ಚಿಕ್ಕಮಗಳೂರು (ಅ.30): ಮುನಿರತ್ನ ಕ್ರಿಮಿನಲ್‌ ಹಿನ್ನೆಲೆಯವರು ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಎರಡು ಬಾರಿ ಅವರಿಗೆ ಟಿಕೆಟ್‌ ಕೊಟ್ಟು ಶಾಸಕರನ್ನಾಗಿ ಮಾಡಿದ್ದು ಅದೇ ಪಕ್ಷ. ಅವರ ಪಕ್ಷದಲ್ಲಿದ್ದರೆ ಸಂಭಾವಿತರು, ಪಾರ್ಟಿ ಬಿಟ್ಟರೆ ಕ್ರಿಮಿನಲ್ಲಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

"

ನಗರದಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಮುನಿರತ್ನ ಇಂದ್ರ, ಚಂದ್ರ, ದೇವೇಂದ್ರ ಎಂದಿದ್ದರು ಸಿದ್ದರಾಮಯ್ಯ ಹಾಗೂ ಡಿಕೆಶಿ. ಅವರು ಮುನಿರತ್ನ ಪರ ಮಾಡಿರೋ ಪ್ರಚಾರದ ಹಳೇ ವಿಡಿಯೋಗಳನ್ನು ತೆಗೆದು ನೋಡಲಿ ಎಂದು ವಾಗ್ದಾಳಿ ನಡೆಸಿದರು.

ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್‌ ಸಾಹೇಬ್ರ ಬ್ಯಾಟಿಂಗ್

ಡಿ.ಕೆ.ಶಿವಕುಮಾರ್‌ ಮುಂಬೈಗೆ ಹೋಗಿ ಮನವೊಲಿಸಿ ಕರೆ ತರ್ತೀನಿ ಅಂತ ತಾನೇ, ಹೈಡ್ರಾಮ ಮಾಡಿ ಬಾಂಬೆಯಲ್ಲಿ ಯಾಕೆ ನಿಂತಿದ್ದು. ಇವರು ಸರಿ ಇಲ್ಲ ಅನ್ನೋದಾದ್ರೆ ಕರೆತರಲು ಯಾಕೆ ಹೋಗಿದ್ರು? ಎಲ್ಲ ಒಪ್ಪಿದ್ದಾರೆ, ನಿಮ್ಮನ್ನೇ ಮಂತ್ರಿ ಮಾಡ್ತೀವಿ ಬನ್ನಿ ಎಂದು ಸಿದ್ದರಾಮಯ್ಯ ಯಾಕೆ ಹೇಳಿದ್ರು, ಇದೀಗ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.