  • android
  • ios