ಬೆಂಗಳೂರು (ನ.13):  ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಮಹಿಳಾ ಸದಸ್ಯೆಯರನ್ನು ಎಳೆದಾಡಿ ದೌರ್ಜನ್ಯ ನಡೆಸಿರುವುದರ ವಿರುದ್ಧ ಕಾಂಗ್ರೆಸ್‌ ಉಗ್ರ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಮಹಾಲಿಂಗಪುರ ಘಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಮಹಿಳಾ ಸದಸ್ಯೆಯರ ಮೇಲೆ ಸಿದ್ದು ಸವದಿ ಮತ್ತು ಅವರ ಬೆಂಬಲಿಗರು ಎಳೆದಾಡಿ ಹಲ್ಲೆ ಮಾಡಿದ್ದಾರೆ. 

ಮಹಿಳೆ ಜೊತೆ ಅನುಚಿತ ವರ್ತನೆ; ಹಳೆ ವಿಡಿಯೋ ಹರಿಬಿಟ್ಟು ಕಾಂಗ್ರೆಸ್‌ಗೆ ಠಕ್ಕರ್ ನೀಡಿದ ಬಿಜೆಪಿ

ಒಬ್ಬ ಶಾಸಕನಾಗಿ ಮಹಿಳೆಯರ ಮೇಲೆ ಈ ರೀತಿ ದೌರ್ಜನ್ಯ, ಗೂಂಡಾಗಿರಿ ನಡೆಸಿರುವುದು ಎಷ್ಟುಸರಿ. ಕಾಂಗ್ರೆಸ್‌ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿಯವರು ತಾವು ಬಹಳ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ಇದೇನಾ ಬಿಜೆಪಿಯವರ ಸಂಸ್ಕೃತಿ, ಇದನ್ನೇನಾ ತಮ್ಮ ಶಾಸಕರಿಗೆ ಕಲಿಸಿಕೊಟ್ಟಿರುವುದು?’ ಎಂದು ತರಾಟೆಗೆ ತೆಗೆದುಕೊಂಡರು.