ಜಂಪಿಂಗ್ ಸ್ಟಾರ್ ಸಿ.ಪಿ.ಯೋಗೇಶ್ವ‌ರ್: 25 ವರ್ಷಗಳ ರಾಜಕಾರಣದಲ್ಲಿ 5 ಬಾರಿ ಪಕ್ಷಾಂತರ ಮಾಡಿದ ಸೈನಿಕ

ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5 ಬಾರಿ ಪಕ್ಷಾಂತರ ಮಾಡಿದ್ದು, 9 ಚುನಾವಣೆಗಳನ್ನು ಎದುರಿಸಿ, ಶಾಸಕರಾಗಿದ್ದಾರೆ. 5 ಬಾರಿ ಹೀಗೆ ಪದೇ ಪದೇ ಪಕ್ಷಾಂತರ ಮಾಡುತ್ತಿರುವ ಯೋಗೇಶ್ವ‌ರ್ ತಮ್ಮನ್ನು ತಾವೇ ಜಂಪಿಂಗ್ ಸ್ಟಾರ್ ಎಂದು ಮಾಧ್ಯಮಗಳೆದುರು ಕರೆದುಕೊಂಡಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದ ಪಕ್ಷಾಂತರ ಅನಿವಾರ್ಯ ಎಂದೂ ಹೇಳಿಕೊಂಡಿದ್ದಾರೆ. 
 

CP Yogeshwar who defected 5 times in 25 years of Karnataka politics grg

ಬೆಂಗಳೂರು(ಅ.24): ರಾಜ್ಯ ರಾಜಕಾರಣದಲ್ಲಿ ಜಂಪಿಂಗ್ ಸ್ಟಾರ್ ಎಂದೇ ಹೆಸರುವಾಸಿಯಾಗಿರುವ ಸಿ.ಪಿ.ಯೋಗೇಶ್ವ‌ರ್, ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5ನೇ ಬಾರಿಗೆ ಪಕ್ಷಾಂತರ ಮಾಡಿದ್ದಾರೆ. 

1999ರಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ್, 2004ರ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರ್ಪಡೆಗೊಂಡು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅದಾದ ನಂತರ 2008ರಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ಚುನಾವಣೆ ಎದುರಿಸಿದ್ದರು. ಆದರೆ, 2009ರಲ್ಲಿ ಕಾಂಗ್ರೆಸ್ ತೊರೆದು ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸೇರ್ಪಡೆಗೊಂಡಿದರು. 

ಕಾಂಗ್ರೆಸ್‌ಗೆ ಸೇರಿ ಯೋಗೇಶ್ವ‌ರ್ ಭವಿಷ್ಯ ಹಾಳು: ಆ‌ರ್.ಅಶೋಕ್

ಅದಾದನಂತರ 2013ರಲ್ಲಿ ಬಿಜೆಪಿ ಬಗ್ಗೆ ಬೇಸರಗೊಂಡು ಪಕ್ಷತೊರೆದಿದ್ದಸಿ.ಪಿ.ಯೋಗೇಶ್ವರ್, ರಾಜ್ಯದಲ್ಲಿನೆಲೆಯೇ ಇರದ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಚುನಾವಣೆ ಎದುರಿಸಿದ್ದರು. ಅಲ್ಲದೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 

2018ರ ವೇಳೆಗೆ ಬಿಜೆಪಿಗೆ ಮರಳಿದ್ದ ಯೋಗೇಶ್ವ‌ರ್, ಅಂದಿನ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಎದುರು ಸೋಲನುಭವಿಸಿದ್ದರು. ಆದಾದ ನಂತರ ಸತತ 6 ವರ್ಷಗಳ ಕಾಲ ಬಿಜೆಪಿಯಲ್ಲಿಯೇ ಉಳಿದಿದ್ದ ಯೋಗೇಶ್ವ‌ರ್, ಇದೀಗ ಕಾಂಗ್ರೆಸ್‌ಗೆ ವಾಪಸಾಗಿದ್ದಾರೆ. ಆ ಮೂಲಕ ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ 5 ಬಾರಿ ಪಕ್ಷಾಂತರ ಮಾಡಿದ್ದು, 9 ಚುನಾವಣೆಗಳನ್ನು ಎದುರಿಸಿ, ಶಾಸಕರಾಗಿದ್ದಾರೆ. 5 ಬಾರಿ ಹೀಗೆ ಪದೇ ಪದೇ ಪಕ್ಷಾಂತರ ಮಾಡುತ್ತಿರುವ ಯೋಗೇಶ್ವ‌ರ್ ತಮ್ಮನ್ನು ತಾವೇ ಜಂಪಿಂಗ್ ಸ್ಟಾರ್ ಎಂದು ಮಾಧ್ಯಮಗಳೆದುರು ಕರೆದುಕೊಂಡಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದ ಪಕ್ಷಾಂತರ ಅನಿವಾರ್ಯ ಎಂದೂ ಹೇಳಿಕೊಂಡಿದ್ದಾರೆ.

ಯೋಗೇಶ್ವ‌ರ್ ಹಾದಿ 

• 1999ರಲ್ಲಿ ಚನ್ನಪಟ್ಟಣದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು. 
• 2004ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ, ಚುನಾವಣೆಯಲ್ಲಿ ಕಣಕ್ಕೆ 
2008ರಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ಚುನಾವಣೆ ಎದುರಿಸಿದ್ದ ಯೋಗೇಶ್ವರ್. 
• 2009ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೈನಿಕ. 
• 2013ರಲ್ಲಿ ಬಿಜೆಪಿಗೆ ಗುಡ್‌ ಬೈ ಹೇಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ. 
• 2018ರಲ್ಲಿ ಬಿಜೆಪಿಗೆ ವಾಪಸಾಗಿ 6 ವರ್ಷ ಬಿಜೆಪಿಯಲ್ಲೇ ಉಳಿದಿದ್ದರು.

Latest Videos
Follow Us:
Download App:
  • android
  • ios