Asianet Suvarna News Asianet Suvarna News

ಎರಡೂ ಉಪಸಮರದಲ್ಲಿ ಕೈಗೇ ಜಯದ ಭವಿಷ್ಯ

  •  ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಬಿಜೆಪಿಗೆ ಏಕೆ ಮತ ನೀಡಬೇಕೆಂದು ಪ್ರಶ್ನಿಸುತ್ತಿದ್ದಾರೆ
  •  ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಬಿಜೆಪಿಗೆ ಏಕೆ ಮತ ನೀಡಬೇಕೆಂದು ಪ್ರಶ್ನಿಸುತ್ತಿದ್ದಾರೆ
Congress will win in 2 constituency By election says Saleem ahmed snr
Author
Bengaluru, First Published Oct 16, 2021, 10:37 AM IST

 ಬೆಂಗಳೂರು (ಅ.16):  ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಬಿಜೆಪಿಗೆ (BJP) ಏಕೆ ಮತ ನೀಡಬೇಕೆಂದು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಜನಾಕ್ರೋಶ ರೂಪುಗೊಂಡಿದೆ. ಹೀಗಾಗಿ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ (By Election) ಕಾಂಗ್ರೆಸ್‌ (congress) ಗೆಲ್ಲಲಿದೆ ಎಂದು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸಲೀಂ ಅಹಮದ್‌ (Saleem Ahmed) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ (congress) ಗೆಲ್ಲಲಿದೆ. ಬಿಜೆಪಿಗೆ (BJP) ಏಕೆ ಮತ ನೀಡಬೇಕು ಎಂದು ಜನ ಪ್ರಶ್ನಿಸುತ್ತಿದ್ದಾರೆ. 55 ರು. ಇದ್ದ ಪೆಟ್ರೋಲ್ (Petrol) ಬೆಲೆ 108 ರು. ಮಾಡಿದ್ದಕ್ಕಾ? 50 ರು. ಇದ್ದ ಡೀಸೆಲ್ (Diesel) 100 ರು. ಮಾಡಿರುವುದಕ್ಕಾ? ಕಪ್ಪುಹಣ ತಂದು ಪ್ರತಿಯೊಂದು ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳಿದ್ದಕ್ಕಾ? ಎಂದು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಮತ ಕೇಳಲು ಬಿಜೆಪಿ ಪಕ್ಷದವರೇ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಹಾನಗಲ್‌ ಬೈ ಎಲೆಕ್ಷನ್: ಬಿಜೆಪಿಯಲ್ಲಿನ ಬಂಡಾಯ ಶಮನ, ಕಾಂಗ್ರೆಸ್‌ಗೆ ನಿರಾಸೆ

ಜನಾಕ್ರೋಶ ಯಾತ್ರೆ:  ನಾಲ್ವರು ಕೇಂದ್ರ ಸಚಿವರು ಕಳೆದ ತಿಂಗಳು ಜನಾಶೀರ್ವಾದ ಯಾತ್ರೆ ಮಾಡಿದ್ದರು. ಅದರ ಬದಲು ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಕ್ಷಮೆ ಕೋರುವ ಯಾತ್ರೆ ಮಾಡಬೇಕಿತ್ತು. ಜನ ಇಂದು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬೆಲೆ ಏರಿಕೆ (Price ), ಭ್ರಷ್ಟಾಚಾರ (Corruption), ಸರ್ಕಾರದ ವೈಫಲ್ಯಗಳಿಂದಾಗಿ ಜನ ಕಾಂಗ್ರೆಸ್‌ಗೆ (Congress) ಮತ ಹಾಕಲಿದ್ದಾರೆ. ಈ ಮೂಲಕ ಜನಾಕ್ರೋಶ ಯಾತ್ರೆ ಮಾಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರ ಮನೆ ಮಾತಾಗಿದೆ:

ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧದ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ (Saleem) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ(BJP) ಶಾಸಕರುಗಳೇ (MLA) ತಮ್ಮದು 30% ಸರ್ಕಾರ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಉತ್ತರ ನೀಡಬೇಕು. ಬಿಜೆಪಿ ಭ್ರಷ್ಟಾಚಾರ ಮನೆ ಮಾತಾಗಿದೆ. ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿದರೋ? ಅಥವಾ ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಸಂಸ್ಕೃತಿಯನ್ನು ಮುಂದುವರಿಸಿದ್ದಾರೋ? ಉತ್ತರಿಸಬೇಕು ಎಂದು ಆಗ್ರಹಿಸಿದರು.

ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ​ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್!

ಆ ಸಲೀಂ ನಾನಲ್ಲ: ಸಲೀಂ ಅಹಮದ್‌ ಸ್ಪಷ್ಟನೆ

‘ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ಅವರು ಡಿ.ಕೆ. ಶಿವಕುಮಾರ್‌ (DK shivakumar) ಅವರ ವಿರುದ್ಧ ಮಾತನಾಡಿರುವ ವಿವಾದಾತ್ಮಕ ವಿಡಿಯೋ ವಿಚಾರದಲ್ಲಿ ನನ್ನ ಹೆಸರು ತಳಕು ಹಾಕಲಾಗುತ್ತಿದೆ. ಆ ಸಲೀಂ ನಾನಲ್ಲ. ಅದು ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ. ಆದರೆ, ಕೆಲ ಮಾಧ್ಯಮಗಳು ಆ ಹೇಳಿಕೆ ನೀಡಿದ್ದು ಕಾರ್ಯಾಧ್ಯಕ್ಷ ಸಲೀಂ ಎಂದು ವರದಿ ಮಾಡಿದ್ದರಿಂದ ಗೊಂದಲ ನಿರ್ಮಾಣವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios