Asianet Suvarna News Asianet Suvarna News

ದಾವಣಗೆರೆ ಉತ್ತರದಲ್ಲಿ ಎಸ್‌.ಎ. ರವೀಂದ್ರನಾಥ್ ಅವರನ್ನು ಗೆಲ್ಲಿಸಿ - ಸಿಎಂ ಬೊಮ್ಮಾಯಿ

ಎಸ್.ಎ.ರವೀಂದ್ರನಾಥ್ ಅವರ ಸೇವೆಯ ಸ್ಮರಣಾರ್ಥ, ಅವರ ಹೆಸರಿನಲ್ಲಿಯೇ 50 ಎಕರೆ ಪ್ರದೇಶದಲ್ಲಿ ಬಡವರಿಗಾಗಿ ನಿರ್ಮಿಸಲಾಗುವ ಮನೆಗಳ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Davangere North Rabindranath Win them over Bommai Request
Author
First Published Nov 26, 2022, 6:24 PM IST

ವರದಿ : ವರದರಾಜ್  ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ನ.26):  ಎಸ್.ಎ.ರವೀಂದ್ರನಾಥ್ ಅವರ ಸೇವೆಯ ಸ್ಮರಣಾರ್ಥ, ಅವರ ಹೆಸರಿನಲ್ಲಿಯೇ 50 ಎಕರೆ ಪ್ರದೇಶದಲ್ಲಿ ಬಡವರಿಗಾಗಿ ನಿರ್ಮಿಸಲಾಗುವ ಮನೆಗಳ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರ 77 ನೇ ಜನ್ಮ ದಿನಾಚರಣೆ ಹಾಗೂ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ಎ. ರವೀಂದ್ರನಾಥ್ ರಾಜಕೀಯ ಜೀವನ ಅವರ ಹೋರಾಟದ ಹಾದಿಯನ್ನು ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಅವರೊಬ್ಬ ಹುಟ್ಟು ರೈತ ಹೋರಾಟಗಾರ. ಅವರು ರಾಜಕೀಯಕ್ಕೆ ಬರಬೇಕು ಎಂದು ಹೋರಾಟ ಮಾಡುತ್ತಿರಲಿಲ್ಲ. ಅಧಿಕಾರ ಇದ್ದಾಗಲೂ ಹಿಂಗೆ ಇದ್ದರೂ ಇಲ್ಲದಿದ್ದಾಗಲೂ ಹಿಂಗೆ ಇದ್ದರು. ರವೀಂದ್ರನಾಥ್ ರವರ ಒಂದು ಶಕ್ತಿ ಎಂದರೆ 'ಬೇಡ' ಎನ್ನುವುದು. ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅವರು ಕೇಳಿದ ಎಲ್ಲಾ ಕೆಲಸಗಳನ್ನು ನಾವು ಮಾಡಿಕೊಟ್ಟಿದ್ದೇವೆ. ನಿರಾಶ್ರಿತರಿಗೆ 100 ಎಕರೆಯಲ್ಲಿ ವಸತಿ ಸೌಲಭ್ಯಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕೆ ಇನ್ನೂ 50 ಎಕರೆ ಹೆಚ್ಚು ನೀಡಿ ಅ ಬಡಾವಣೆಗೆ ರವೀಂದ್ರನಾಥ್ ರವರ ಹೆಸರು ಇಡುತ್ತೇವೆ. ರವೀಂದ್ರನಾಥ್ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಿ. ಅವರಿಗೆ ಮತ್ತೊಮ್ಮೆ ಆಶಿರ್ವಾದ ಮಾಡಬೇಕು ಎಂದು ಹೇಳಿದ ಸಿಎಂ . ಮತ್ತೆ ರವೀಂದ್ರನಾಥ್ ಗೆ ಟಿಕೆಟ್‌ ನೀಡುವ ಇಂಗಿತವನ್ನು ವ್ಯಕ್ತಪಡಿಸಿದರು. 

ರವಿಯಣ್ಣ, ಅನುಭವ ಬುತ್ತಿ :
ಶ್ರೀ ಶಾಮನೂರು ಶಿವಶಂಕರಪ್ಪ  ಹಾಗೂ ಶ್ರಿ ಸಿದ್ದೇಶ್ವರರು ಬಡವರಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರೆಲ್ಲರ ಸತ್ಕಾರ್ಯಗಳಿಂದ ಜನರಿಗೆ ಒಳಿತುಂಟಾಗುತ್ತಿದೆ. 77 ವರ್ಷದ ರವಿಯಣ್ಣ, ಅನುಭವದ ಬುತ್ತಿಯಾಗಿದ್ದಾರೆ. ಅವರೊಬ್ಬ ಮುತ್ಸದ್ದಿ, ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿದ್ದರೆ, ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ.  ಅವರ  ಅನುಭವ ಇಂದಿನ ಯುವಜನತೆಗೆ ಮಾರ್ಗದರ್ಶನವನ್ನು ನೀಡಲಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮಣ್ಣಿನ ಮಗ ರವೀಂದ್ರನಾಥ್ - ಸಿರಿಗೆರೆ ಡಾ. ಶ್ರೀ : 
ಇದೇ ಸಂದರ್ಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಸಿರಿಗೆರೆ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ರವೀಂದ್ರನಾಥ್ ಜೀವನ ಹಾಗೂ ರಾಜಕೀಯ ಹೊರತಾಗಿ ಶಾಮನೂರು ಸಂಸದ ಜಿ. ಎಂ. ಸಿದ್ದೇಶ್ವರ್, ಎಸ್.ಎ. ರವೀಂದ್ರನಾಥ್ ಇರುವ ರೀತಿ ಎಲ್ಲರಿಗೂ ಮಾದರಿಯಾಗಬೇಕು ಎಂದರು. ವಿಧಾನ ಸೌಧದಲ್ಲಿ ಜಂಟಿಅಧಿವೇಶನ ನಡೆದ ಸಂದರ್ಭದಲ್ಲಿ ರಾಜ್ಯಪಾಲರು ಮಾತನಾಡುತ್ತಾರೆ. ಅಂತಹದ್ದೆ ಒಂದು ಸಂದರ್ಭ ಇಂದು ಶಿರಮಗೊಂಡನಹಳ್ಳಿಯಲ್ಲಿ ಬಂದಿದೆ.  ಸುಧಾ ವೀರೇಂದ್ರ ಪಾಟೀಲ್ ಸಮುದಾಯಭವನದಲ್ಲಿ ಇವತ್ತು ಜಂಟಿ ಅಧಿವೇಶನ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಇದ್ದಾರೆ. ಶಾಮನೂರು ಮತ್ತು ರವೀಂದ್ರನಾಥ್ ರವರು ರಾಣೇಬೆನ್ನೂರಿನ ಅಳಿಯಂದಿರು. ಜಿ.ಎಂ. ಸಿದ್ದೇಶ್ವರ್ ಕೂಡ ಸಂಬಂಧ ಇದೆ. ರಾಜಕೀಯ ಪಕ್ಷ ಬೇರೆ ಮಾನವೀಯ  ಸಂಬಂಧ ಬೇರೆ. ಮಹಾಭಾರತದಲ್ಲೂ ಯುದ್ದ ಸಂಬಂಧಿಗಳ ನಡುವೆಯೇ ಏರ್ಪಟ್ಟಿದೆ ಎಂದರು ‌.

ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು,  ಶಾಸಕ ಎಸ್.ಎ. ರವೀಂದ್ರನಾಥ್ ದಂಪತಿಯನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದ  ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸದ ಜಿ.ಎಂ.ಸಿದ್ದೇಶ್ವರ,  ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ  ಮತ್ತಿತರರು ಉಪಸ್ಥಿತರಿದ್ದರು. 

Follow Us:
Download App:
  • android
  • ios