Asianet Suvarna News Asianet Suvarna News

30 ಸಾವಿರ ಮತಗಳ ಅಂತರದಿಂದ ಸಿಂದಗಿಯಲ್ಲಿ ಕಾಂಗ್ರೆಸ್‌ ಗೆಲುವು

  • ಬಿಜೆಪಿಯವರಿಗೆ ಸುಳ್ಳು ಹೇಳಿ ಮೋಸ ಮಾಡುವುದು ಮಾತ್ರ ಗೊತ್ತು
  •  ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ 30 ಸಾವಿರ ಮತಗಳ ಅಂತರದಿಂದ ಗೆಲುವು 
Congress will win in Sindagi Says DK Shivakumar snr
Author
Bengaluru, First Published Oct 18, 2021, 7:55 AM IST
  • Facebook
  • Twitter
  • Whatsapp

 ವಿಜ​ಯ​ಪು​ರ (ಅ.18):  ಬಿಜೆಪಿಯವರಿಗೆ (BjP) ಸುಳ್ಳು ಹೇಳಿ ಮೋಸ ಮಾಡುವುದು ಮಾತ್ರ ಗೊತ್ತು ಎಂದು ಆರೋಪಿಸಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar), ಸಿಂದಗಿ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್‌ (Congress) ಅಭ್ಯರ್ಥಿ ಅಶೋಕ ಮನಗೂಳಿ (Ashok Managuli) 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಹೇಳಿದ್ದಾರೆ.

ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಪರವಾಗಿ ಆಲಮೇಲ ಪಟ್ಟಣದಲ್ಲಿ ತೆರೆದ ವಾಹನದಲ್ಲಿ (Vehicle) ಮೆರವಣಿಗೆ ನಡೆಸಿ ಭರ್ಜರಿ ಪ್ರಚಾರ ಮಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವನತಿ ಪ್ರಾರಂಭವಾಗಿದೆ. ಬಿಜೆಪಿಯವರಿಗೆ ಬರಿ ಸುಳ್ಳು ಹೇಳುವುದು ಮಾತ್ರ ಗೊತ್ತು. ಅವರು ಬರಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.

'ಅವರದ್ದೇ ಪಕ್ಷದಿಂದ ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಬಹಿರಂಗ'

ಇದರಿಂದ ಜನರು ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಈಗ ನಡೆಯುವ ಉಪಚುನಾವಣೆಯಲ್ಲಿ (By election) ಜನರು ನಮ್ಮ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ ಎಂದರು. ಎಲ್ಲಾ ಜಾತಿ ಧರ್ಮ ಒಂದೇ. ನಮಗೆ ಯಾವುದೇ ಜಾತಿ-ಧರ್ಮ ಇಲ್ಲ. ನಮ್ಮ ಜಾತಿ ಎಂದರೆ ಕಾಂಗ್ರೆಸ್‌. ನೀತಿಯ ಮೇಲೆ ನಮ್ಮ ಪಕ್ಷ ನಿಂತಿದೆ. ಈ ಬಾರಿ ನಮಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟಿಲ (SR patil), ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre), ಶಾಸಕ ಶಿವಾನಂದ ಪಾಟೀಲ, ಯಶಂತರಾಯಗೌಡ ಪಾಟಿಲ, ಅಜಯಸಿಂಗ, ಅಭ್ಯರ್ಥಿ ಅಶೋಕ ಮನಗೂಳಿ ಇತ​ರರು ಇದ್ದ​ರು.

ಗೆಲ್ಲಲು ಜೆಡಿಎಸ್‌ನಿಂದಲೂ ಪ್ಲಾನ್

 

ಸಿಂದಗಿ (Sindagi) ಕ್ಷೇತ್ರವನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಜೆಡಿಎಸ್‌ (JDS) ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಸಹಪಾಠಿಯಾಗಿದ್ದ ದಿವಂಗತ ಎಂ.ಸಿ.ಮನಗೂಳಿ (MC Managuli) ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರಕ್ಕೆ ನಾನೂ ಸೇವೆ ಸಲ್ಲಿಸಿದ್ದೇನೆ. ಸಿಂದಗಿ ಕ್ಷೇತ್ರ ಉಳಿಸಿಕೊಳ್ಳಲು 9 ದಿನ ಇಲ್ಲಿಯೇ ಇದ್ದು ಗೆಲ್ಲಲು ಶ್ರಮಿಸಲಾಗುವುದು. ನನ್ನ ರಾಜಕೀಯ (Politics) ಜೀವನದಲ್ಲಿ ಜೀವನದ ಕೊನೆಯ ಘಟ್ಟದಲ್ಲಿ ಈ ಚುನಾವಣೆಯನ್ನು (Election) ಗೆಲ್ಲಲು ದೃಢವಾದ ಹೆಜ್ಜೆ ಇಡಲಾಗುವುದು. ಎಲ್ಲರ ಸಹಕಾರದಿಂದ ಜೆಡಿಎಸ್‌ (JDS) ಅಭ್ಯರ್ಥಿ ಗೆಲ್ಲಿಸಲು ಶ್ರಮ ಪಡಲಾಗುವುದು ಎಂದು ಹೇಳಿದರು.

ನಿಮ್ಮ ತಂದೆ ಕೂಡ ವಿಪಕ್ಷ ನಾಯಕರಾಗಿದ್ರು, ಅದು ಪುಟಗೋಸಿನಾ? ಎಚ್‌ಡಿಕೆಗೆ ಸಿದ್ದು ಗುದ್ದು

ಒಮ್ಮತದ ಅಭ್ಯರ್ಥಿ ಕಣಕ್ಕೆ:  ಎರಡು ದಿನ ಚರ್ಚೆ ನಡೆಸಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ. ಸಾರ್ವಜನಿಕ ಭಾಷಣಕ್ಕಷ್ಟೇ ಸೀಮಿತವಾಗದೆ ಗ್ರಾಮಗಳಿಗೆ ತೆರಳಿ ರೈತರು (Farmers), ಮಹಿಳೆಯರು, ಯುವ ಜನತೆಗೆ (Youths) ಮನವರಿಕೆ ಮಾಡುವ ಮೂಲಕ ಜೆಡಿಎಸ್‌ (JDS) ಗೆಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನನ್ನ ಜೀವನದ ಕೊನೆಯ ಘಟ್ಟದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ. ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ಹೇಳಿದರು.

Follow Us:
Download App:
  • android
  • ios