Asianet Suvarna News Asianet Suvarna News

ಸ್ವಪಕ್ಷ ಬಿಜೆಪಿಯ ವಿರುದ್ಧವೇ ಯೋಗೇಶ್ವರ್‌ ಅತೃಪ್ತಿ..!

ನಮ್ಮ ಸರ್ಕಾ​ರ​ದಲ್ಲಿ ನಮ್ಮ ಕೆಲಸ ಆಗ್ತಿ​ಲ್ಲ, ವಿಪ​ಕ್ಷ​ಗ​ಳಿಗೇ ಹೆಚ್ಚು ಸಹಾ​ಯ: ಬಿಜೆಪಿ ಶಾಸ​ಕ ಯೋಗೇಶ್ವರ್‌

CP Yogeeshwar Unhappy against the BJP grg
Author
First Published Nov 29, 2022, 11:00 AM IST

ಬೆಂಗಳೂರು(ನ.29):  ನಮ್ಮ ಸರ್ಕಾರದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚು ಸಹಾಯವಾಗುತ್ತಿದೆ. ಆದರೆ, ನಮ್ಮ ಪಕ್ಷದ ಅಸ್ತಿತ್ವ ಅನಿವಾರ್ಯತೆ ಇರುವುದರಿಂದ ನಮಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಆಡಳಿತಾರೂಢ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಮ್ಮ ಸರ್ಕಾರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಆಡಳಿತದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚು ಸಹಾಯವಾಗುತ್ತಿದೆ ಎಂಬುದನ್ನು ಹಲವು ಭಾರಿ ಘಂಟಾಘೋಷವಾಗಿ ಹೇಳಲಾ​ಗಿ​ದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಅದರಿಂದ ನಮಗೆ ಅನುಕೂಲವಾಗುವ ಬದಲು ನಮ್ಮ ವಿರೋಧಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ನಮ್ಮ ಅಸ್ತಿತ್ವ ಪ್ರಶ್ನೆ ಇರುವ ಕಾರಣ ಮೊದಲು ನಮಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಮುಸ್ಲಿಮರ ಓಲೈಕೆಗೆ ಎಚ್ಡಿಕೆ ಹೊಸ ವರಸೆ: ಯೋಗೇಶ್ವರ್‌

‘ಈ ಹಿಂದೆ ಮಂಡ್ಯ ಭಾಗದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತು. ಆದರೆ, ಈ ಬಾರಿ ಎಲ್ಲಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ಇರುವುದರಿಂದ ಕೊರತೆ ನೀಗಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಬೇಕಾದರೆ ಸರ್ಕಾರದ ಯಂತ್ರ ಕೆಲಸ ಮಾಡಬೇಕು. ಮಂಡ್ಯ ಭಾಗದಲ್ಲಿ ಕೇವಲ ಭಾವನಾತ್ಮಕವಾಗಿ ಗೆಲ್ಲಲು ಸಾಧ್ಯವಿಲ್ಲ. ಆದರೆ, ಅಲ್ಲಿ ಅಭಿವೃದ್ಧಿ ಮೂಲಕ ಗೆಲುವು ಸಾಧಿಸಬೇಕು. ರಾಜಕೀಯ ಎಂದರೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ, ಸರ್ಕಾರದ ಆಡಳಿತ ಯಂತ್ರ ಗಟ್ಟಿಯಾಗಿರಬೇಕು’ ಎಂದರು.
 

Follow Us:
Download App:
  • android
  • ios