ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ? ಇದರ ವಿರುದ್ಧ ನಿಮ್ಮ ಕ್ರಮವೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
ಬೆಂಗಳೂರು (ಅ.31): ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ? ಇದರ ವಿರುದ್ಧ ನಿಮ್ಮ ಕ್ರಮವೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ. ಧಾರವಾಡದ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಾಸಕ ಅರವಿಂದ್ ಬೆಲ್ಲದ್ ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯನ್ನ ಅವಮಾನಿಸಿದ ಕಾರಣ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಅವರ ದುರ್ವರ್ತನೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬುದು ಮಹಿಳೆ ಬರೆದ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿದೆ. ಬೊಮ್ಮಾಯಿ ಅವರೇ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಿರಾ ಅಥವಾ ಸಿದ್ದು ಸವದಿ ಪ್ರಕರಣದಂತೆ ಮುಚ್ಚಿ ಹಾಕುವಿರಾ? ಸ್ತ್ರೀ ಪೀಡಕರ ಸಾಮ್ರಾಜ್ಯವಾಗಿರುವ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಗೌರವವಿಲ್ಲವೇಕೆ? ಇದರ ವಿರುದ್ದ ನಿಮ್ಮ ಕ್ರಮವೇನು ಎಂದು ಕೇಳಿದೆ. ‘ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ, ಸಚಿವ ವಿ.ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ, ಶಾಸಕ ಅರವಿಂದ್ ಬೆಲ್ಲದ್‌ರಿಂದ ಮಹಿಳೆಗೆ ನಿಂದನೆ, ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ?’ ಎಂದು ಕುಟುಕಿದೆ.
ಇನ್‌ಸ್ಪೆಕ್ಟರ್ ನಂದೀಶ್ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ
ಮತ್ತೊಂದು ಟ್ವೀಟ್‌ನಲ್ಲಿ ರಸ್ತೆಗುಂಡಿ ಸಮಸ್ಯೆಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ‘ಶೇ.40 ರಷ್ಟುಕಮಿಷನ್ ಸರ್ಕಾರದ ರಸ್ತೆ ಗುಂಡಿಗೆ ಒಂದೇ ತಿಂಗಳಲ್ಲಿ ಮೂರನೇ ಬಲಿಯಾಗಿದೆ. ನಿರಂತರ ಸಾವುಗಳಾದರೂ, ಹೈಕೋರ್ಚ್ ಪದೇ ಪದೇ ಚಾಟಿ ಬೀಸಿದರೂ ಎಚ್ಚರವಾಗದ ಈ ಸರ್ಕಾರದ್ದು ಎಮ್ಮೆಗಿಂತಲೂ ದಪ್ಪ ಚರ್ಮ! ಸಿಎಂ, ಸಚಿವರುಗಳು ಮೈಕ್ ಮುಂದೆ ನಿಂತು ಗಂಡಸ್ತನ, ದಮ್ಮು, ತಾಕತ್ತನ್ನು ಮಾತುಗಳಲ್ಲಿ ತೋರುವ ಪೌರುಷ ಆಡಳಿತದಲ್ಲಿ ಇಲ್ಲದಾಗಿರುವುದೇಕೆ’ ಎಂದು ಛೇಡಿಸಿದೆ.
ಕಾಂಗ್ರೆಸ್‌ನ್ನು ಇನ್ನಷ್ಟುಬಲಿಷ್ಠಗೊಳಿಸಿ: ಮುಂದಿನ ದಿನಮಾನಗಳಲ್ಲಿ ಕನಕಗಿರಿ ಕ್ಷೇತ್ರದಲ್ಲಿನ ಬಹಳಷ್ಟುಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು. ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರ ನಿವಾಸದಲ್ಲಿ ನಡೆದ ಸೌಹಾರ್ದ ಭೇಟಿ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿಯವರು ಪಕ್ಷ ಬಿಟ್ಟಿಲ್ಲ. ನಮ್ಮ ಅವರ ಮಧ್ಯೆ ಸಣ್ಣಪುಟ್ಟಮನಸ್ತಾಪಗಳಾಗಿದ್ದವು. ಅದನ್ನೆಲ್ಲ ಬದಿಗೊತ್ತಿ ಈಗ ಮತ್ತೆ ಒಂದಾಗಿದ್ದೇವೆ. ನಮ್ಮಿಂದ ಸಣ್ಣಪುಟ್ಟತಪ್ಪುಗಳಾಗಿದ್ದರೆ ಕಾರ್ಯಕರ್ತರೆ ಕ್ಷಮಿಸಬೇಕು ಎಂದರು.
ಬೆಂಗಳೂರು ನಿರ್ಮಾಣಕ್ಕೆ ಅಂಕಿತ ಹಾಕಿದ ನಾಡಪ್ರಭು ಕೆಂಪೇಗೌಡರು: ಸಚಿವ ಗೋಪಾಲಯ್ಯ
ಸಿದ್ದಾಪುರ, ಶ್ರೀರಾಮನಗರ, ಹೇರೂರು, ನವಲಿ ಮತ್ತು ಕನಕಗಿರಿ ಭಾಗದಲ್ಲಿನ ಬಿಜೆಪಿ ಅನೇಕ ಮುಖಂಡರು ಈಗಾಗಲೇ ಎರಡ್ಮೂರು ಬಾರಿ ಕಾಂಗ್ರೆಸ್ ಸೇರುವ ಕುರಿತು ಚಿಂತನ ಮಂಥನ ನಡೆಸಿದ್ದಾರೆ. ಇನ್ಮುಂದೆ ಹಂತ ಹಂತವಾಗಿ ಎಲ್ಲರೂ ಪಕ್ಷ ಸೇರುವು ಮೂಲಕ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸಲು ಸಹಕಾರಿಯಾಗುತ್ತದೆ. ಪಕ್ಷವನ್ನು ಮತ್ತಷ್ಟುಗಟ್ಟಿಗೊಳಿಸಲು ಕಾರ್ಯಕರ್ತರು ಸಿದ್ಧವಾಗಬೇಕೆಂದು ತಿಳಿಸಿದರು. ಇನ್ನು ಸಿದ್ದಾಪುರ ಹೋಬಳಿ ನದಿ ಭಾಗದಲ್ಲಿ ಜನ ಸಾಮಾನ್ಯರೂ ಈ ನಾಲ್ಕೂವರೆ ವರ್ಷದ ಬಿಜೆಪಿ ಸರ್ಕಾರದ ಆಡಳಿತಕ್ಕೆ ರೋಸಿ ಹೋಗಿದ್ದಾರೆ. ನದಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಿಗಳಿಗೆ ಒಂದು ಗುಣಮಟ್ಟದ ರಸ್ತೆ ಮಾಡುವಲ್ಲಿ ಶಾಸಕ ದಢೇಸೂಗೂರು ಮರೆತಿದ್ದಾರೆ. ಹೀಗೆ ಅನೇಕ ಬೇಜವಾಬ್ದಾರಿತನವನ್ನು ಹಾಲಿ ಶಾಸಕ ದಢೇಸೂಗೂರು ತೋರಿದ್ದರಿಂದ ಜನ ಬೇಸತ್ತಿದ್ದಾರೆ ಎಂದರು.
