ದಕ್ಷಿಣ ಕನ್ನಡ: ಜನಾರ್ದನ ಪೂಜಾರಿ ಪರಮಶಿಷ್ಯನಿಗೆ ಕಾಂಗ್ರೆಸ್ ಟಿಕೆಟ್?

 ಮುಂಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಮಹತ್ತರವಾದ ಬದಲಾವಣೆಗಳಾಗಲಿದ್ದು. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಪ್ತನಿಗೆ ಟಿಕೆಟ್ ನೀಡುವ ಕುರಿತು ಚಿಂತನೆ ನಡೆಸಿದೆ.

Congress thinking of giving ticket to Janardhan poojari relative at dakshina kannada rav

ಮಂಗಳೂರು (ಏ.3) : ಮುಂಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಮಹತ್ತರವಾದ ಬದಲಾವಣೆಗಳಾಗಲಿದ್ದು. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಪ್ತನಿಗೆ ಟಿಕೆಟ್ ನೀಡುವ ಕುರಿತು ಚಿಂತನೆ ನಡೆಸಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಪ್ತ ಬಿಲ್ಲವ ಮುಖಂಡ ಪದ್ಮರಾಜ್ ಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ ದಟ್ಟವಾಗಿದೆ. ಟಿಕೆಟ್ ಗೆ ಅರ್ಜಿ ಹಾಕದಿದ್ದರೂ ಪದ್ಮರಾಜ್ ಗೆ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಮುಂಬರುವ ಚುನಾವನೆಗೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪದ್ಮರಾಜ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ..

ದಕ್ಷಿಣ ಕನ್ನಡದಲ್ಲಿ ಬಿಲ್ಲವರ ಜನಸಂಖ್ಯೆ ಅಧಿಕವಿದೆ. ಬಿಲ್ಲವ ಸಮುದಾಯಕ್ಕೆ ಮೂರು ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಸದ್ಯ ಘೋಷಿಸಿದ ಐದು ಕ್ಷೇತ್ರಗಳ ಪೈಕಿ ಬೆಳ್ತಂಗಡಿಯಲ್ಲಷ್ಟೇ ಬಿಲ್ಲವ ನಾಯಕ ರಕ್ಷಿತ್ ಶಿವರಾಂ(Rakshit shivaram) ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ ಘೋಷಣೆಯಾಗದ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಲ್ಲವ ಅಭ್ಯರ್ಥಿಗೆ ಟಿಕೆಟ್ ನೀಡಲಿದ್ದು, ಕ್ರೈಸ್ತರಿಗೆ ಮೀಸಲಾಗಿದ್ದ ಮಂಗಳೂರು ದಕ್ಷಿಣದಲ್ಲಿ ಬಿಲ್ಲವ ನಾಯಕ ಪದ್ಮರಾಜ್ ಗೆ ಟಿಕೆಟ್  ನೀಡುವ ಸಾಧ್ಯತೆಯಿದೆ.

 ಜನಾರ್ದನ್ ಪೂಜಾರಿ(janardan poojary) ಆಪ್ತ, ಹಾಗೂ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ, ನ್ಯಾಯವಾದಿ ಆಗಿರೋ ಪದ್ಮರಾಜ್‌. ಪದ್ಮರಾಜ್‌ಗೆ ಟಿಕೆಟ್ ನೀಡುವ ವಿಚಾರ ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ನಡುವೆ ಜೆ.ಆರ್.ಲೋಬೋ ಮತ್ತು ಐವನ್ ಡಿಸೋಜಾ ಕೂಡ  ದಕ್ಷಿಣ ಕ್ಷೇತ್ರ(Dakshina kannada Assembly constituency)ದ ಚುನಾವಣಾ ಆಕಾಂಕ್ಷಿಗಳಾಗಿದ್ದಾರೆ 

ಕಾಂಗ್ರೆಸ್ ಸದಸ್ಯತ್ವ ಹೊಂದಿಲ್ಲದ  ಪದ್ಮರಾಜ್!

ಜನಾರ್ದನ ಪೂಜಾರಿ ಪರಮಾಪ್ತ ಶಿಷ್ಯ ಎಂದೇ ಗುರುತಿಸಿಕೊಂಡಿರೋ ಪದ್ಮರಾಜ್ ಕಾಂಗ್ರೆಸ್ ಸದಸ್ಯತ್ವ ಹೊಂದಿರದ ಮತ್ತು ಟಿಕೆಟ್ ಗೆ ಅರ್ಜಿ ಹಾಕದಿದ್ದರೂ ಪದ್ಮರಾಜ್  ಕಡೆ ಕಾಂಗ್ರೆಸ್ ಒಲವು ಏಕೆಂದರೆ ಚುನಾವಣೆಯಲ್ಲಿ ಬಿಲ್ಲವ ಸಮಾಜವೇ ನಿರ್ಣಾಯಕ. ಅಲ್ಲದೆ ಬಿಲ್ಲವ ಸಮುದಾಯದ ಪ್ರಬಲ ನಾಯಕ ಎಂದೇ ಗುರುತಿಸಿಕೊಂಡಿರುವ ಪದ್ಮರಾಜ್. ಸುಮಾರು 40-50 ಸಾವಿರ ಬಿಲ್ಲವ ವೋಟ್ ಬ್ಯಾಂಕ್ ಹೊಂದಿರೋ ಮಂಗಳೂರು ದಕ್ಷಿಣ ಕ್ಷೇತ್ರ. ಹೀಗಾಗಿ ಗೆಲ್ಲುವ ಕುದರೆಗೆ ಟಿಕೆಟ್ ಎಂಬ  ಲೆಕ್ಕಾಚಾರದಲ್ಲಿ ಕಾಂಗ್ರೆಸ್
ಪದ್ಮರಾಜ್ ಟಿಕೆಟ್ ನೀಡಲು ಚಿಂತನೆ ನಡೆಸಿರುವ ಕಾಂಗ್ರೆಸ್. ಒಟ್ಟಿನಲ್ಲಿ ದಕ್ಷಿಣ ಕನ್ನಡ ರಾಜಕೀಯದಲ್ಲಿಈ ಬಾರಿ ಮಹತ್ವದ ಬದಲಾವಣೆಗಳಾಗುದಂತೂ ದಿಟ

Latest Videos
Follow Us:
Download App:
  • android
  • ios