'ಸಿದ್ದರಾಮಯ್ಯ ಹತಾಶಯದಿಂದ ಏನೇನೋ ಹೇಳುತ್ತಿದ್ದಾರೆ'
ನಮಗೆ ಯಾರನ್ನು ಕರೆತರುವ ಅವಶ್ಯಕತೆಯಿಲ್ಲ. ನಮ್ಮ ಪಕ್ಷ ಬೆಳೆಯಬೇಕು, ನಮ್ಮ ಪಕ್ಷ ನಿಂತ ನೀರಲ್ಲ ಹರಿಯುವ ನೀರಾಗಿದೆ ಎಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಬಾಗಲಕೋಟೆ(ನ.01): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತಾಶಯದಿಂದ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಭಯದಿಂದ, ಬಿಜೆಪಿ ನಂಬಿ ಹೋದವರಿಗೆ ಮಂತ್ರಿಗಿರಿ ಸಿಗಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವುದನ್ನ ತಡೆಗಟ್ಟಲು ಈ ರೀತಿ ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
"
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಯಾರನ್ನು ಕರೆತರುವ ಅವಶ್ಯಕತೆಯಿಲ್ಲ. ನಮ್ಮ ಪಕ್ಷ ಬೆಳೆಯಬೇಕು, ನಮ್ಮ ಪಕ್ಷ ನಿಂತ ನೀರಲ್ಲ ಹರಿಯುವ ನೀರಾಗಿದೆ ಎಂದು ಹೇಳಿದ್ದಾರೆ.
'ಸಿದ್ದರಾಮಯ್ಯಗೆ ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡುವ ಭೀತಿ'
ರಾಜ್ಯ ಸರ್ಕಾರ ಪತನ ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಅವರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ಸಿಗರದು ನರಿ ಕಥೆಯಾಗಿದೆ. ಹೋರಿ ಮುಂದೆ ಹೋಗ್ತಿರುತ್ತೆ, ಅದರ ಗಂಗೆದೊಗಲು ತಿನ್ನೋ ಆಸೆ ಹೋರಿಗಿರುತ್ತೆ, ಹೋರಿ ಮುಂದೆ ಹೋದಂಗ ಅದರ ಗಂಗೆದೊಗಲು ನೆರಳು ಮುಂದೋಗುತ್ತಿಂತೆ. ಹಂಗಾಗೇದ ಕಾಂಗ್ರೆಸ್ಸಿರ ಪರಿಸ್ಥಿತಿ ಎಂದು ಹೇಳಿದ್ದಾರೆ.