ಹುಬ್ಬಳ್ಳಿ, (ಫೆ.28): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರಲ್ಲಿ ಜನರಿಗೆ ಪಂಗನಾಮ ಹಾಕಿದ ಹುಬ್ಬಳ್ಳಿಯ ಕಾಂಗ್ರೆಸ್ ನಾಯಕಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

 ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಡಿಕೆ ಶಿವಕುಮಾರ್ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇನೆ ಎಂದು ಪೂರ್ಣಿಮಾ ಅವರು ಜನರನ್ನು ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಪಂಗನಾಮ ಹಾಕಿ ಪರಾರಿಯಾಗಿಯಾಗಿದ್ದಾರೆ. 35ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಸೈಟ್ ಕೊಡಿಸುವ ನೆಪದಲ್ಲಿ 30 ಕ್ಕೂ ಹೆಚ್ಚು ಮಂದಿಗೆ ಕೈ ನಾಯಕಿಯಿಂದ ವಂಚನೆ

ತನಗೆ 10 ಸಾವಿರ ರೂ. ನೀಡಿದರೆ ಸಾಲ ಕೊಡಿಸುವೆ ಎಂದು ನಂಬಿಸಿ ವಂಚಿಸುತ್ತಿದ್ದ ಪೂರ್ಣಿಮಾ ವಿರುದ್ಧ ಮೋಸ ಹೋದವರು ಹಳೆ ಹಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ, ಪೂರ್ಣಿಮಾ ಅವರು ಪರಾರಿಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

ಪೂರ್ಣಿಮಾ ಕೇವಲ ಡಿಕೆಶಿ ಹೆಸರು ಮಾತ್ರವೇ ಅಲ್ಲದೆ ಶಾಸಕರಾದ ಪ್ರಕಾಶ್ ಅಬ್ಬಯ್ಯ ಹೆಸರು ಬಳಸಿ ಸಹ ವಂಚಿಸಿದ್ದರು ಎನ್ನಲಾಗಿದ್ದು "ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡಿದ್ದೇನೆ, ನನಗೆ 10 ಸಾವಿರ ನೀಡಿದರೆ ಡಿಕೆಶಿ ಅವರ ಕಪ್ಪು ಹಣದಿಂದ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇನೆ ಎಂದು ಪೂರ್ಣಿಮಾ ಜನರಿಗೆ ನಂಬಿಸುತ್ತಿದ್ದರು ಎಂದು ತಿಳಿದುಬಂದಿದೆ.