ಅಲ್ಪಸಂಖ್ಯಾತ ಗೂಂಡಗಳನ್ನು ಎನ್‌ಕೌಂಟರ್ ಮಾಡಬೇಕು: ಶಾಸಕ ರೇಣುಕಾಚಾರ್ಯ

ಅಲ್ಪಸಂಖ್ಯಾತ ಗೂಂಡಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ ಅವರನ್ನು ಎನ್‌ಕೌಂಟರ್ ಮಾಡಬೇಕು, ಎನ್‌ಕೌಂಟರ್ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

Davanagere News Mp Renukacharya React on Mangaluru Murders gvd

ವರದಿ: ವರದರಾಜ್,ದಾವಣಗೆರೆ 

ದಾವಣಗೆರೆ (ಜು.31): ಅಲ್ಪಸಂಖ್ಯಾತ ಗೂಂಡಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ ಅವರನ್ನು ಎನ್‌ಕೌಂಟರ್ ಮಾಡಬೇಕು, ಎನ್‌ಕೌಂಟರ್ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಂದೂ ಯುವಕರ ರಕ್ಷಣೆಗೆ ಇಲ್ಲದಿದ್ದಾಗ ಅಧಿಕಾರದಲ್ಲಿ ಇದ್ದು ಏನ್ ಸಾರ್ಥಕ ಆಯ್ತು ಹೇಳಿ. ಅವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ, ಗೃಹ ಸಚಿವರ ವೈಫಲ್ಯದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಸಿಎಂ ರಾಜೀನಾಮೆ ಕೇಳಲು ಸಿದ್ದರಾಮಯ್ಯನವರಿಗೆ ಏನು ನೈತಿಕ ಹಕ್ಕುಇದೆ. ನಿಮ್ಮ ಅಧಿಕಾರ ಇದ್ದಾಗ 30ಕ್ಕೂ ಹೆಚ್ಚು ಹಿಂದುಗಳ ಹತ್ಯೆ ಆಯ್ತು, ಆಗ ನೀವು ರಾಜೀನಾಮೆ ನೀಡಿದ್ದಾರಾ. ಸಮಾಜಘಾತುಕಗಳ ಕೇಸನ್ನು ಸದನದಲ್ಲಿ ಇಟ್ಟು ವಾಪಸ್ಸು ಪಡೆದಿರಿ,  ಇಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಹಿಂದೂಗಳ ಜೊತೆ ನಾವೀದ್ದೇವೆ ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಿ ಎಂದು ಹೇಳಿ ಎಂದು ಸಿದ್ದರಾಮಯ್ಯನವರಿಗೆ ಸವಾಲ್ ಹಾಕಿದರು.

ಮಂಗಳೂರು ಹತ್ಯೆ ಪ್ರಕರಣ ದುರಾದೃಷ್ಟಕರ; ಮಾಧುಸ್ವಾಮಿ ಪ್ರತಿಕ್ರಿಯೆ

ಹಿಂದೂ ಯುವಕರಿಗೆ ಮನವಿ ಹಾಗೂ ಕ್ಷಮೆಯಾಚಿಸುತ್ತೇವೆ: ಹಿಂದೂ ಯುವಕರಿಗೆ ಮನವಿ ಹಾಗು ಕ್ಷಮೆಯಾಚಿಸುತ್ತೇವೆ, ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದೆ. ಸಿಎಂ ಅವರಿಗೆ ಈ ಪ್ರಕರಣದಿಂದ ಆಘಾತವಾಗಿದೆ ನೋವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ನಮ್ಮ ಜನರನ್ನು ರಕ್ಷಣೆ ಮಾಡಲಾಗುತ್ತಿಲ್ಲ ಎಂದು ನೋವು ಇದೆ. ಯುವಕರು ಹಾಗೂ ಮುಖಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ಕಳೆದುಕೊಂಡರೇ ನಾವು ಬಲಿಪಶುಗಳಾಗುತ್ತೇವೆ. ಹರ್ಷ ಪ್ರವೀಣ್ ಕೊಲೆಯಾಗಿ ನಾಳೆ ನಾವು ಆಗಬಹುದು ಎಂದು ಭಯಭೀತರಾಗಿದ್ದಾರೆ. ನಿಮ್ಮ ಜೊತೆ ನಮ್ಮ ಸಂಘಟನೆ, ಸರ್ಕಾರ ಇದೆ  ಕಠಿಣ ಕ್ರಮ ಜರಿಗಿಸಲು ಈಗಾಗಲೇ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದಾಗ ನಮಗೆ ರಕ್ಷಣೆ ಇದೆ ಎಂದುಕೊಂಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿತ್ತು: ಸಿದ್ದರಾಮಯ್ಯ ಸರ್ಕಾರ ಇದ್ದಾಗ 25 ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿತ್ತು, ಅ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗುಂಡಾಗಳು, ಸಮಾಜದ ಘಾತುಕ ಶಕ್ತಿ, ಭಯೋತ್ಪಾದಕರು ನಮ್ಮ ಹಿಂದೂಗಳ ಹತ್ಯೆ ಮಾಡಿದರು. ಅಂದು ಅವರು ಹಾಕಿದಂತಹ ಕೇಸ್‌ಗಳನ್ನು ಅಂದಿನ ಸರ್ಕಾರ ವಾಪಸ್ಸು ಪಡೆಯಿತು. ಕೇಸ್ ಹಾಕ್ತಾರೆ ವಾಪಸ್ಸು ಪಡೆಯುತ್ತಾರೆ ಎಂದು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ, ಸಿಎಂ ಅವರು ಈ ಘಟನೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರ ರಕ್ಷಣೆಯಾಗುತ್ತಿಲ್ಲ. ನಾವು ರಾಜೀನಾಮೆ ನೀಡುತ್ತೇವೆ ಎಂದಾಗ ಸಿಎಂ ಸಂಘಪರಿವಾರದವರು ಕರೆದು ಮಾತನಾಡಿದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಸರ್ಕಾರ ಜೊತೆ ನಿಲ್ಲಿ ಎಂದು ಹೇಳಿದ್ದಾರೆ. 

ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್, KIADB ವಿರುದ್ಧ ತಿರುಗಿಬಿದ್ದ ರೈತರು

ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳುತ್ತಾರೆ: ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲು ಅದನ್ನು ಕಾರ್ಯರೂಪಕ್ಕೆ ತರಬೇಕು. ಅಂದ್ರದಲ್ಲಿ ರೇಪ್ ಮಾಡಿದವರಿಗೆ ಹೇಗೆ ಎನ್‌ಕೌಂಟರ್ ಮಾಡಿದ್ರೋ ಅದೇ ರೀತಿ ಅವರನ್ನು ಎನ್‌ಕೌಂಟರ್ ಮಾಡಬೇಕು. ಹರ್ಷನನ್ನ ಕೊಲೆ ಮಾಡಿದವರು ಜೈಲಿನಲ್ಲಿ ಮೋಜು ಮಸ್ತಿ ಮಾಡ್ತಾ ಇದಾರೆ. ಯಾರೋ ಅಧಿಕಾರಿ ಮಾಡಿದ್ದಕ್ಕೆ ಇಡೀ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಿದೆ. ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹ ಹಿಂದೂ ಯುವಕರು ಬಳೆ ತೊಟ್ಟಿಕೊಂಡಿಲ್ಲ, ನಿಮ್ಮ ಜೊತೆ ನಾವು ಇದೀವಿ ಎಲ್ಲಾರೂ ರಾಜೀನಾಮೆ ವಾಪಸ್ಸು ಪಡೆಯಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.

Latest Videos
Follow Us:
Download App:
  • android
  • ios