Prajadhwani yatre: ನಾಳೆ ಹೊಸದುರ್ಗಕ್ಕೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ: ಶಾಸಕ ಬಿ.ಜಿ.ಗೋವಿಂದಪ್ಪ
ಮತದಾರರ ಮನಃ ಪರಿವರ್ತನೆ ಮಾಡಿ, ಕಾಂಗ್ರೆಸ್ ಪರ ಮತ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಹೊಸದುರ್ಗದಲ್ಲಿ ಫೆ.9ರ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಯಾಲಕ್ಕಪ್ಪನಹಟ್ಟಿಸಮೀಪದ ಲೇಪಾಕ್ಷಿ ವೃತ್ತದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಹೇಳಿದರು.
ಹೊಸದುರ್ಗ (ಫೆ.8) : ಮತದಾರರ ಮನಃ ಪರಿವರ್ತನೆ ಮಾಡಿ, ಕಾಂಗ್ರೆಸ್ ಪರ ಮತ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಹೊಸದುರ್ಗದಲ್ಲಿ ಫೆ.9ರ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಯಾಲಕ್ಕಪ್ಪನಹಟ್ಟಿಸಮೀಪದ ಲೇಪಾಕ್ಷಿ ವೃತ್ತದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿಯೂ ಪ್ರಜಾಧ್ವನಿ ಯಾತ್ರೆಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿದೆ. ಡಿ.ಕೆ ಶಿವಕುಮಾರ್ ನೇತೃತ್ವದ ತಂಡ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡಿದ್ದು, ಹೊಸದುರ್ಗಕ್ಕೆ ಫೆ.9ರಂದು ಬರಲಿದೆ ಎಂದರು.
Assembly election: ಕುಮಾರಸ್ವಾಮಿ ವೆಸ್ಟೆಂಡ್‌ನಲ್ಲಿ ಕುಳಿತುಕೊಂಡೇ ಅಧಿಕಾರ ಕಳ್ಕೊಂಡ್ರು: ಸಿದ್ದರಾಮಯ್ಯ ವಾಗ್ದಾಳಿ
ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಮುಂದಿನ ಚುನಾವಣೆಯಲ್ಲಿ ಪಕ್ಷದ ಚುನಾವಣೆಯ ಪ್ರಣಾಳಿಕೆಯನ್ನು ಜನರಿಗೆ ತಿಳಿಸಲಾಗುವುದು. ಅಲ್ಲದೆ ತಾಲೂಕಿನ 75 ಸಾವಿರ ಕುಟುಂಬಗಳಿಗೆ ಗೃಹ ಲಕ್ಷ್ಮಿ, ಗೃಹ ಭಾಗ್ಯ ಯೋಜನೆಗಳ ಗ್ಯಾರೆಂಟಿ ಕಾರ್ಡ್‌ಗಳನ್ನು ವಿತರಿಸಿ ಕುಟುಂಬ ಸದಸ್ಯರ ಸಹಿ ಪಡೆದು ಪಕ್ಷದ ಕಚೇರಿಗೆ ಕಳಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ 100 ಬಸ್ ಸೇರಿದಂತೆ ಇತರೆ ವಾಹನಗಳ ಮೂಲಕ 10 ಸಾವಿರ ಜನರನ್ನು ಸೇರಿಸಲಾಗುವುದು ಬರುವ ಎಲ್ಲಾ ಜನರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಕಾರಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮರ್, ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ರಾಜ್ಯ ನಾಯಕರು,ಜಿಲ್ಲಾ ನಾಯಕರು, ತಾಲೂಕಿನ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಪದ್ಮನಾಭ, ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕೆಪಿಸಿಸಿ ಸದಸ್ಯ ಎಂ.ಪಿ ಶಂಕರ್, ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಮತ್ತಿತರರು ಹಾಜರಿದ್ದರು.
ಭದ್ರಾ ಯೋಜನೆ ನಿಲ್ಲಲು ಕಾರಣವೇನು ಎಂದು ಶಾಸಕರೇ ಹೇಳಲಿ
ಭದ್ರಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಟೆಂಡರ್ ಬಗ್ಗೆ ಶಾಸಕ ಗೂಳಿಹಟ್ಟಿಶೇಖರ್ ಮಾಡಿರುವ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಶಾಸಕ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕ ಗೂಳಿಹಟ್ಟಿತಾಲೂಕಿನಲ್ಲಿ ಭದ್ರಾಯೋಜನೆ ನಿಲ್ಲಲು ಕಾರಣವೇನು ಎಂಬುದನ್ನು ಹೇಳಲಿ. ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆಗೆ ಗುತ್ತಿಗೆದಾರರು ನಡೆಸುತ್ತಿದ್ದ ಕಾಮಗಾರಿಯನ್ನು ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ತಡೆದವರು ಯಾರು? ಎಂದು ಪ್ರಶ್ನಿಸಿದ ಮಾಜಿ ಶಾಸಕರು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಅಮಿತ್ ಶಾ ಅವರಿಂದಲೂ ಶಾಸಕರಿಗೆ ಪೋನ್‌ಕರೆ ಬಂದಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗೆಗಿನ ಸತ್ಯಸತ್ಯತೆಯನ್ನುಅವರ ಪಕ್ಷದವರೇ ತಿಳಿಸಿಬೇಕಿದೆ ಎಂದರು.
22 ಸಾವಿರ ಕೋಟಿ ಅಕ್ರಮ ನಡೆದಿದ್ದರೆ ಅನುದಾನ ಎಷ್ಟುಬಿಡುಗಡೆಯಾಗಿದೆ. ಯೋಜನೆಯ ಮೊತ್ತವೇ 23 ಸಾವಿರ ಕೋಟಿ, ಹಾಗಾದರೆ ಈಗ ಬಿಡುಗಡೆಯಾಗಿರುವ ಅನುದಾನ ಎಷ್ಟು? ಎಷ್ಟುಕಾಮಗಾರಿಯಾಗಿದೆ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಡಿಪಿಆರ್ ಎಷ್ಟು? ಈ ರೀತಿ ಆಡಳಿತ ಪಕ್ಷದ ಶಾಸಕರೇ ಅಸಂಬದ್ದವಾಗಿ ಮಾಡಿರುವ ಆರೋಪಕ್ಕೆ ಅವರ ಪಕ್ಷದ ನಾಯಕರೇ ಸ್ಪಷ್ಟನೆ ನೀಡಬೇಕು ಎಂದರು.
Prajadhwani yatre: ಡಬಲ್ ಇಂಜಿನ್ ಸರ್ಕಾರದಿಂದ ಅಚ್ಛೇದಿನ್ ಇಲ್ಲ: ಡಿಕೆಶಿ ವಾಗ್ದಾಳಿ
ಹನುಮನ ಕುಂಬೆ ಹಾಗೂ ಬೈರಪ್ಪನ ಬೆಟ್ಟಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳೀ ಬಂದಿದೆ. ಈಗಾಗಲೇ ಹನುಮನ ಕೊಂಬೆ ಬೆಟ್ಟಕ್ಕೆ ಮಾಡಲಾಗಿರುವ ರಸ್ತೆಯ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಲ್ಲಿ ಅಪಸ್ವರವಿದೆ. ರಸ್ತೆ ಮಾಡಿರುವ ಹಿಂದೆ ನಿಧಿ ಶೋಧನೆಯ ಉದ್ದೇಶ ಎಂಬ ಅನುಮಾನ ಸಾರ್ವಜನಿಕರಲ್ಲಿ ಕೇಳೀ ಬರುತ್ತಿದೆ ಇವುಗಳಿಗೆ ಶಾಸಕರೇ ಉತ್ತರಿಸಬೇಕಿದೆ ಎಂದರು.