*  ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧ *  ಇಳಿವಯಸ್ಸಿನಲ್ಲಿ ಪಾದಯಾತ್ರೆ ಮಾಡುವುದು ಬೇಡವೆಂದು ಡಿಕೆಶಿ, ಸಿದ್ದುಗೆ ಹೇಳಿದ್ದೇನೆ*  ಅಧಿಕಾರದ ದುರಾಸೆಗಾಗಿ ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ 

ರಾಯಚೂರು(ಮಾ.01): ಮೇಕೆದಾಟು ಯೋಜನೆಗಾಗಿ(Mekedatu) ಕಾಂಗ್ರೆಸ್‌ ಪಕ್ಷದ ಮುಖಂಡರು ಪುನರಾರಂಭಿಸಿರುವ ಪಾದಯಾತ್ರೆ ಬಾಹುಬಲಿ-2(Baahubali 2) ಸಿನಿಮಾದಂತಿದ್ದು, ಜರನ್ನು ಸೆಳೆಯುವುದಕ್ಕಾಗಿಯೇ ಇದರ ಹಿಂದೆ ಅಡಗಿರುವ ಉದ್ದೇಶವಾಗಿದೆವಾಗಿದೆ ಎಂದು ಪಂಚಾಯತ್‌ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwappa) ಆರೋಪಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ, ಇಳಿವಯಸ್ಸಿನಲ್ಲಿ ಪಾದಯಾತ್ರೆ ಮಾಡುವುದು ಬೇಡವೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar), ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರಿಗೆ ಈ ಮುಂಚೆಯೇ ಸಲೆ ನೀಡಿದ್ದೇನೆ. ಆದರೂ ಸಹ ಅವರುಗಳು ಅಧಿಕಾರದ ದುರಾಸೆಗಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Karnataka Politics: ಸಿದ್ದು ಮತೀಯವಾದಿ, ಕೇಸರಿ ಕಂಡ್ರೆ ಉರಿದುಬೀಳ್ತಾರೆ: ಸಿ.ಟಿ.ರವಿ

’ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದ ಪರಿಣಾಮ ಕಾಂಗ್ರೆಸ್‌(Congress) ಈಗ ಮುಳುಗುವ ಹಡಗಾಗಿದೆ‘. ಡಿಕೆಶಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕನಸಿನ ಲೋಕದಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೇ(BJP) ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಶಿವಮೊಗ್ಗ ಹರ್ಷ ಕುಟುಂಬಕ್ಕೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಬೇಕು ಎಂದು ಹರಿಪ್ರಸಾದ್‌ ಅವರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷವು ಸೂಚಿಸಿದರೆ ಸ್ಥಾನ ಬಿಟ್ಟುಕೊಡಲು ಸಿದ್ಧವಾಗಿದ್ದೇನೆ ಎಂದರು.

ಹಿಜಾಬ್‌ ಧರಿಸುವ ವಿಚಾರ ಕುರಿತು ನಡೆಯುತ್ತಿರುವ ವಿವಾದದಿಂದ ಮುಸ್ಲಿಂ(Muslim) ಸಮುದಾಯದ ವೋಟು ಪಡೆಯುವ ಕಾಂಗ್ರೆಸ್‌ ನಾಯಕರಿದ್ದಾರೆ. ಯು.ಟಿ.ಖಾದರ್‌ ಮತ್ತು ಕೆಲವು ಶಾಸಕರು ಹಿಜಾಬ್‌ ವಿವಾದದ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಕೈವಾಡವಿದ್ದು, ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಆದರೆ ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿಯೇ ಎರಡು ಗುಂಪುಗಳಿವೆ. ಮುಸ್ಲಿಂ ಸಮುದಾಯದ ಮೇಲೆ ಪ್ರೀತಿಯಿದ್ದವರು ಸಿ.ಎಂ.ಇಬ್ರಾಹಿಂ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷ ಸ್ಥಾನವನ್ನು ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಈಶ್ವ​ರಪ್ಪ ಸಾರ್ವ​ಜ​ನಿಕ ಜೀವ​ನ​ದಲ್ಲಿ ಇರಲು ನಾಲಾ​ಯಕ್‌: ಸಿದ್ದರಾಮಯ್ಯ

ರಾಮ​ನ​ಗರ: ಸಚಿವ ಕೆ.ಎಸ್‌.ಈ​ಶ್ವ​ರಪ್ಪ ಸಾರ್ವ​ಜ​ನಿಕ ಜೀವ​ನ​ದಲ್ಲಿ ಇರಲು ನಾಲಾ​ಯಕ್‌ ಎಂದು ವಿಪಕ್ಷ ನಾಯಕ ಸಿದ್ದ​ರಾ​ಮಯ್ಯ ಕಿಡಿ​ಕಾ​ರಿ​ದ್ದಾರೆ. ಮೇಕೆದಾಟು ಯೋಜನೆಗಾಗಿ ನಡೆಯುತ್ತಿರುವ ಪಾದ​ಯಾತ್ರೆ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನನ್ನ ಬಳಿ ಈಶ್ವ​ರ​ಪ್ಪನ ಹೆಸರು ಹೇಳ​ಬೇಡಿ. ಅವನು ಸಾರ್ವ​ಜ​ನಿಕ ಜೀವ​ನ​ದಲ್ಲಿ ಇರೋ​ದಕ್ಕೆ ನಾಲಾ​ಯಕ್‌. ಅವನ ಮಾತು​ಗ​ಳಿಗೆ ನಾನು ಪ್ರತಿ​ಕ್ರಿಯೆ ನೀಡು​ವು​ದಿಲ್ಲ ಎಂದು ಏಕವಚನದಲ್ಲಿ ಹರಿಹಾಯ್ದರು.

Karnataka Budget: ಎಸ್ಸಿ, ಎಸ್ಟಿಗೆ ಸೂಕ್ತ ಅನುದಾನ ಕೊಡದಿದ್ದರೆ ಹೋರಾಟ: ಸಿದ್ದು

ಪಾದಯಾತ್ರೆ ಐದು ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ನಾಳೆ ಬೆಂಗಳೂರಿನಲ್ಲಿ ಸಾಗ​ಲಿದೆ. ಈಗಾ​ಗಲೇ ಬಿಬಿಎಂಪಿ ಕಮಿಷನರ್‌ಗೆ ಪಾದಯಾತ್ರೆ ಬಗ್ಗೆ ತಿಳಿಸಿದ್ದೇವೆ. ಯಾವುದೇ ಹೋರಾಟ ಮಾಡಿದಾಗ ಅದು ಪ್ರಚಾರ ಆಗುತ್ತದೆ ಎಂದು ಹೇಳಿದರು. ಬಿಜೆಪಿಯವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ನಿಜ ಹೇಳುತ್ತಿದ್ದೇವೆ. ಬಿಜೆಪಿ ನಾಯ​ಕರು ಕೂಡಲೇ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ​ಕೊ​ಡಿ​ಸುವ ಕೆಲಸ ಮಾಡಲಿ ಎಂದು ಸಿದ್ದ​ರಾಮಯ್ಯ ತಿಳಿ​ಸಿ​ದರು.

ಜಾತಿ ಗಣತಿ ಅಂಗೀಕರಿಸಿ ಮುಂದಿನ ಚುನಾವಣೆ ನಡೆಸಿ

ಸುಪ್ರೀಂಕೋರ್ಟ್‌ (Supreme Court) ಆದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ನ್ಯಾಯಯುತ ರಾಜಕೀಯ ಮೀಸಲಾತಿಗೆ ಅಪಾಯ ಎದುರಾಗಲಿದೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಪ್ರತಿಪಕ್ಷಗಳ ಜತೆ ಚರ್ಚೆ ನಡೆಸಿ ನಮ್ಮ ಅವಧಿಯಲ್ಲಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) (caste census) ವರದಿ ಆಧಾರದ ಮೇಲೆ ಮೀಸಲಾತಿ ನೀಡಿ ಚುನಾವಣೆ (Election) ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.