Lok Sabha Election 2024: ಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗ, ಬೊಮ್ಮಾಯಿ

ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಭಾಗ ಆಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ. ಆದರೆ, ಈ ಬಾರಿ ಈ ಪ್ರಮಾಣ ಜಾಸ್ತಿಯಾಗಿದೆ: ಮಾಜಿ ಸಿಎಂ ಬೊಮ್ಮಾಯಿ 

Congress Split After Lok Sabha Election 2024 says Haveri BJP Candidate Basavaraj Bommai grg

ಹಾವೇರಿ(ಮಾ.31):  ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೆ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. 

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಭಾಗ ಆಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದರು. ಕಾಂಗ್ರೆಸ್‌ನಲ್ಲಿ ಮಂತ್ರಿಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ. ಆದರೆ, ಈ ಬಾರಿ ಈ ಪ್ರಮಾಣ ಜಾಸ್ತಿಯಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿ ಅಯೋಮಯ: ಮಾಜಿ ಸಿಎಂ ಬೊಮ್ಮಾಯಿ

ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ನವರು ಸುಮಾರು ಹತ್ತು ಹನ್ನೆರಡು ಜನ ಮಂತ್ರಿಗಳಿಗೆ ಹೇಳಿದ್ದರು. ಆದರೆ, ಅವರಿಗೆ ಆರಿಸಿ ಬರುವ ವಿಶ್ವಾಸ ಇರಲಿಲ್ಲ, ಹಾಗಾದರೆ ನೀವೇ ಅಭ್ಯರ್ಥಿಯನ್ನು ಕೊಡಿ ಅಂದಾಗ ಅನಿವಾರ್ಯವಾಗಿ ಅವರು ತಮ್ಮ ಮಕ್ಕಳು, ಅಣ್ಣ-ತಮ್ಮಂದಿರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios